ಬಳ್ಳಾರಿ, ಮಾ.13: ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಗಳಾದ ಕೆ. ದಯಾನಂದ ಅವರನ್ನು ಕಸಾಪ ಚುನಾಯಿತ ಜಿಲ್ಲಾಧ್ಯಕ್ಷ /ಗಡಿನಾಡ ಅಧ್ಯಕ್ಷರ ಒಕ್ಕೂಟದ ಪರವಾಗಿ ಅಧ್ಯಕ್ಷರುಗಳ ನಿಯೋಗವು ಬೆಂಗಳೂರಿನ ಕ.ಸಾ.ಪ ಕಚೇರಿಯಲ್ಲಿ ಭೇಟಿ ಮಾಡಿದರು.
ಜಿಲ್ಲಾ/ ತಾಲೂಕು ಸಾಹಿತ್ಯ ಸಮ್ಮೇಳನಗಳಗೆ ಅನುದಾನ, ದತ್ತಿ ಕಾರ್ಯಕ್ರಮಗಳ ಹಾಗೂ ವಾರ್ಷಿಕ ನಿರ್ವಹಣಾ ವೆಚ್ಚ ಜೊತೆಗೆ ಪರಿಷತ್ತಿನಿಂದ ಜಿಲ್ಲಾ ಘಟಕಗಳಿಗೆ ಬರಬೇಕಾದ ಬಾಕಿ ಅನುದಾನವನ್ನು ಬಿಡುಗಡೆ ಮಾಡುವಂತೆ, ಪ್ರಮುಖವಾಗಿ ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಶೀಘ್ರವೇ ಚಾಲನೆ ನೀಡುವಂತೆ ಒಕ್ಕೂಟದ ಪರವಾಗಿ ಜಿಲ್ಲಾ ಅಧ್ಯಕ್ಷರುಗಳು ಆಡಳಿತಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಎಂದು ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


