ಕೃಷಿ ಕಾಲೇಜು ಸ್ಥಾಪನೆಗೆ ಧಾರವಾಡ ಕೃಷಿ ವಿವಿ ನಿಯೋಗ ಬೇಟಿ ಪರಿಶೀಲನೆ

Pratibha Boi
ಕೃಷಿ ಕಾಲೇಜು ಸ್ಥಾಪನೆಗೆ ಧಾರವಾಡ ಕೃಷಿ ವಿವಿ ನಿಯೋಗ ಬೇಟಿ ಪರಿಶೀಲನೆ
WhatsApp Group Join Now
Telegram Group Join Now

ಅಥಣಿ: ರೈತ ಬಾಂಧವರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೃಷಿ ಕಾಲೇಜ್ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಸರಕಾರದಿಂದ ಶೀಘ್ರ ಕೃಷಿ ಕಾಲೇಜು ಸ್ಥಾಪನೆಗೆ ಮಂಜೂರಾತಿ ದೊರೆಯಲಿದೆ. ರೈತರ ಮಕ್ಕಳ ಉನ್ನತ ಶಿಕ್ಷಣದ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರ
ತಾಲೂಕಿನ ಕೊಕಟನೂರ ಗ್ರಾಮದ ಬಳಿ ಗುರುವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯ ನಿಯೋಗ ಸ್ಥಳಕ್ಕೆ ಬೇಟಿ ನೀಡಿ ಕೃಷಿ ಕಾಲೇಜನ್ನು ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದರು. ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ಸಮಾಲೋಚನೆ ನಡೆಸಿ ಕೃಷಿ ಕಾಲೇಜು ಸ್ಥಾಪನೆಗೆ ಯೋಗ್ಯ ಸ್ಥಳವನ್ನು ನಿಗದಿ ಮಾಡಲು ಸಮಾಲೋಚನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಇನ್ನು ಕೆಲವೇ ದಿನಗಳಲ್ಲಿ ಸರ್ಕಾರದ ಮುಂದೆ ಇರುವ ಪ್ರಸ್ತಾವನೆಯನ್ನು ಅನುಮೋದಿಸಿ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಬಳಿಯ ಸರ್ಕಾರಿ ಸ್ಥಳದಲ್ಲಿ ಕೃಷಿ ಕಾಲೇಜಿಗೆ ಒಪ್ಪಿಗೆ ಪಡೆದು ಶೀಘ್ರದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವದು ಎಂದು ಹೇಳಿದರು
ಈ ವೇಳೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಕುಲಸಚಿವ ಡಾ. ವಿ ಕೆ ದೇಶಪಾಂಡೆ. ಡಾ. ವಿ ಐ ಬೆಣಗಿ ವಿಶ್ರಾಂತ ಕುಲಪತಿಗಳು ಧಾರವಾಡ, ಡಾ ಜೆ ಹೆಚ್ ಕುಲಕರ್ಣಿ ವಿಶ್ರಾಂತ್ ಕುಲಸಚಿವರು ಧಾರವಾಡ ಹಾಗೂ ಬೆಳಗಾವಿ ಜಂಟಿ ಕೃಷಿ ನಿರ್ದೇಶಕರ ಎಸ್ ಬಿ ಕೋಳಿಕಾರ, ತಹಸೀಲ್ದಾರ, ಸಿದ್ದರಾಯ್ ಬೋಸಗಿ, ಅಥಣಿ ಕೃಷಿ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದರ, ಸೇರಿದಂತೆ ಹಲವು ಜನ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article