ಮಕ್ಕಳ ಮತ್ತು ಮಹಿಳೆಯರ ರಕ್ಷಣೆಯ ಮೂಲಕ ಸಮಾಜದಅಭಿವೃದ್ಧಿ ಸಾಧ್ಯ: ಸಿ.ಬಿ.ಚಿಕ್ಕೋಡಿ

Pratibha Boi
ಮಕ್ಕಳ ಮತ್ತು ಮಹಿಳೆಯರ ರಕ್ಷಣೆಯ ಮೂಲಕ ಸಮಾಜದಅಭಿವೃದ್ಧಿ ಸಾಧ್ಯ: ಸಿ.ಬಿ.ಚಿಕ್ಕೋಡಿ
WhatsApp Group Join Now
Telegram Group Join Now

ಹುನಗುಂದ; ಪೋಕ್ಸೋಎಂಬುದು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ರಕ್ಷಣೆಯಕಾಯ್ದೆಯು 2012ರಲ್ಲಿಜಾರಿಗೆ ಬಂದಿದ್ದು, 18 ವರ್ಷಕ್ಕಿಂತಕಡಿಮೆ ಮಯಸ್ಸಿನ ಪ್ರತಿಯೊಬ್ಬ ಮಕ್ಕಳನ್ನು ರಕ್ಷಿಸಲು ಜಾರಿಗೆ ಬಂದಕಾಯ್ದೆಯಾಗಿದೆ. ಸಮಾಜದ ಅಭಿವೃದ್ಧಿಯೆಂದರೆ ಕೇವಲ ಕಟ್ಟಡಗಳು, ರಸ್ತೆಗಳು, ಯಂತ್ರೋಪಕರಣಗಳ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿ ಗೌರವಯುತವಾದ ಜೀವನ ನಡೆಸುವಂತೆ ಪ್ರೋತ್ಸಾಹಿಸುವುದು ಅಷ್ಟೇ ಮುಖ್ಯವಾಗಿದೆ ಎಂದು ಬಾಗಲಕೋಟ ಜಿಲ್ಲಾ ಮಹಿಳಾ ಪೋಲಿಸ್ ಠಾಣೆಯ ಸಿಪಿಐ ಪೋಲಿಸ್ ಸಿ.ಬಿ.ಚಿಕ್ಕೋಡಿ ಹೇಳಿದರು.

ಇಲ್ಲಿನ ವಿ.ಎಂ.ಕೆ.ಎಸ್.ಆರ್.ವಸ್ತದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಎಂಬ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ನಮ್ಮ ದೇಶದಲ್ಲಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಹಲವಾರು ಮಹತ್ವದ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೂ ಆ ಕಾನೂನುಗಳ ಕುರಿತು ಜನರಲ್ಲಿ ಸರಿಯಾಗಿ ಅರಿವು ಇಲ್ಲವಾಗಿದೆ. ಅವು ಗಳನ್ನು ಬಳಸಿಕೊಳ್ಳದೆ ಇರುವದರಿಂದ ಸಮಾಜದಲ್ಲಿ ದುರ್ಘಟನೆಗಳು ನಡೆಯುತ್ತಿವೆ ಎಂದರು. ಮಹಿಳೆಯರ ರಕ್ಷಣೆಗಾಗಿ ಗ್ರಹ ಹಿಂಸೆ ತಡೆ ಕಾಯ್ದೆ 2005 (ಡೆಮೆಸ್ಟಿಕ್ ವೈಲೆನ್ಸ್ಆ್ಯಕ್ಟ್) ಇದು ಮನೆಗಳಲ್ಲಿ ನಡೆಯುವ ದೌರ್ಜನ್ಯ ಇಕ್ಕಟ್ಟನ್ನುತಡೆಯುವ ಮಹತ್ವದ ಕಾನೂನಾಗಿದೆ. ಮಹಿಳೆಯರ ಮೇಲೆ ಮಾನಸಿಕ, ದೈಹಿಕ, ಆರ್ಥಿಕ ಹಾಗೂ ಲೈಂಗಿಕ ದೌರ್ಜನ್ಯ ನಡೆದರೆ ಈ ಕಾನೂನು ರಕ್ಷಣೆ ನೀಡುತ್ತದೆ. ಅದರಂತೆ ಕಾರ್ಯಕ್ಷೇತ್ರದಲ್ಲಿ ಮಹಿಳೆಯರ ಲೈಂಗಿಕ ದೌರ್ಜನ್ಯ ತಡೆಕಾಯ್ದೆ (2015) ಪೋಕ್ಸೋಕಾಯ್ದೆ. ಈ ಕಾಯ್ದೆಯು ಉದ್ಯೋಗ ನಿರತ ಪ್ರದೇಶಗಳಲ್ಲಿ ಮಹಿಳೆಯರ ರಕ್ಷಣೆಗೆ ಈ ಕಾನೂನು ತುಂಬಾ ನೆರವಾಗಿದೆ ಎಂದರು.

