ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಅಡುಗೆ ತಯಾರಿಸಿ ಪ್ರಸಾದ ಸೇವೆಸಲ್ಲಿಸಿದ ಮೇಳಕುಂದಾ ಗ್ರಾಮದ ಭಕ್ತರು

MK HasiruKranti
ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಅಡುಗೆ ತಯಾರಿಸಿ ಪ್ರಸಾದ ಸೇವೆಸಲ್ಲಿಸಿದ ಮೇಳಕುಂದಾ ಗ್ರಾಮದ ಭಕ್ತರು
WhatsApp Group Join Now
Telegram Group Join Now

ಘಟಪ್ರಭಾ: ಸುಮಾರು ೩೦೦ ಕಿ.ಮೀ ದೂರದ ಕಲಬುರ್ಗಿ ತಾಲೂಕಿನ ಮೇಳಕುಂದಾ ಗ್ರಾಮದ ಭೋಗಲಿಂಗೇಶ್ವರ ಪುಣ್ಯಧಾಮದ ೫೦ಕ್ಕೂ ಹೆಚ್ಚು ಭಕ್ತರು ರಾತ್ರಿ ಪೂರ್ತಿ ಪ್ರಯಾಣ ಮಾಡಿ ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಭಕ್ತರಿಗೆ ತಾವೇ ಅಡುಗೆ ತಯಾರಿಸಿ ಪ್ರಸಾದ ಸೇವೆಯನ್ನು ನೀಡಿದರು.
ಮೇಳಕುಂದ ಭೋಗಲಿಂಗೇಶ್ವರ ಪುಣ್ಯಧಾಮದ ಉತ್ತರಾಧಿಕಾರಿಗಳಾಗಿರುವ ಪರಮಪೂಜ್ಯ ಶಿವಕುಮಾರದೇವರು ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರ ಪರಮಶಿಷ್ಯರಾಗಿದ್ದು ಘಟಪ್ರಭಾ ಮಠದಲ್ಲಿ ಇದ್ದುಕೊಂಡು ವಿಧ್ಯಾಭ್ಯಾಸ ಹಾಗೂ ಪೂಜೆ, ಉಪನಿಷ್ಯತ್ತಗಳನ್ನು ಕಲಿತು ಅವರ ಆಶೀರ್ವಾದದಿಂದಲೆ ಕಲಬುರ್ಗಿಯ ಭೋಗಲಿಂಗೇಶ್ವರ ಪುಣ್ಯಧಾಮದ ಉತ್ತರಾಧಿಕಾರಿಯಾಗಿದ್ದು ಶಿವಕುಮಾರದೇವರು ತನ್ನೆಲ್ಲಾ ಏಳಿಗೆಗೆ, ಅಭಿವೃದ್ಧಿಗೆ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳೆ ಕಾರಣವೆಂದು ತಿಳಿದುಕೊಂಡು ಅವರ ಮಾರ್ಗದರ್ಶನದಲ್ಲಿಯೆ ನಡೆದುಕೊಳ್ಳುತ್ತಿದ್ದು ಗುರುಗಳ ಮೇಲಿನ ಭಕ್ತಿಗಾಗಿ ಶ್ರೀಮಠದ ಜಾತ್ರೆಯಲ್ಲಿ ಒಂದು ದಿನದ ಪ್ರಸಾದ ವ್ಯವಸ್ಥೆ ಮಾಡಲು ಕಲಬುರ್ಗಿಯಿಂದಲೆ ಸುಮಾರು ೫ ಸಾವಿರ ರೊಟ್ಟಿ, ತರಕಾರಿ, ಕಾಳು ಎಲ್ಲಾವನ್ನು ತಂದು ತಾವೇ ಮುಂದೆ ನಿಂತು ರುಚಿಕರವಾದ ಅಡುಗೆಯನ್ನು ತಯಾರಿಸಿ ಘಟಪ್ರಭಾ ಭಕ್ತರಿಗೆ ನೀಡಿದ್ದಾರೆ. ತಮ್ಮ ಶಿಷ್ಯನ ಪ್ರಸಾದ ಸೇವೆಗೆ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರು ಭಾವಕರಾಗಿದ್ದು ಇಂತಹ ಸಾಧಕದೇವರು ನಾನು ಪಡೆದಿರುವುದೇ ಪುಣ್ಯವೆಂದು ಭಾವಿಸುತ್ತೇನೆಂದು ಹೇಳಿದರು.

WhatsApp Group Join Now
Telegram Group Join Now
Share This Article