ಜಮಖಂಡಿ;ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ಸನ್ನಿಧಿ ಉತ್ತರವಾಹಿಸನಿ ಕೃಷ್ಣಾ ತೀರದಲ್ಲಿ ಆ.16 ರಂದು ಎಂಆರ್‌ಎನ್ ಫೌಂಡೇಷನ್, ಹಾಗೂ ರೈತರ ನೇತೃತ್ವದಲ್ಲಿ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಠಮಿ , ಕೃಷ್ಣಾ ಪುಣ್ಯಸ್ನಾನ, ಕೃಷ್ಣಾರತಿ, ಕುಂಭ ಮೇಳ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಹುಟ್ಟುಹಬ್ಬ ಕಾರ್ಯಕ್ರಮದ ಸ್ಥಳವನ್ನು ಉತ್ತರಪ್ರದೇಶದ ಜೂನಾ ಅಖಾಡಾದ ಮುಖ್ಯಸ್ಥರು ಹಾಗೂ ಪ್ರಯಾಗರಾಜದಲ್ಲಿ ನಡೆದ ಮಹಾ ಕುಂಭಮೇಳದ ಉಸ್ತುವಾರಿಗಳಾಗಿದ್ದ ದೇವಗಿರಿ ಬಾಬಾ ಅವರು ಬುಧವಾರ ವೀಕ್ಷಣೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತ ಪುಣ್ಯಭೂಮಿ, ಇಲ್ಲಿಯ ನದಿಗಳು ಜೀವ ವಾಹಿನಿಗಳು, ಗಂಗೆಯಷ್ಟೇ ಪವಿತ್ರವಾಗಿರುವ ಕೃ಼ಷ್ಣಾ ನದಿಗೆ ಆರತಿ, ಪುಣ್ಯಸ್ನಾನ, ಕುಂಭ ಮೇಳ ಏರ್ಪಡಿಸಿದ್ದು ಈ ಭಾಗದ ಜನರ ಭಾಗ್ಯವಾಗಿದೆ. ಹಿಮಾಲಯದಲ್ಲಿ ಕಠಿಣ ತಪಸ್ಸು ಆಚರಿಸುತ್ತ ಗುಹೆಗಳಲ್ಲಿ ವಾಸ ಮಾಡುವ ಅಘೋರಿಗಳು, ನಾಗಾಸಾಧುಗಳು, ಹಂಸರು, ಪರಮಹಂಸರು, ಹಠಯೋಗಿಗಳು ಈ ಪುಣ್ಯಸ್ಥಳಕ್ಕೆ ಆಗಮಿಸಲಿದ್ದಾರೆ ಅವರ ಬರುವಿಕೆಯಿಂದ, ಅವರ ದರ್ಶನ ಆಶೀರ್ವಾದ ದಿಂದ ಸಮಸ್ತ ಜನತೆಗೆ ಒಳ್ಳೆಯದಾಗಲಿದೆ ಎಂದು ಹೇಳಿದರು. ಅಂಥಹ ಸಾಧು ಸಂತರ ಪಾದ ಸ್ಪರ್ಷದಿಂದ ಪ್ರದೇಶವೇ ಪಾವನವಾಗಲಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾತ್ಮರ ದರ್ಶನ ಆಶೀರ್ವಾದ ಪಡೆಯಬೇಕು ಎಂದು ಹೇಳಿದರು.
ಉದ್ಯಮಿ ಸಂಗಮೇಶ ನಿರಾಣಿ ಮಾತನಾಡಿ ಆ.16 ರಂದು ಸುಮಾರು 200ಕ್ಕೂ ಹೆಚ್ಚು ದೇವರ ಪಲ್ಲಕ್ಕಿಗಳು, ಕಾಶಿವಿಶ್ವನಾಥನ ಸನ್ನಿಧಿಯಲ್ಲಿ ಗಂಗಾ ಆರತಿ ಮಾಡುವ ಪಂಡಿತರ ತಂಡಗಳು, ಪ್ರದಾನ ಅರ್ಚಕರು ಸೇರಿದಂತೆ ಅನೇಕ ಸ್ವಾಮಿಗಳು, ನಾಗಾ ಸಾಧುಗಳು, ಅಘೋರಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಭರತನಾಟ್ಯ ತಂಡಗಳ ಕಲಾವಿದರು, ಸಂಗೀತ ಕಲಾವಿದರು, ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಆರತಿ ಕಾರ್ಯಕ್ರಮ ನಡೆಯಲಿದೆ. ನಾಗಾಸಾಧುಗಳು ಕುಂಭ ಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯಸ್ನಾನ (ಶಾಹಿಸ್ನಾನ) ಮಾಡಲಿದ್ದಾರೆ. ರಾಜ್ಯ ಹಾಗೂ ಕೇಂದ್ರದಿಂದ ಅನೇಕ ಗಣ್ಯರು ಮಂತ್ರಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಪೂರ್ಣ ಅನುಷ್ಠಾನ ಆಗಬೇಕಿದೆ ನಮ್ಮ ಪಾಲಿನ 150 ಟಿಎಂಸಿ ನೀರಿನ್ನು ಬಳಸಿಕೊಳ್ಳಬೇಕಿದೆ. ಉತ್ತರ ಕರ್ನಾಟಕದ ಜೀವ ನದಿಯಾಗಿರುವ ಕೃಷ್ಣೆಗೆ ಗೌರವ ಸಲ್ಲಿಸಬೇಕಿದೆ. ಏತನೀರಾವರಿ ಯೋಜನೆಗಳಿಂದ 15 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕೆಲಸವಾಗಬೇಕಿದೆ ಅದಕ್ಕಾಗಿ ಸರ್ಕಾರಗಳ ಗಮನ ಸೆಳೆಯುವ ಕೆಲಸವು ಈ ಸಂದರ್ಭ ದಲ್ಲಿ ನಡೆಯಬೇಕಿದೆ ಎಂದು ಹೇಳಿದರು. ಇದರಿಂದ 12 ತಿಂಗಳು ನಮ್ಮ ರೈತಾಪಿ ವರ್ಗಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದರು. ಹಿಪ್ಪರಗಿಯ ಪ್ರಭುಜೀ ಮಹಾರಾಜರು, ಸಿಪಿಐ ಮಲ್ಲಪ್ಪ ಮಡ್ಡಿ, ಗ್ರಾಮೀಣ ಪಿಎಸ್‌ಐ ಪೂಜಾರ, ಪಿ.ಆರ್.ಪಾಲಬಾಂವಿ, ಈಶ್ವರ ಕರಿಬಸಣ್ಣವರ, ಪುಂಡಲೀಕಗೌಡ ಪಾಟಿಲ, ಸೋಮನಾಥಗೌಡ ಪಾಟೀಲ, ಚಂದ್ರಶೇಖರ ಆದಬಸಪ್ಪಗೋಳ, ಶಂಕರಗೌಡ ಪಾಟೀಲ, ಶಂಕರ ಕಿತ್ತೂರ, ಭೀಮಪ್ಪ ಹನಗಂಡಿ, ಗೊಳಪ್ಪಣ್ಣ ಶಿವಪೂಜಿ, ಸಂಗಪ್ಪ ಬಾಗೇವಾಡಿ, ಮಹದೇವ ಕಲ್ಯಾಣಿ, ದಾನಪ್ಪಗೋಳ, ರಾಚಯ್ಯ ಬಂದ್ರದ,ವೆಂಕಟೇಶ ಜಂಬಗಿ ಮುಂತಾದವರಿದ್ದರು.