ಧರ್ಮಸ್ಥಳ ಸಂಘ ಸಮಾಜ ಸೇವೆ ಮಾಡುತ್ತಿರುವುದು  ಸ್ವಾಗತಾರ್ಹ: ಪಾಲಿಕೆ ಸದಸ್ಯ ಕೆ ಹನುಮಂತಪ್ಪ

Ravi Talawar
ಧರ್ಮಸ್ಥಳ ಸಂಘ ಸಮಾಜ ಸೇವೆ ಮಾಡುತ್ತಿರುವುದು  ಸ್ವಾಗತಾರ್ಹ: ಪಾಲಿಕೆ ಸದಸ್ಯ ಕೆ ಹನುಮಂತಪ್ಪ
WhatsApp Group Join Now
Telegram Group Join Now
ಬಳ್ಳಾರಿ ಜುಲೈ 10. ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೇವಲ ಹಣಕಾಸು ದೂರವನ್ನು ಮಾಡಿದೆ ವೃದ್ಧರಿಗೆ ಅಂಗವಿಕಲರಿಗೆ ಮಾಸಿಕ ಪಿಂಚಣಿ ನೀಡುವುದು, ನಿರ್ಗತಿಕರಿಗೆ ಮನೆ ನಿರ್ಮಿಸಿ ಕೊಡಬಹುದು, ಬಡವರ ಶಿಕ್ಷಣಕ್ಕೆ ಆರ್ಥಿಕ  ನೆರವು ನೀಡುತ್ತಿರುವುದು, ದೇವಸ್ಥಾನ ನಿರ್ಮಾಣಕ್ಕೆ ಧನಸಹಾಯ ಒದಗಿಸುತ್ತಿರುವುದು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ನಡೆಸುತ್ತಾ ಸಮಾಜ ಸೇವೆಯನ್ನು ಮಾಡುತ್ತಿದೆ ಇದು ಅತ್ಯಂತ ಸ್ವಾಗತಾರ್ಹ  ಮತ್ತು ಶ್ಲಾಘನೀಯವಾದ ಕೆಲಸ ಎಂದು  ಮಹಾನಗರ ಪಾಲಿಕೆ 22ನೇ ವಾರ್ಡಿನ ಸದಸ್ಯರಾದ ಕೆ ಹನುಮಂತಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು  ನಗರದ 22ನೇ ವಾರ್ಡ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್  ಬಳ್ಳಾರಿ ಸಿಟಿ ವಲಯದ ಗಾಂಧಿನಗರ  ಕಾರ್ಯಕ್ಷೇತ್ರದ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೃಷ್ಟಿಹೀನ ವಿಕಲಚೇತನರಾದ  ಬಿ ಲಿಂಗಣ್ಣ ಅವರಿಗೆ ಮಾಶಾಸನ ಆದೇಶ ಪ್ರತಿಯನ್ನು ವಿತರಿಸಿ ಮಾತನಾಡಿದರು.
 ಈ ಸಂದರ್ಭದಲ್ಲಿ ಸಂಸ್ಥೆಯ ಒಕ್ಕೂಟದ ಅಧ್ಯಕ್ಷರಾದ ವನಿತಾ,  ವಲಯದ ಮೇಲ್ವಿಚಾರಕ ಸಂಜೀವ್,  ಸಂಘದ ಸದಸ್ಯರು ಆ ಪ್ರದೇಶದ ಮುಖಂಡರು,  ಮಹಿಳಾ ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಆಶಾ ಸ್ಥಳೀಯ ಸೇವಾ ಪ್ರತಿನಿಧಿ ದುರ್ಗಮ್ಮ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಆಶಾ ನಿರೂಪಿಸಿದರು, ಸಂಜೀವ್ ಹೊಂದಿಸಿದ್ದರು.
WhatsApp Group Join Now
Telegram Group Join Now
Share This Article