ಗ್ರಾಮಾಭಿವೃದ್ಧಿಗೆ  ಧರ್ಮಸ್ಥಳ  ಕೊಡುಗೆ ಅಪಾರ: ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು

Ravi Talawar
ಗ್ರಾಮಾಭಿವೃದ್ಧಿಗೆ  ಧರ್ಮಸ್ಥಳ  ಕೊಡುಗೆ ಅಪಾರ: ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು
WhatsApp Group Join Now
Telegram Group Join Now

ಬೆಳಗಾವಿ: ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗಡೆ ಹಾಗೂ ಅವರ ಧರ್ಮಪತ್ನಿ ಮಾತೃ ಶ್ರೀ ಡಾ.ಹೇಮಾವತಿ ವಿ.ಹೆಗಡೆ ಅವರ ಕೊಡುಗೆ ಅಪಾರ.  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮಗಳು ಬಹಳಷ್ಟು ಅಭಿವೃದ್ಧಿಯಾಗಿವೆ ಎಂದು  ತಪೋರತ್ನ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಹೊನಗಾ ವಲಯದಲ್ಲಿ ಶ್ರೀ  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಲಾದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ,  ಬ್ಯಾಂಕ್‌ ಆಪ್‌ ಮಹಾರಾಷ್ಟ್ರ  ಹಾಗೂ  ಪ್ರಗತಿ ಬಂಧು ಸ್ವ-ಸಹಾಯ  ಸಂಘಗಳ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸುಜ್ಞಾನ ನಿಧಿ ಶಿಷ್ಯ ವೇತನ ವಿತರಣೆ ಕಾರ್ಯಕ್ರವನ್ನು ಉದ್ಘಾಟಿಸಿ,  ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಎಂಬ ಈ ಹೆಸರಿನಲ್ಲಿ ಶಕ್ತಿ ಇದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಹೆಣ್ಣು ಗೌರವಯುತ ಹಾಗೂ ಸ್ವಾಭಿಮಾನತೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಿದ್ದಾರೆ. ದೇಶಾದ್ಯಂತ ಇಂತಹ ಕೆಲಸ ಆಗಬೇಕು.  ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಗ್ರಾಮದ ಜನರಿಗೆ ಶುಭವಾಗುವುದು ಎಂದು ಹಾರೈಸಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು,ನ್ಯಾಯವಾದಿ ಜಿ.ಆರ್.ಸೊನೇರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಗಳು ಪ್ರಗತಿಯಾಗಿವೆ.  ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳು ಮುಖ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯುತ್ತವೆ, ಗ್ರಾಮಗಳಲ್ಲಿನ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ  ಒತ್ತು ನೀಡಲಾಗಿದೆ.  ಹಿಂದೂ ದೇವಾಲಯಗಳಿಗೆ ಅನುದಾನ ನೀಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಗ್ರಾಮಗಳ ಅಭಿವೃದ್ಧಿ ಜೊತೆಗೆ ಮಹಿಳೆಯರು ಆರ್ಥಿಕ ಸದೃಢವಾಗಿ ಬೆಳೆಯಲು ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ನಿರ್ದೇಶಕರಾದ  ಸತೀಶ ನಾಯ್ಕ  ಮಾತನಾಡಿ,ಸಮುದಾಯಗಳ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕಷ್ಟು ಯೋಜನೆಗಳಿವೆ, ಮಹಿಳೆಯರು ಸೇರಿದಂತೆ ಸಮಾಜದ ಜನರು ಸದ್ಬಳಿಕೆ ಮಾಡಿಕೊಂಡು ಪ್ರಗತಿ ಹೊಂದಬೇಕು.   ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ಜ್ಞಾನದೀಪ ಶಿಕ್ಷಕರ ಯೊಜನೆಯ ಕೆಲಸಗಳು ಸಹಕಾರಗೊಳಲಿವೆ.ಗ್ರಾಮಗಳ ಅಭಿವೃದ್ಧಿಯ ಕಾರ್ಯಗಳು ನಿರಂತರವಾಗಿ ಸಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಗೌಡಪ್ಪ ಶಿವನಗೌಡ ಪಾಟೀಲ  ವಹಿಸಿದರು,  ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು,  ನ್ಯಾಯವಾದಿ ಜಿ.ಆರ್.ಸೊನೇರ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ  ವಿನೋದ್ ಜಗಜಂಪಿ,  ಯಲ್ಲಪ್ಪ ಆನಂದಾಚೆ, ಪುಂಡಲೀಕ ಪಾಟೀಲ, ಮಹೇಶ್ ಆನಂದಾಚೆ ಯೋಜನಾಧಿಕಾರಿಗಳು ರಾಮ. ಎಮ್‌ ಸ್ವಾಗತಿಸಿದರು, ವಲಯದ ಮೇಲ್ವಿಚಾರಕಿ ಮೀನಾಕ್ಷಿ ನಿರೂಪಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article