ಸಮರ್ಪಕ ಬಸ್ ಕಲ್ಪಿಸಲು ಆಗ್ರಹ: ಮಲ್ಲೂರ ಗ್ರಾಮಸ್ಥರಿಂದ ಬಸ್ ತಡೆದು ಪ್ರತಿಭಟನೆ

Ravi Talawar
ಸಮರ್ಪಕ ಬಸ್ ಕಲ್ಪಿಸಲು ಆಗ್ರಹ: ಮಲ್ಲೂರ ಗ್ರಾಮಸ್ಥರಿಂದ ಬಸ್ ತಡೆದು ಪ್ರತಿಭಟನೆ
WhatsApp Group Join Now
Telegram Group Join Now
 ಬೈಲಹೊಂಗಲ – ಮುನವಳ್ಳಿ ಬಸ್ ತಡೆದು ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಅನೇಕ ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದರು, ಬೈಲಹೊಂಗಲ ಘಟಕದ ಕೆಎಸ್ಆರ್ಟಿಸಿ ಅಧಿಕಾರಿಗಳು ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಮೀನಾಮೇಷ ಧೋರಣೆ ತೋರಿದ್ದರಿಂದ ಹಾಗೂ ಮೊದಲು ಇದ್ದ ಬಸ್ಸುಗಳನ್ನು ತೆಗೆದು ಹಾಕಿದ್ದರಿಂದ ಸರಿಯಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪದ ಕಾರಣ ಮತ್ತು ಸಾರ್ವಜನಿಕರಿಗೂ ಕೆಲಸಕ್ಕೆ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಅದಕ್ಕಾಗಿ ಎಲ್ಲಾ ಸಾರ್ವಜನಿಕರು ವಿದ್ಯಾರ್ಥಿಗಳು ಬಸ್ ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಎಸ್ಆರ್ಟಿಸಿ ಬಸ್ ವ್ಯವಸ್ಥಾಪಕರ ಉಡಾಪ್ಯ ಉತ್ತರದಿಂದ ಜನರು ಆಕ್ರೋಶಗೊಂಡು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರಿಗೂ ಪ್ರತಿಭಟನೆಯನ್ನು ಹಿಂದೆತೆಗೆದುಕೊಳ್ಳಬಾರದೆಂದು ನಿರ್ಧರಿಸಿದರು
ತದನಂತರ ಘಟಕ ವ್ಯವಸ್ಥಾಪಕರು ಆಗಮಿಸಿ ಬಸ್ ಸೌಲಭ್ಯ ಕಲ್ಪಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದೆತೆಗೆದುಕೊಳ್ಳಲು ನಿರ್ಧಾರ ಮಾಡಲಾಯಿತು ನಾಳೆಯಿಂದ ಸರಿಯಾಗಿ ಬಸ್ ಓಡಿಸುತ್ತೇವೆ ಮತ್ತು ಈ ಮಾರ್ಗಕ್ಕೆ ಬಂದ್ ಮಾಡಿದ ಬಸ್ಸುಗಳನ್ನು ಚಾಲನೆ ನೀಡುತ್ತೇವೆ ಎಂದು ಹೇಳಿದ ನಂತರ ಪ್ರತಿಭಟನೆಯನ್ನು ಹಿಂದೆ ತೆಗೆದುಕೊಳ್ಳಲಾಯಿತು.
     ಈ ಸಂದರ್ಭದಲ್ಲಿ ಗ್ರಾಮಸ್ಥರಾದ  ಬಸನಗೌಡ ಪಾಟೀಲ, ರುದ್ರಗೌಡ ಪಾಟೀಲ, ಸೋಮಪ್ಪ ಬುಡಶೆಟ್ಟಿ,ಚಿದಾನಂದ ಪಾಟೀಲ,ಈರಣ್ಣ ನಾಗನೂರ, ಚೇತನ್ ಕಿತ್ತೂರ, ಈರಣ್ಣ ಪ್ರಭುನವರ, ಮಹೇಶ ದೇಗಾವಿ,ನಿಂಗಪ್ಪ ಅರವಳ್ಳಿ,ಈಶ್ವರ್ ಮದಲಭಾವಿ, ಮುತ್ತು ಪತ್ರಿಮಠ, ಪ್ರವೀಣ ಅರವಳ್ಳಿ, ಸಚಿನ್ ಬೇವೂರ,  ಉಮೇಶ ಕಮತಗಿ, ಮುತ್ತು ಪ್ರಭುನವರ, ಈರಣ್ಣ ಮೇಟಿ, ಮದನ ಮುರಗೋಡ ಇತರರು ಇದ್ದರು
WhatsApp Group Join Now
Telegram Group Join Now
Share This Article