ಧರ್ಮಸ್ಥಳ ಬುರುಡೆ ಪ್ರಕರಣ: ವಿಠಲಗೌಡ, ಜಯಂತ್, ಗಿರೀಶ್ ಮಟ್ಟಣ್ಣ, ಪ್ರದೀಪ್ ವಿಚಾರಣೆಗೆ ಹಾಜರ್

Ravi Talawar
ಧರ್ಮಸ್ಥಳ ಬುರುಡೆ ಪ್ರಕರಣ:  ವಿಠಲಗೌಡ, ಜಯಂತ್, ಗಿರೀಶ್ ಮಟ್ಟಣ್ಣ, ಪ್ರದೀಪ್ ವಿಚಾರಣೆಗೆ ಹಾಜರ್
WhatsApp Group Join Now
Telegram Group Join Now

ಬೆಳ್ತಂಗಡಿ: ಬುರುಡೆ ಗ್ಯಾಂಗ್ ಎಸ್ ಐಟಿ ವಿಚಾರಣೆ ದಿನಕಳೆದಂತೆ ತೀವ್ರಗೊಳ್ಳುತ್ತಿದೆ. ಗುರುವಾರದ ವಿಚಾರಣೆಗೆ ಗಿರೀಶ್ ಮಟ್ಟಣ್ಣವರ್ ಹಾಗೂ ಜಯಂತ್ ಟಿ ಆಗಮಿಸಿದ್ದಾರೆ. ಬಳಿಕ ವಿಠಲಗೌಡ ಹಾಗೂ ಪ್ರದೀಪ್ ಗೌಡ ಕೂಡಾ ಆಗಮಿಸಿದರು.

ಆರು ಜನರನ್ನು ನಿರಂತರವಾಗಿ ಎಸ್‌ಐಟಿ ವಿಚಾರಣೆಗೆ ಒಳಪಡಿಸಿದೆ. ಈ ಪೈಕಿ ಯೂಟ್ಯೂಬರ್ ಮನಾಫ್ ಹಾಗೂ ಅಭಿಷೇಕ್ ವಿಚಾರಣೆ ಪೂರ್ಣಗೊಂಡಿದೆ. ಸಿಆರ್ ಪಿಸಿ 161 ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಲಾಗುತ್ತಿದೆ. ಹಲವು ಕಡೆ ಸ್ಥಳ ಮಹಜರು ಕೂಡಾ ಮಾಡಲಾಗ್ತಿದೆ. ನ್ಯಾಯಾಲಯಕ್ಕೆ ಈ ಎವಿಡೆನ್ಸ್ ಕೊಡಲು ಸಾಧ್ಯವಿಲ್ಲ. ಆದರೆ ಇವುಗಳನ್ನು ರೆಕಾರ್ಡ್ ಮಾಡಲಾಗ್ತಿದೆ. ದಾಖಲೆ ಮಾಡಿಕೊಳ್ಳಲಾಗ್ತಿದೆ. ಹೇಳಿಕೆಗಳಲ್ಲಿ ಇರುವ ವೈರುಧ್ಯಗಳನ್ನು ಹುಡುಕುವ ಕೆಲಸ ಮಾಡ್ತಿದೆ. ಗೊಂದಲದ ಹೇಳಿಕೆಗಳ‌ನ್ನು ಕೊಟ್ಟಲ್ಲಿ, ಅದಕ್ಕೆ ದಾಖಲೆಗಳು ಸಿಕ್ಕರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. ಬಂಧನ ಅಥವಾ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ .

ಪ್ರದೀಪ್ , ವಿಠಲ್ ಗೌಡ, ಗಿರೀಶ್ ಮಟ್ಟಣ್ಣವರ್ ಹಾಗೂ ಜಯಂತ್ ಟಿ ವಿಚಾರಣೆ ಮುಂದುವರಿಸಲಾಗಿದೆ. ಮನಾಫ್ 2 ಮೊಬೈಲ್ ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಇದರ ಆಧಾರದಲ್ಲಿ ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
Share This Article