ವಿವಾಹ ಕಾನೂನುಗಳು:

18 ವಯಸ್ಸಿಗಿಂತ ಕಡಿಮೆ ವಯಸ್ಸಿನ ಬಾಲಕಿಯರು ಮದುವೆಯಾಗುವುದು ಕಾನೂನು ಬಾಹಿರ ಇದು ಅವರ ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯದ ರಕ್ಷಣೆಯ ಪ್ರಯುಕ್ತ ಜಾರಿಗೊಳಿಸಿದ ಕಾನೂನು. ಈ ಕಾನೂನುಗಳು ಹಕ್ಕುಗಳನ್ನು ರಕ್ಷಿಸುವದು ಮಾತ್ರವಲ್ಲ ಮಾನವ ಸಮಾಜವನ್ನು ನಿರ್ಮಿಸುವುದಾಗಿದೆ ಅದಕ್ಕಾಗಿ ನಾವು ನೀವೆಲ್ಲರೂ ಜಾಗೃತರಾಗಿ ಇತರರಿಗೂ ಜಾಗೃತಿ ಮೂಡಿಸಬೇಕು. ಮಹಿಳೆ ಮತ್ತು ಮಗು ಯಾವುದೇ ಕಿರುಕುಳಕ್ಕೆ ಬಲಿಯಾದರೆ ಇದು ನಮಗೆ ಸಂಬAಧಿಸಿದ್ದಲ್ಲವೆಂದು ದೂರಸರಿಯದೇ 1091 ಮಹಿಳಾ ಸಹಾಯ ಮತ್ತು 1098 ಮಕ್ಕಳ ಸಹಾಯ ಈ ಸಂಖ್ಯೆಗಳಿಗೆ ಕರೆ ಮಾಡಿ ಅವರನ್ನು ರಕ್ಷಿಸಲು ಮುಂದಾಗಬೇಕು. ಸಮಾಜದ ನಿಜವಾದ ಶಕ್ತಿ ಮಹಿಳೆಯರು ಮತ್ತು ಮಕ್ಕಳು. ಕಾರಣ ಇವರನ್ನು ರಕ್ಷಿಸುವುದು ಕೇವಲ ಸರಕಾರದ ಜವಾಬ್ದಾರಿಯಲ್ಲ ಪ್ರತಿಯೊಬ್ಬ ನಾಗರೀಕನ ಕರ್ತವ್ಯ, ನಾವೆಲ್ಲರೂ ಕಾನೂನಿನ ತಿರುಳನ್ನು ಅರಿತುಕೊಂಡು ಮುಂದುವರೆದಾಗ ಸುರಕ್ಷಿತ ಸಮಾಜದ ನಿರ್ಮಾಣ ಸಾಧ್ಯವೆಂದು ಸಿ.ಬಿ. ಇಕ್ಕೋಡಿ ತಿಳಿಸಿದರು.

ಲೆಪ್ಟಿನೆಂಟ್ ಎಸ್.ಬಿ.ಚಳಗೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ರಾಷ್ಟçದಲ್ಲಿ ಜಾರಿಯಲ್ಲಿರುವ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಯ ಕಾನೂನುಗಳು ಆರೋಪಿಯನ್ನು ದೋಷಮುಕ್ತಗೊಳಿಸಲು ಸಾಕ್ಷಿಗಳ ಹೊಣೆಗಾರಿಕೆಯೂ ಮಕ್ಕಳ ಹೇಳಿಕೆಯನ್ನು ನಂಬುವುದೇ ಮೊದಲ ಆದ್ಯತೆ ಎಂಬ ಸಂದೇಶಗಳನ್ನು ಈ ಕಾಯ್ದೆಗಳು ಹೇಳುತ್ತವೆ. ಸಮಾಜದಲ್ಲಿ ಈ ಕಾನೂನುಗಳ ಮೂಲಕ ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಅವಶ್ಯವೆಂದು ಹೇಳಿದರು.

ಪದವಿ ಪ್ರಾಚಾರ್ಯ ಡಾ.ಎಸ್.ಆರ್.ಗೋಲಗೊಂಡ ಮಾತನಾಡಿ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸುವಂತೆ ಕೇವಲ ಸರಕಾರದಕಡೆಗೆ ಕೈಮಾಡಿತೋರಿಸುವ ಬದಲಾಗಿ ಪ್ರತಿಯೊಬ್ಬರು ಆ ಜವಾಬ್ದಾರಿಯನ್ನು ವಹಿಸಿಕೊಂಡರೆ ಇಂತಹ ದೌರ್ಜನ್ಯಗಳು ತಾವಾಗಿಯೇ ಮಾಯವಾಗುತ್ತವೆ ಆ ನಿಟ್ಟಿನಲ್ಲಿ ಯುವಕರು ಸಾಗಬೇಕು ಎಂದರು. ಪದವಿ ಪೂರ್ವ ಪ್ರಾಚಾರ್ಯ ಎಚ್.ಎಸ್.ಬೋಳಿಶೆಟ್ಟರ ಅಧ್ಯಕ್ಷಗೆ ವಹಿಸಿ ಮಾತನಾಡಿ ಮಾತನಾಡುತ್ತ ಮಕ್ಕಳು ಶಾಲೆ, ಮನೆ, ಮತ್ತು ಸಮಾಜದಲ್ಲಿ ನಿರ್ಭಯವಾಗಿ ಜೀವನ ನಡೆಸಲು ಇಂತಹ ಕಾಯ್ದೆಗಳು ಪೂರಕವಾಗಿವೆ. ಆದುದರಿಂದ ಈ ಕಾಯ್ದೆಗಳ ಬಗ್ಗೆ ಮಕ್ಕಳು ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.

ವೇದಿಕೆಯ ಮೇಲೆ ಮಹಾಂತೇಶ ಚಳಗೇರಿ ಮತ್ತು ದೊಡಮನಿ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯಾಧ್ಯಕ್ಷ ಎ.ಎಲ್.ಬಾದಾಮಿ ವಂದಿಸಿದರು. ಡಾ.ಎನ್.ಎಂ.ಕಡಬಗೇರಿ ನಿರೂಪಿಸಿದರು.

WhatsApp Group Join Now
Telegram Group Join Now
Share This Article