ಅಥಣಿ: ಕೆಎಲ್‌ಇ ಸಂಸ್ಥೆಯ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮಿಜೀ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇಂದು ದಿನಾಂಕ ೦೨.೦೫.೨೦೨೫ ರಂದು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದರು.
ಅವರು ಕೇಂದ್ರದ ಆವರಣದಲ್ಲಿ ಅಳವಡಿಸಿದ ವಿವಿಧ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿದರು ಹಾಗೂ ಮಣ್ಣು ಪರೀಕ್ಷೆಗೆ ಮಾದರಿ ಸ್ಯಾಂಪಲ್ ಸಂಗ್ರಹಿಸುವ ಪದ್ಧತಿ ಪ್ರಾತ್ಯಕ್ಷಿಕೆ ಕೈಗೊಂಡು ಮಣ್ಣು ಪರೀಕ್ಷೆ ಪ್ರಯೋಗಾಲಯದಲ್ಲಿ ಮಣ್ಣು ವಿಶ್ಲೇಷಣೆ ಮಾಡುವ ಪದ್ಧತಿಯನ್ನು ಅರಿತುಕೊಂಡರು. ಈ ಸಂದರ್ಭದಲ್ಲಿ ಕೇಂದ್ರದ ಮುಖ್ಯಸ್ಥಡಾ. ಮಂಜುನಾಥ ಚೌರಡ್ಡಿ, ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ ಹಾಗೂ ಅಥಣಿ ಕಾಲೇಜಿನ ಪ್ರೋಫೆಸರ್ ಅಚುತಾನಂದ ಕೆ. ಎಂ. ಹಾಗೂ ಪ್ರೋಫೆಸರ್ ಕಿರಣ ಮಾಡಲಗಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸದರ ಕಾಲೇಜಿನ ೩೦ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.