ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಜ್ವರದ ಅಬ್ಬರ ಮುಂದುವರಿದಿದೆ. ಇದೇ ಅವಧಿಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಕಳೆದ ದಿನ ರಾಜ್ಯಾದ್ಯಂತ 445 ಜನರಿಗೆ ಡೆಂಗ್ಯೂ ಪಾಸಿಟಿವ್ ದಾಖಲಾಗಿವೆ. ಇದರಿಂದ ಒಟ್ಟೂ ಪ್ರಕರಣಗಳ ಸಂಖ್ಯೆ 9,527ಕ್ಕೆ ಏರಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ಕಳೆದ 24 ಗಂಟೆಯಲ್ಲಿ 2,630 ಜನರನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 445 ಮಂದಿಗೆ ಡೆಂಗ್ಯೂ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 294, ತುಮಕೂರು 19, ಧಾರವಾಡ 12, ಬೀದರ್ 72, ಬಳ್ಳಾರಿ 3, ಮಂಡ್ಯ 33, ದಕ್ಷಿಣ ಕನ್ನಡ 62, ಉಡುಪಿ 5 ಹಾಗೂ ಚಿಕ್ಕಮಗಳೂರು 13 ಸೇರಿದಂತೆ 445 ಜನರಿಗೆ ಡೆಂಗ್ಯೂ ಪಾಸಿಟಿವ್ ಎಂದು ಪರೀಕ್ಷೆಯಿಂದ ತಿಳಿದು ಬಂದಿದೆ. ಒಟ್ಟಾರೆ ರಾಜ್ಯದಲ್ಲಿ, 308 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 7 ಮಂದಿ ಜ್ವರದಿಂದ ಮೃತಪಟ್ಟಿದ್ದಾರೆ.