ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ಅವರ ರಾಜೀನಾಮೆಗೆ ಆರೋಗ್ಯ ಸಮಸ್ಯೆ ಕಾರಣವಾದರೂ ಅದಕ್ಕಿಂತ ಆಳವಾದ ಕಾರಣ ಇನ್ನೊಂದಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ವಕ್ತಾರ ಜೈರಾಮ್ ರಮೇಶ್, ಅಧಿವೇಶನದ ಮೊದಲ ದಿನದಂದು ಸೋಮವಾರ ನಡೆದ ಎರಡನೇ ವ್ಯವಹಾರ ಸಲಹಾ ಸಮಿತಿಯಿಂದ ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಕಿರಣ್ ರಿಜಿಜು ಗೈರಾಗಿದ್ದರು. ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4.30 ರ ನಡುವೆ ಏನೋ ಗಂಭೀರ ವಿಚಾರ ಸಂಭವಿಸಿದೆ. ಎರಡನೇ ಬಿಎಸಿಗೆ ಅವರು ಉದ್ದೇಶಪೂರ್ವಕವಾಗಿ ಗೈರುಹಾಜರಾಗಿದ್ದಾರೆ ಎಂದರು.
ಕಾಂಗ್ರೆಸ್ ರಾಜ್ಯಸಭಾ ಸಂಸದ ವಿವೇಕ್ ಥಂಕ್ ಕೂಡ ಧಂಖರ್ ರಾಜಕೀನಾಮೆ ಅನಿರೀಕ್ಷಿತ ಎಂದಿದ್ದಾರೆ. ನಿನ್ನೆ ರಾಜ್ಯಸಭಾ ಕಲಾಪದ ವೇಳೆ ಅವರು ಖುಷಿಯಾಗಿದ್ದಾರೆ. ನಿನ್ನೆಯ ಎರಡು ಮಹಾಭಿಯೋಗ ಗೊತ್ತುವಳಿಗಳನ್ನು (ನ್ಯಾಯಮೂರ್ತಿ ಯಾದವ್ ಮತ್ತು ವರ್ಮಾ) ಧಂಖರ್ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರು ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.