ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಖಾಯಂ ಉದ್ಯೋಗ ಒದಗಿಸಿ  : ದೇವದಾಸ್ ಒತ್ತಾಯ 

Ravi Talawar
ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಖಾಯಂ ಉದ್ಯೋಗ ಒದಗಿಸಿ  : ದೇವದಾಸ್ ಒತ್ತಾಯ 
WhatsApp Group Join Now
Telegram Group Join Now
ಬಳ್ಳಾರಿ:ಫೆ,18 : ಕಾರ್ಮಿಕ ವಿರೋಧಿ ನಾಲ್ಕು  ಕಾರ್ಮಿಕ ಕಾಯ್ದೆಗಳನ್ನು  ರದ್ದುಪಡಿಸಿ ಪ್ರಸಕ್ತ ಕಾಯಿದೆಗಳನ್ನು ಬಲಪಡಿಸಬೇಕು ಕೆಲಸದ ಸಮಯವನ್ನು ಎಂಟು
 ಗಂಟೆಗಳಿಂದ  ಹತ್ತು ಗಂಟೆವರೆಗೆ ವಿಸ್ತರಿಸುವುದನ್ನು ಕೈಬಿಡಬೇಕು ಗುತ್ತಿಗೆ ಪದ್ದತಿಯನ್ನು ರದ್ದೂಗೊಳಿಸಿ ಖಾಯಂ ಹುದ್ದೆಗಳನ್ನು ಕಲ್ಪಿಸಿ  ಎಲ್ಲಾ ದುಡಿಯುವ ಕಾರ್ಮಿಕರ ಸೇವೆಗಳನ್ನು ಕಾಯಂಗೊಳಿಸಬೇಕುಎಲ್ಲಾ ಕಾರ್ಯಕರ್ತರನ್ನು ಸರ್ಕಾರಿ (ಅಂಗನವಾಡಿ ಆಶಾ ಮತ್ತು ಬಿಸಿಊಟ) ನೌಕರನ್ನಾಗಿ ಪರಿಗಣಿಸಿ
ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಮಾಸಿಕ ಕನಿಷ್ಠ ವೇತನ 35,000 ಪಿಂಚಣಿ 10,000 ಇಎಸ್ಐ ಪಿಎಫ್ ಒದಗಿಸಬೇಕು AITUC ಸಂಘಟನೆಯ ದೇವದಾಸ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು.
ಅವರು ಇಂದು ಬಳ್ಳಾರಿ ಜಿಲ್ಲಾ ಅಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ದುಡಿಯುವ ವರ್ಗದ ಜನರ  ಸಮಸ್ಯೆಗಳ ಪರಿಹಾರಕ್ಕೆ ಎಐಯುಟಿಯುಸಿ ಯಿಂದ  ಪ್ರತಿಭಟನೆಯನ್ನು ನಡೆಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎ. ಐ. ಟಿ. ಯು. ಸಿ ಸಂಘಟನೆ  ಜಿಲ್ಲಾ ಕಾರ್ಯದರ್ಶಿಗಳಾದ ಡಾ.ಎನ್ ಪ್ರಮೋದ್ ಸೇರಿದಂತೆ ಹಳವಾರು ಜನ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ
 ಇನ್ನೂ ಅನೇಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಬಳ್ಳಾರಿ ಜಿಲ್ಲಾ ಅಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
WhatsApp Group Join Now
Telegram Group Join Now
Share This Article