ಮಾತೃತ್ವ ಮಹತ್ವನ್ನು, ಸಾರಿ ಸಂಸ್ಕಾರ ನೀಡುತ್ತಿರುವ ಧರ್ಮಸ್ಥಳ ಸಂಘ: ಶ್ರೀಶೈಲಗೌಡ ಪಾಟೀಲ

Pratibha Boi
ಮಾತೃತ್ವ ಮಹತ್ವನ್ನು, ಸಾರಿ ಸಂಸ್ಕಾರ ನೀಡುತ್ತಿರುವ ಧರ್ಮಸ್ಥಳ ಸಂಘ: ಶ್ರೀಶೈಲಗೌಡ ಪಾಟೀಲ
WhatsApp Group Join Now
Telegram Group Join Now

ಮುಧೋಳ:ನ.೨೦., ನಗರದ ಹೇಮರೆಡ್ಡಿ ಕಲ್ಯಾಣ ಮಂಟಪದಲ್ಲಿ ಬುಧವಾರ ದಂದು ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ ಟ್ರಸ್ಟ್ (ರಿ,) ಮತ್ತು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ “ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ” ಹಾಗೂ “ಸಾಧಕ ಮಹಿಳೆಯರಿಗೆ ಸನ್ಮಾನ” ಕಾರ್ಯಕ್ರಮ ಜರುಗಿತು.

ಶ್ರೀಶೈಲಗೌಡ ಪಾಟೀಲ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತೃತ್ವ ಮಹತ್ವನ್ನು, ಸಾರಿ ಸಂಸ್ಕಾರ ನೀಡುತ್ತಿರುವ ಧರ್ಮಸ್ಥಳ ಸಂಘ ರಾಜ್ಯದ ಎಲ್ಲಾ ಸಂಘಗಳಿಗೆ ಮಾದರಿಯಾಗಿದೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರು ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಆಶಯದಂತೆ ಆರ್ಥಿಕ, ಸಾಮಾಜಿಕ, ಸಬಲೀಕರಣದತ್ತ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು ಅವರಿಗೆ ನಿರಂತರ ಶ್ರಮಿಸುತ್ತಿದೆ ಎಂದು ಹೇಳಿದರು.

ಡಾ. ಕ್ರಾಂತಿ ಸೂರ್ಯವಂಶಿ ಮಹಿಳಾ ತಜ್ಞರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮಹಿಳೆಯರನ್ನು ಮೇಲು ಕೀಳು ಎನ್ನುವ ಸಮಾಜದಲ್ಲಿ ಸಮಸಮ ಎನ್ನುವ ಹಾಗೆ ಬದುಕನ್ನು ಕಟ್ಟಿಕೊಳ್ಳಲು. ಆರ್ಥಿಕವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಇವರನ್ನು ಸಶಕ್ತಗೊಳಿಸಿ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಲು ಮಾರ್ಗತೋರವ ಹತ್ತು-ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಪೂಜ್ಯ ಹೆಗ್ಗಡೆ ದಂಪತಿಗಳಿಗೆ ಎ? ಅಭಿನಂದಿಸಿದರು ಕಡಿಮೆ ಎಂದರು.
ಸಾಹಿತಿ ದ್ರಾಕ್ಷಾಯಣಿ ಮಂಡಿ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ವಿ?ಯದ ಕುರಿತು ವಿಚಾರಗೋಷ್ಠಿಯನ್ನು ನಡೆಸಿ, ಮಹಿಳೆಯ ತ್ಯಾಗ ಮತ್ತು ಅವಳ ಪರಿಶ್ರಮದ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ನಿರ್ದೇಶಕ ಚೆನ್ನಕೇಶವ, ವೇಧಿಕೆ ಅಧ್ಯಕ್ಷೆ ಅನ್ನಕ್ಕಾ ಪಲ್ಲೇದ ಕಾರ್ಯಕ್ರಮದ ಕುರಿತು ಮಾತನಾಡಿದರು.
ವೆಂಕಣ್ಣ ಮುಳ್ಳೂರು ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷ, ಹನಮಂತ ತೆಳಗಡೆ ಶೌರ್ಯ ವಿಪತ್ತು ತಂಡದ ಮಾಸ್ಟರ್ ಉಪಸ್ಥಿತರಿದ್ದರು.
ಕೃಷಿ ಮೇಲ್ವಿಚಾರಕ ಪ್ರವೀಣ ಕಾರ್ಯಕ್ರಮ ನಿರ್ವಹಣೆ ಮಾಡಿದರು, ಮುಧೋಳ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ರಾಜು ಎಸ್ ಆಚಾರ್ಯ ಸ್ವಾಗತಿಸಿದರು, ಮುಧೋಳ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಸುವರ್ಣ ನಂದಿಕೋಲಮಠ ವಂದಿಸಿದರು.ಮುಧೊಳ ವಲಯದ ಮೇಲ್ವಿಚಾರಕರಾದ ಶಿವಾನಂದ ಹಾಗೂ ಸುಬ್ರಹ್ಮಣ್ಯ,ಕೇಂದ್ರದ ಸದಸ್ಯರು ಹಾಗೂ ಸಿ ಎಸ್ ಸಿ ಸೇವಾದಾರರು, ಸೇವಾಪ್ರತಿನಿಧಿಗಳು,ಕೇಂದ್ರದ ಸದಸ್ಯರು, ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಾಧಿಕಾರಿಗಳು ಹಾಜರಿದ್ದರು.

WhatsApp Group Join Now
Telegram Group Join Now
Share This Article