ಬಳ್ಳಾರಿ,ಜು.22.: ಧರ್ಮಸ್ಥಳದ ಕಾಡಿನಲ್ಲಿ ನೂರಾರು ಮಹಿಳೆಯರ ಮೃತ ದೇಹಗಳ ಅಕ್ರಮ ವಿಲೇವಾರಿ ಕುರಿತು ಸಾಕ್ಷಿದಾರನಾಗಿರುವ ಬಡ ದಲಿತ ವ್ಯಕ್ತಿಗೆ ಭದ್ರತೆ ನೀಡಿ ಪ್ರಕರಣವನ್ನು ಶೀಘ್ರವಾಗಿ ತನಿಖೆ ಮಾಡಿಸುವಂತೆ ಪೃತ್ವಿರಾಜ್ ದೊಡ್ಡಮನೆ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಅವರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.
ಧರ್ಮಸ್ಥಳದ ಸೌಜನ್ಯ ಎಂಬ ಯುವತಿಯ ಮಾನಭಂಗ ಹಾಗೂ ಅತ್ಯ ಕುರಿತು ಹಲವಾರು ವರ್ಷಗಳಿಂದ ನಡೆಯುತ್ತಿರುವ ಹೋರಾಟಗಳ ಹಾಗೂ ನಿಗೂಢ ನಾಪತ್ತೆ ಕೃತ್ಯಗಳ ಹಿನ್ನೆಲೆಯಲ್ಲಿ ಸದರಿ ದೇವಸ್ಥಾನದ ದಲಿತ ಸ್ವಚ್ಛತಾ ಕಾರ್ಮಿಕನು ದೇವಾಲಯದ ಬಲಾಢ್ಯ ಪ್ರಭಾವಿ ಸಿಬ್ಬಂದಿಗಳು ತನಗೆ ಜೀವ ಬೆದರಿಕೆ ಹಾಕಿದ್ದರಿಂದ ಅವರ ಅಪ್ಪಣೆ ಮೇರೆಗೆ ಸುಮಾರು ಎರಡು ದಶಕಗಳಿಂದ ನೂರಾರು ಯುವತಿಯರ ಮತ್ತು ಮಹಿಳೆಯರ ಮೃತ ದೇಹಗಳನ್ನು ತಾನು ಕಾಡಿನಲ್ಲಿ ಅಕ್ರಮವಾಗಿ ಹೂತು ಹಾಕಿರುವುದಾಗಿ ಸಾಕ್ಷಿ ನೀಡಲು ಮುಂದೆ ಬಂದಿರುವುದು (ಸರ್ವವೇದ್ಯ )ಎಲ್ಲರಿಗೂ ತಿಳಿದ ವಿಚಾರ ಈ ಕುರಿತು ಸಾಕ್ಷಿದಾರನಾಗಿರುವ ದಲಿತ ವ್ಯಕ್ತಿ ಧರ್ಮಸ್ಥಳದ ಪೊಲೀಸ್ ಠಾಣೆ ಹಾಗೂ ಬೆಳ್ತಂಗಡಿ ನ್ಯಾಯಾಲಯದಲ್ಲಿ ದೂರು ಹೇಳಿಕೆಗಳನ್ನು ದಾಖಲಿಸಿಕೊಳವುದರಿಂದ ಸರ್ಕಾರವು ಶೀಘ್ರವಾಗಿ ವಿಳಂಬ ಮಾಡದೆ ತನಿಖೆ ನಡೆಸಿ ಈ ಕೊಲೆಗಳ ಹಿಂದೆ ಇರುವ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸುಬೇಕಾಗಿ ಎಂದು ಕರ್ನಾಟಕ ಸಮತ ಸೈನಿಕ ದಳದ ಸಂಘಟನೆಯು ಸರ್ಕಾರವನ್ನು ಆಗ್ರಹಿಸಿದೆ.
೧) ಭೀಮ ಕಾರ್ಮಿಕನು ಆಡಳಿತ ಮಂಡಳಿಯ ಪ್ರಭಾವವ್ಯಕ್ತಿಗಳಿಂದ ಬಂದ ಜೀವ ಬೆದರಿಕೆ ನಿಮಿತ್ತ ನೂರಾರು ಮಹಿಳೆಯರ ಮೃತ ದೇಹಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಿ ಇರುವುದಾಗಿ ಹೇಳಿರುವುದರಿಂದ ಅವನಿಗೂ ಹಾಗೂ ಅವನ ಕುಟುಂಬಕ್ಕೂ ಸೂಕ್ತ ಭದ್ರತೆ ಹಾಗೂ ಕುಟುಂಬದ ನಿರ್ವಹಣೆಗೆ ಆರ್ಥಿಕ ನೆರವು ನೀಡಬೇಕು.
