ಬೆಳಗಾವಿ: ತಂತ್ರಜ್ಞಾನವು ಅಭೂತಪೂರ್ವ ವೇಗದಲ್ಲಿ ಮುಂದುವರಿಯುತ್ತಿರುವ ಇಂದಿನ ವೇಗವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ದೇಶದ ಅಭಿವೃದ್ಧಿ, ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯನ್ನಾಗಿಸಿ ಬೆಳಯಲು ಸಾಧ್ಯ ಎಂದು ಶಿಕ್ಷಣ ನಿಖಾಯಿ ಕ್ರೆಸ್ಟ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಮೋದ ಕುಮಾರ ಎಂ.ಪಿ.ಎಂ ಅವರು ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಶಿಕ್ಷಣ ನಿಖಾಯ ವತಿಯಿಂದ ಆಯೋಜಿಸಲಾದ ಕುವೆಂಪು ಸಭಾಂಗಣದಲ್ಲಿ ಬಿ.ಇಡಿ ಮಹಾವಿದ್ಯಾಲಯಗಳ ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿಗಳಿಗೆ ಎರಡು ದಿನಗಳ ಪಿ.ಎಂ ಉಷಾ (ಮೇರು) ಸಾಫ್ಟ್ ಕಂಪೊನೆಂಟ್ 22 ಅಡಿಯಲ್ಲಿ ಪದವಿಪೂರ್ವ ಹಂತದ ಬಹುಶಿಸ್ತೀಯ ಶೈಕ್ಷಣಿಕ ಕಾರ್ಯಕ್ರಮ ವಿಷಯದ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಹುಶಿಸ್ತೀಯ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕವಾಗಿ ಪ್ರತ್ಯೇಕವಾಗಿರುವ ವಿಜ್ಞಾನ ,ಕಲೆ ಮತ್ತು ಮಾನವಿಕ ವಿಷಯಗಳನ್ನು ಸಂಯೋಜಿಸಲು, ಹೊಂದಿಕೊಳ್ಳಲು ಹಾಗೂ ಗ್ರಹಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.ಇದು ಜಾಗತಿಕವಾಗಿರುವ ಸಂಕೀರ್ಣ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿ ವಿದ್ಯಾರ್ಥಿಗಳಲ್ಲಿ ವೈವಿಧ್ಯಮಯ ವೃತ್ತಿ ಮಾರ್ಗಗಳಿಗೆ ಅವಶ್ಯಕವಾಗಿರುವ ಕೌಶಲ್ಯಗಳನ್ನು ಒದಗಿಸಿ ವಿಮರ್ಶಾತ್ಮಕ ಚಿಂತನಾ ಶಕ್ತಿ , ಸೃಜನಶೀಲತೆ ಹಾಗೂ ಕ್ರಿಯಾತ್ಮಕವಾಗಿರುವ ಜ್ಞಾನವನ್ನು ಒದಗಿಸುತ್ತದೆ.
