ಬಳ್ಳಾರಿ, ಫೆ.09: ತುಂಗಭದ್ರ ಜಲಾಶಯಕ್ಕೆ ಹೊಸದಾಗಿ 33 ಗೇಟುಗಳ ಅಳವಡಿಕೆ ಕಾಮಗಾರಿ ಫೆ.28 ರ ಒಳಗೆ ಶೇ 20 ರಷ್ಟು ಕಾಮಗಾರಿ ಆಗಬೇಕು. ಇಲ್ಲದಿದ್ದರೆ ಡ್ಯಾಂ ಬಳಿಯೇ ಮಾ.1 ರಿಂದ ಧರಣಿ ಸತ್ಯಾಗ್ರಹ ಮಾಡುವುದಾಗಿ ಹೇಳಿದರು. ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ಇಂದು ನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ. ಡ್ಯಾಂ ನಿರ್ಮಾಣ ಮಾಡಿ 75 ವರ್ಷ ಕಳೆದಿದ್ದು ಅಂದು ಅಳವಡಿಸಿದ ಗೇಟುಗಳು ಶಕ್ತಿಯನ್ನು ಕಳೆದುಕೊಂಡಿದ್ದು. ಕಳೆದ ವರ್ಷ ಗೇಟ್ ನಂ 19 ನೀರಿನ ಒತ್ತಡಕ್ಕೆ ಮುರಿದು ಬಿದ್ದಿತ್ತು. ಆನಂತರ ಜಲಾಶಯ ತಜ್ಞ ಕನ್ನಯ್ಯ ನಾಯ್ಡು ಪರಿಶೀಲಿಸಿದ ನಂತರ ಎಲ್ಲ 33 ಗೇಟುಗಳನ್ನು ಹೊಸದಾಗಿ ಅಳವಡಿಸಲು ನಿರ್ಧರಿಸಿ. ಈ ವರ್ಷ ನೀರಿದ್ದರೂ ರೈತರು ಬೇಸಿಗೆ ಬೆಳೆ ಕಳೆದುಕೊಂಡು ಗೇಟುಗಳ ಅಳವಡಿಕೆಗೆ ಸಿದ್ದರಾಗಿದ್ದಾರೆ.
ಆದರೆ ಗೇಟುಗಳ ಅಳವಡಿಸುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಹೀಗಾದರೆ ಡ್ಯಾಂಗೆ ಮತ್ತೆ ನೀರು ಬಂದರೂ ಕಮಗಾರಿ ಮುಗಿಯಲ್ಲ. ಈ ವರಗಿನ ಪ್ರಗತಿ ನಿರಾಶಾದಾಯಕವಾಗಿದೆ. ಕೂಡಲೇ ಸರ್ಕಾರ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಮುಂದಾಗಬೇಕು. ಈ ತಿಂಗಳ ಅಂತ್ಯದೊಳಗೆ ಶೇ 20 ರಷ್ಟು ಕಾಮಗಾರಿ ಆಗಬೇಕು ಇಲ್ಲದಿದ್ದರೆ ತಾವು ಜಲಾಶಯದ ಮುಂದೆ ಕಾಮಗಾರಿ ಮುಗಿಯುವ ವರೆಗೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಹೇಳಿದರು.
ಸೋಲು ಗ್ಯಾರೆಂಟಿ:
ಪಂಚಾಯ್ತಿ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ನಲ್ಲಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಅಧುನಿಕ ತಂತ್ರಜ್ಞಾನದ ಯುಗದಲ್ಲೂ ಮತ ಯಂತ್ರಗಳು ಇರುವಾಗ ಮತ್ತೆ ಬ್ಯಾಲೆಟ್ ಮೊರೆ ಹೋಗುವುದು ಸರಿಯೇ, ಅವರು ಯಾವ ರೀತಿಯಾದರೂ ಚುನಾವಣೆ ಮಾಡಲಿ ಸೋಲು ಅವರಿಗೆ ಕಟ್ಟಿಟ್ಟ ಬುತ್ತಿ ಎಂದರು.
ಆಯುಷ್ಯ ಕಡಿಮೆ:
ಮುಖ್ಯ ಮಂತ್ರಿ ಸ್ಥಾನದ ಬದಲಾವಣೆ ಬಗ್ಗೆ ಯತೀಂದ್ರ ಅವರೇ ಹೈಕಮಾಂಡ್ ಎಂದು ಡಿಕೆಶಿ ಅವರು ಹೇಳಿದ್ದಾರೆ. ಏನಾಗುತ್ತೆ ಎಂದು ಕಾಯುತ್ತಿದೆ. ಏನೋ ಆಗುತ್ತೆ ಎಂಬುದಂತು ಖಚಿತ ಎಂದರು. ಸರ್ಕಾರದ ಆಯುಷ್ಯ ಅಂತೂ ಕಡಿಮೆ ಇದೆ ಎಂದರು.
ಉತ್ತಮ ಬಜೆಟ್
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಹೇ ಸ್ಪೀಡ್ ರೈಲು ಘೋಷಣೆ ಮಾಡಿರುವುದು ಎರೆಡು ನಗರಗಳ ಐಟಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ತೆರಿಗೆ ವಿಷಯದಲ್ಲಿ ಕೇಂದ್ರ ಸರಕಾರ ಶೇ 69.049 ತೆರಿಗೆ ಪಾಲು ರಾಜ್ಯಕ್ಕೆ ನೀಡುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ವಸತಿ ಶಿಕ್ಷಣ ಶಾಲೆ ಘೋಷಣೆ ಮಾಡಿದೆ. ಶ್ರೀಗಂಧ ತೆಂಗು ಅಭಿವೃದ್ಧಿಗೆ ಕರವಾಳಿ ಭಾಗದಲ್ಲಿ ಆಮೆ ಸಂತತಿ ಅಭಿವೃದ್ಧಿ ನೆರವು ಘೋಷಣೆ ಮಾಡಿದೆ. ಎಲ್ಲಾ ರೀತಿಯಲ್ಲಿ ಉತ್ತಮ ಬಜೆಟ್ ಆಗಿದೆ ಎಂದರು.
ತನಿಖೆಗೆ ಆಗ್ರಹ:
ನಗರದ ಹೊರವಲಯದ ಗೋದಾಮಿನಲ್ಲಿ ನಾಲ್ಕು ಸಾವಿರ ಚೀಲ ಯೂರಿಯಾದ ಅಕ್ರಮ ಸಂಗ್ರಹ ಪತ್ತೆಯಾಗಿದ್ದು. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಎಸ್ ಐಟಿ ತನಿಖೆಯಾಗಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇಲ್ಲದಿದ್ದರೆ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂಬುದನ್ನು ಮುಖ್ಯ ಮಂತ್ರಿಗಳು ಅರಿಯಬೇಕು ಎಂದು ಶ್ರೀರಾಮಯಲು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಬುಡಾ ಮಾಜಿ ಅಧ್ಯಕ್ಷ ಪಿ.ಪಾಲಣ್ಣ, ತಿಮ್ಮಪ್ಪ, ಪಾಲಿಕೆ ಸದಸ್ಯ ಕೆ.ಹನುಮಂತಪ್ಪ, ಕೆ.ಎಸ್.ಅಶೋಕ್ ಕುಮಾರ್ ಮೊದಲಾದವರು ಇದ್ದರು.