೨) ೨ ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸುಮಾರು ಎರಡು ದಶಕಗಳಿಂದ ಕಾಣೆಯಾಗಿರುವ ಮಹಿಳೆಯರ ಮಿಸ್ಸಿಂಗ್ ಕಂಪ್ಲೇAಟ್ ಕುರಿತು ಮಾಹಿತಿ ಪಡೆದು ದೂರು ನೀಡಿದ ಕುಟುಂಬದ ವರ ಆಓಂ ಮಾದರಿ ಸಂಗ್ರಹಿಸಿ ಇದನ್ನು ಧರ್ಮಸ್ಥಳದ ಕಾಡಿನಲ್ಲಿ ಹೂತು ಹಾಕಿರುವ ಅಸ್ತಿಪಂಜರಗಳ ಆಓಂ ತಾಳೆ ಮಾಡಿ ಆಓಂ ಯೊಂದಿಗೆ ತಾಳೆ ಮಾಡಿ ತನಿಖೆ ಮಾಡಬೇಕು
೩) ೨೦೦೩ ರಂದು ಕಾಣೆಯಾದ ಅನನ್ಯ ಬಟ್ ಎಂಬ ವೈದ್ಯ ಕೀಯ ವಿದ್ಯಾರ್ಥಿನಿಯ ತಾಯಿ ಹಿರಿಯ ನಾಗರಿಕಳಾದ ಸುಜಾತ ಭಟ್ ಇವರ ದೂರಿನ ಕುರಿತು ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೋಮ ಸ್ಥಿತಿಗೆ ದೂಡಿದ ವ್ಯಕ್ತಿಗಳ ಕುರಿತು ತನಿಖೆ ನಡೆಸಬೇಕು.
೪) ಈ ಸಂಬAಧ ಸಾಕ್ಷಿದಾರನು ಭೀಮ ಜುಲೈ ೩ನೇ ತಾರೀಖಿನಂದು ದೂರು ನೀಡಿದ್ದರು ತನಕ್ಕೆ ವೇಗವಾಗಿ ನಡೆಯದೆ ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಅಸಹನೆ ವ್ಯಕ್ತ ಪಡಿಸುತ್ತಿರುವುದರಿಂದ ಸರ್ಕಾರ ಕೂಡಲೇ ಪ್ರಕರಣಗಳ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರ ಓಡಾಟ ಕಾಡಿನಲ್ಲಿ ನಿರ್ಬಂಧಿಸಿ ಕಾವಲು ಪಡೆಯನ್ನು ಗಸ್ಟುಸಿಬ್ಬಂದಿಯನ್ನು ನೇಮಿಸಿ ಸಾಕ್ಷಿ ನಾಶವಾಗದಂತೆ ಕ್ರಮ ವಹಿಸಬೇಕು.
೫) ನಾಡಿನ ಪ್ರಗತಿಪರ ಹೋರಾಟಗಾರರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಂತೆ SIಖಿ ತನಿಕೆಯನ್ನು ನ್ಯಾಯಾಂಗ ಹಾಗೂ ಪೊಲೀಸ್ ಇಲಾಖೆಯ ದಕ್ಷಾಧಿಕಾರಿಗಳಿಂದ ನಿರ್ದಿಷ್ಟ ಕಾಲಮಿತಿಯಲ್ಲಿ ಶೀಘ್ರವಾಗಿ ನಡೆಸಬೇಕು ಎಂದು ಈ ಬೇಡಿಕೆಗಳನ್ನು ಶೀಘ್ರವಾಗಿ ನೆರವೇರಿಸಬೇಕೆಂದು ಕರ್ನಾಟಕ ಸಮತ ಸೈನಿಕ ದಳದ ವಿಭಾಗಿಯ ಕಾರ್ಯ ಅಧ್ಯಕ್ಷ ಏ. ಪೃಥ್ವಿರಾಜ್ ದೊಡ್ಡಮನೆ ಹಾಗೂ ಕರ್ನಾಟಕ ಸಮತ ಸೈನಿಕ ದಳದ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್ ಮತ್ತು ಸಂಡೂರಪ್ಪ ಅಧ್ಯಕ್ಷರು ಮುರಳಿ ಕಲೀಲ್ ಶಾಂತ ಮಹಿಳಾ ಘಟಕ ರಾಜ್ಯ ಅಧ್ಯಕ್ಷ ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀದೇವಿ, ರೋಹಿಣಿ, ಶಾಂತ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ಎಂಪಿ ಕಮಲ ಹಾಗೂ ಪದ್ಮ ದ್ರಾಕ್ಷಿಣಿ ಇದ್ದರು.