ಅಥಣಿ: ದಿ.ಡಿ.ದೇವರಾಜ ಅರಸು ಅವರು ತುಳಿತಕ್ಕೊಳಗಾದ ಹಿಂದೂಳಿದ ವರ್ಗದ ಸಮುದಾಯದ ಜನರನ್ನು ಮೇಲೆತ್ತಿ ಸಮಾಜದ ಮುಖ್ಯವಾಹಿನಿಗೆ ತಂದು ಸಾಮಾಜಿಕ ಸಮಾನತೆ ಎತ್ತಿ ಹಿಡಿದ ಮಹಾನ್ ನಾಯಕರಾಗಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಅವರು ಅಭಿಮತ ವ್ಯಕ್ತ ಪಡಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಬೆಳಗಾವಿ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್ ಅಥಣಿ, ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಅಥಣಿ, ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ, ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಏರ್ಪಡಿಸಿದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳಿತಕ್ಕೋಳಗಾಗಿದ್ದ 21 ಲಕ್ಷ ಸಮುದಾಯಗಳ ಕುಟುಂಬಗಳಿಗೆ ಸುಮಾರು 4.5 ಲಕ್ಷ ಎಕ್ಕರ ಭೂಮಿಯನ್ನು ಭೂ ಸುಧಾರಣಾ ಕಾಯ್ದೆಯಡಿ ತರುವ ಮೂಲಕ ಹಂಚಿಕೆ ಮಾಡಿದ ಮಹನಿರು, ದೇವರಾಜ ಅರಸು ಕೇವಲ ಒಬ್ಬ ರಾಜಕಾರಣಿ ಆಗಿರಲಿಲ್ಲ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಸೇರಿದಂತೆ ಇಂದಿನ ಅನೇಕ ರಾಜಕಾರಣಿಗಳನ್ನು ನಾಯಕರನ್ನಾಗಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಶ್ರೀಮತಿ ಪ್ರಿಯವಂದಾ ಅನೆಪ್ಪನವರ ದಿ.ಡಿ.ದೇವರಾಜ ಅರಸು ಅವರು ಉಳುವವನೇ ಒಡೆಯ ಎಂಬ ಕಾನೂನು ಜಾರಿಗೆ ಜಾರಿಗೆ ತರುವ ಮೂಲಕ ಬಾಳಿಗೆ ಬೆಳಕಾಗಿದ್ದವರು. ಹೀಗಾಗಿ ನಾವೆಲ್ಲರೂ ಅರಸು ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿಂದೂಳಿದ ವರ್ಗಗಳ ಕಲ್ಯಾಣಾಧಿಕಾರಿ ವೆಂಕಟೇಶ ಕುಲಕರ್ಣಿ, ಸನ್ಮಾನ ಸ್ವೀಕರಿಸಿ ಮಾತನಾಡಿ ಅಥಣಿ ಮತ್ತು ಕಾಗವಾಡ ತಾಲೂಕುಗಳು ಸೇರಿ 18 ವಸತಿ ನಿಲಯಗಳಿದ್ದು, ಈ ನಿಲಯಗಳ ಮೂಲಕ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಊಟ, ವಸತಿ ಸೇರಿದಂತೆ ಶೈಕ್ಷಣಿಕ ಅನುಕೂಲತೆ ಗಳನ್ನು ಒದಗಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರಸಭೆ ಉಪಾದ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಮಾತನಾಡಿದರು.
ಪುರಸಭೆ ಸದಸ್ಯ ರಾಜು ಗುಡೊಡ್ಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್. ಮುಂಜೆ, ಗ್ರೆಡ್ 2 ತಹಸೀಲ್ದಾರ ಮಹಾದೇವ ಬಿರಾದಾರ, ಜಿ. ಎಸ್ ಮಠದ, ಸತೀಶ ಬಸಗೌಡರ, ಅಶೋಕ ಸತ್ತಿಗೌಡರ, ಪಾರ್ವತಿ ಮಲ್ಲಗೌಡರ, ಗೀತಾ ನಾಯಿಕ, ಅಶೋಕ ಆಜೂರ, ಕೇದಾರಿ ಬಾಗಿ, ಮಹೇಶ್ ಗಾಡಿವಡ್ಡರ, ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.