ಬೆಳಗಾವಿ.ನಗರದಲ್ಲಿ ಬಿಟ್ಟು ಬಿಡಲಾರದ ಭಾರಿ ಮಳೆ ಲೆಕ್ಕಿಸದೆ ಮಂಗಳವಾರದಂದು ಸಾಂಬಾಜಿ ವೃತ್ತದಿಂದ ಆರಂಭವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಮತ್ತು ಹಿಂದೂ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟಿಸಲಾಯಿತು.

ಧರ್ಮನಾಥ ವೃತ್ತದಲ್ಲಿ ಅಪಾರ ಜನ ಮಳೆಯನ್ನು ಲೆಕ್ಕಿಸದೆ ಪಾಲ್ಗೊಂಡು ಸನಾತನ ಧರ್ಮ ಹಿಂದೂ ಸಮಾಜದ ವಿರುದ್ಧ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ಮತ್ತು ಅದಕ್ಕೆ ಪ್ರೋತ್ಸಾಹ ನೀಡಿ ತನಿಖೆ ಮಾಡುತ್ತಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಮೌನ ಮೆರವಣಿಗೆ ಅತೀ ಉತ್ಸಾಹದಿಂದ ನಡೆಯಿತು.

ಈ ಸಭೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ಮಠಗಳ ಮಠದ ಮಹಾಸ್ವಾಮಿಗಳು ಪಾಲ್ಗೊಂಡು ಧರ್ಮಸ್ಥಳ ಅಪಮಾನ ಮಾಡುವ ವ್ಯಕ್ತಿಗಳನ್ನು ಶಿಕ್ಷೆ ಕೊಡಲು ಸರ್ಕಾರಕ್ಕೆ ಮನವಿ ಮಾಡಿದರು.
ಈ ಮೌನ ಮೆರವಣಿಗೆಯಲ್ಲಿ ಕೆ ಎಲ್ ಇ ಕಾರ್ಯದ್ಯಕ್ಷ ಡಾ. ಪ್ರಭಾಕರ ಕೋರೆ, ಶಾಸಕ ಅಭಯ ಪಾಟೀಲ, ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ,ಸಂಜಯ ಪಾಟೀಲ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಪಾಟೀಲ,ಡಾ. ರವಿ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ , ಮುರುಘೆoದ್ರಗೌಡ ಪಾಟೀಲ, ಬಿಜೆಪಿ ಹಿರಿಯ, ಕಿರಿಯ ಮುಖಂಡರು, ಎಲ್ಲ ಹಿಂದೂ ಸಮಾಜದ ಜನತೆ ಪಾಲ್ಗೊಂಡು ಮೌನ ಮೆರವಣಿಗೆ ನಡೆಸಿ ಶ್ರೀ ಕ್ಷೇತ್ರ ಧರ್ಮಸ್ಥಳಡಾ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ವಿರುದ್ಧ ಅಪಾಧನೆ ಮಾಡುತ್ತಿರುವ ವ್ಯಕ್ತಿಗಳಿಗೆ ಹಾಗೂ ಅವರಿಗೆ ಪ್ರೋತ್ಸಾಹ ನೀಡಿ ಅವರನ್ನು ಬಂದಿಸದೆ ಮೃದು ಧೋರಣೆ ತೋರಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು.