ತಂತ್ರಜ್ಞಾನ ಇಂದು ಜೀವನದ ಅವಿಭಾಜ್ಯ ಅಂಗವಾಗಿದೆ. NEP 2020 ಈ ಕುರಿತು ಸಮಗ್ರವಾಗಿ ವಿವರಿಸಿದೆ. ಹೆಚ್ಚಿನ ಅನ್ವೇಷಣಾತ್ಮಕ ವಿಷಯಗಳಿಗೆ NEP 2020 ಮಹತ್ವ ನೀಡಿದೆ . ಈ ಶಿಕ್ಷಣ ನೀತಿ ಪರಿಚಯಿಸಿದ ITEP (ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮ ) 4 ವರ್ಷಗಳ ಇಂಟಿಗ್ರೇಟೆಡ್ ಶಿಕ್ಷಣ ಪದವಿ ಕಾರ್ಯಕ್ರಮವು ಬೋಧನಾ – ಕಲಿಕಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪರಿಣಿತಿ ಒದಗಿಸಿ, ಪದವಿಯ ಪ್ರಾರಂಭಿಕ ಹಂತದಿಂದಲೇ ಶಿಕ್ಷಣದ ಮೂಲ ಜ್ಞಾನ ಹಾಗೂ ಅಂತರ್ಗತವಾಗಿರುವ ಪ್ರಾಯೋಗಿಕ ಜ್ಞಾನ ಒದಗಿಸಲು ನೆರೆವಾಗುತ್ತದೆ. 2030 ಕ್ಕೆ ಇದು ಜಾರಿಗೆ ಬರವುದರಿಂದ ಮಹಾವಿದ್ಯಾಲಯದವರು ಈ ಕುರಿತು ತಯಾರಿ ಮಾಡಿಕೊಳ್ಳಬೇಕೆಂದು ಹೇಳಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ
ಬಹುಶಿಸ್ತೀಯ ಎಂಜಿನಿಯರಿಂಗ್ ಶಿಕ್ಷಣವು ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಗಣಿತ ಮುಂತಾದ ವಿವಿಧ ವಿಭಾಗಗಳಿಂದ ಜ್ಞಾನವನ್ನು ಸಂಯೋಜಿಸುವ ಶೈಕ್ಷಣಿಕ ವಿಧಾನವನ್ನು ಸೂಚಿಸುತ್ತದೆ, ಇದು ವಿದ್ಯಾರ್ಥಿಗಳು ಸಂಕೀರ್ಣವಾದ ನೈಜ-ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ಈ ವಿಧಾನವು ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ವಿಭಿನ್ನ ಹಿನ್ನೆಲೆಗಳಿಂದ ಬಂದ ವೃತ್ತಿಪರರೊಂದಿಗೆ ಸಹಯೋಗದಿಂದ ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ ಎಂದರು.
ಪಿ. ಎಂ ಉಪಾ ಯೋಜನೆಯ ನೋಡಲು ಅಧಿಕಾರಿಗಳಾದ ಡಾ. ನಂದಿನಿ ದೇವರಮನಿ ಅವರು ಬಹುಶಿಸ್ತೀಯ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಜಗದೀಶ ಜೋಡಂಗಿ ಸಿಂಡಿಕೇಟ್ ಮೆಂಬರ್ ರಾ.ಚ.ವಿ ರವರು ಅಧ್ಯಕತೆ ವಹಿಸಿ ಮಾತನಾಡಿ , ಇಂದು ವಿಶ್ವವಿದ್ಯಾಲಯ ಹಾಗೂ ಮಹಾ ವಿದ್ಯಾಲಗಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ವಿದ್ಯಾರ್ಥಿಗಳಿಗೆ ಭವಿಷ್ಯ ಇಲ್ಲದಂತಾಗಿದೆ. ಕೌಶಲ್ಯಾಧಾರಿತ, ಉದ್ಯೋಗಾಧರಿತ ಶಿಕ್ಷಣ ಅವಶ್ಯವಾಗಿದೆಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಕಾರ್ಯಕ್ರಮ ಅಧ್ಯಕ್ಷರನ್ನು ಶಿಕ್ಷಣ ನಿಖಾಯ ಪರವಾಗಿ ಗೌರವಿಸಲಾಯಿತು.
ಆಕಾಶ ಪಾಟೀಲ ಪ್ರಾರ್ಥಿಸಿದರು, ಡಾ. ಸುಷ್ಮಾ ಆರ್ ಡೀನ್ ಹಾಗೂ ಮುಖ್ಯಸ್ಥರು ಶಿಕ್ಷಣ ನಿಖಾಯ ರವರು ಪ್ರಾಸ್ತಾವಿಕ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು, ಎಂ.ಇಡಿ ಪ್ರಶಿಕ್ಷಣಾರ್ಥಿ ವಿಶಾಲ ಹುಳ್ಳೊಳ್ಳಿ ರವರು ಅತಿಥಿಗಳನ್ನು ಪರಿಚಯಿಸಿದರು.ಸಂಶೋಧನಾ ವಿದ್ಯಾರ್ಥಿನಿ  ರಸನಾ ಹುಲಮನಿ ನಿರೂಪಿಸಿದರು.
ಡಾ. ಕನಕಪ್ಪ ಪೂಜಾರ ಸಹಾಯಕ ಪ್ರಾಧ್ಯಾಪಕರು ವಂದಿಸಿದರು.

 
		 
		 
		
