ಬಳ್ಳಾರಿ ಜ. 3 : ಕುಡುತಿನಿ ಮತ್ತು ಸುತ್ತಮುತ್ತಲ ಗ್ರಾಮಗಳ ಮಿತ್ತಲ್ ಕಾರ್ಖಾನೆಗೆ ಭೂಮಿ ಕಳೆದುಕೊಂಡ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 748ನೇ ದಿನಕ್ಕೆ ಕಾಲಿಟ್ಟಿದೆ, ಉಪಚುನಾವಣೆಯಲ್ಲಿ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ ಮೊದಲನೇ ವಾರದಲ್ಲಿ ರೈತರ ಸಭೆಯನ್ನು ನಡೆಸಿ ಪರಿಹಾರ ಒದಗಿಸುತ್ತೇನೆ ಎಂದು ಭರವಸೆಯನ್ನು ನೀಡಿ ಹೋಗಿದ್ದರು, ಆದರೆ ಇಲ್ಲಿಯವರೆಗೆ ನಮ್ಮನ್ನು ಸಭೆಗೆ ಕರೆಯದೆ ದಿನದೊಡುತ್ತಿದ್ದಾರೆ, ಅವರೇ ತಿಳಿಸಿದಂತೆ ಜನವರಿ ಮೊದಲಿನ ವಾರ ರೈತರ ಸಭೆಯನ್ನು ಕರೆಯದೆ ಹೋದಲ್ಲಿ ಸಂಡೂರು ಶಾಸಕರ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು ಬಸವರಾಜ ಎಚ್ಚರಿಸಿದರು.
ಅವರು ಇಂದು ನಗರದ ಪತ್ರಿಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಕೋಟಿ ರೂಪಾಯಿಗಳನ್ನು ನೀಡುವುದು ಬೇಡ ಬದಲಾಗಿ ನಾವು ಅವರಿಗೆ ನೀಡಿದ ಸಲಹೆಯನ್ನು ಪರಿಗಣಿಸಿ ಪರಿಹಾರ ಒದಗಿಸಬಹುದಾಗಿದೆ, ಅದೇನೆಂದರೆ ಕೈಗಾರಿಕೆಗಳನ್ನು ಸ್ಥಾಪಿಸದೆ ಹೋದಲ್ಲಿ ನಮ್ಮಿಂದ ವಶಪಡಿಸಿಕೊಂಡ ಜಮೀನಿನಲ್ಲಿ ಅರ್ಧ ಜಮೀನನ್ನು ವಾಪಸ್ ನೀಡುವುದು ಅಥವಾ ಸರ್ಕಾರ ಈಗಾಗಲೇ ನಿಗದಿಗೊಳಿಸಿರುವಂತೆ 30 ಲಕ್ಷ ರೂಪಾಯಿಗಳಿಗೆ 12 ವರ್ಷ ಬಡ್ಡಿ ಸಮೇತವಾಗಿ ಪರಿಹಾರ ನೀಡುವುದು ಅಥವಾ ಅದೇ ಹಣವನ್ನು ನಮಗೆ ಕಾರ್ಖಾನೆಯಲ್ಲಿ ಸೇರರೂಪದಲ್ಲಿ ನೀಡಬೇಕು ಎಂಬುದು ನಾವು ಸರ್ಕಾರದ ಮುಂದಿಟ್ಟಿದ್ದೇವೆ. ಆದರೆ ಸರ್ಕಾರ ಯಾವುದಕ್ಕೂ ಮುಂದಾಗದೆ ರೈತರ ಜೊತೆ ಮಾತುಕತೆಗೂ ಸಹ ಮುಂದಾಗುತ್ತಿಲ್ಲ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಮತ್ತು ವಿವಿಧ ರೈತ ಸಂಘಗಳು ಸರ್ಕಾರದ ನಡೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಎ ಐ ಟಿ ಯು ಸಿ ಸತ್ಯಬಾಬು, ರೈತರದ ತಿಪ್ಪೇಸ್ವಾಮಿ ಅಂಜಿನಪ್ಪ, ಶಿವರಾಮ ರೆಡ್ಡಿ, ರಮೇಶ್, ಜಂಬಯ್ಯ, ಸೇರಿದಂತೆ ಇತರರಿದ್ದರು