ನವದೆಹಲಿ: ರಾಷ್ಟ್ರೀಯತೆಯನ್ನು ಬೆಳೆಸಲು ಮತ್ತು ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಐತಿಹಾಸಿಕ ಇಂಡಿಯಾ ಗೇಟ್ ಅನ್ನು ‘ಭಾರತ್ ಮಾತಾ ದ್ವಾರ’ ಎಂದು ಮರುನಾಮಕರಣ ಮಾಡುವಂತೆ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಇಂಡಿಯಾ ಗೇಟ್ ಅನ್ನು ‘ಭಾರತ್ ಮಾತಾ ದ್ವಾರ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಇಂಡಿಯಾ ಗೇಟ್ ಜಾಗತಿಕ ವೇದಿಕೆಯಲ್ಲಿ ಭಾರತದ ಅಸ್ಮಿತೆಯ ಸಂಕೇತವಾಗಿದೆ. “ಇಂಡಿಯಾ ಗೇಟ್ ಕೇವಲ ಸ್ಮಾರಕವಲ್ಲ ಆದರೆ ಜಾಗತಿಕ ವೇದಿಕೆಯಲ್ಲಿ ಭಾರತದ ಅಸ್ಮಿತೆಯ ಸಂಕೇತವಾಗಿದೆ ಎಂದು ಗುರುತಿಸುವಂತೆ ನಾವು ಪ್ರಧಾನಿಯನ್ನು ವಿನಂತಿಸಿದ್ದೇವೆ.
ವಸಾಹತುಶಾಹಿ ಆಳ್ವಿಕೆಯ ಅವಶೇಷಗಳನ್ನು ತೊಡೆದುಹಾಕುವ ಮೂಲಕ ಮತ್ತು ಭಾರತೀಯ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಜೋಡಿಸಲು ವಿವಿಧ ಸ್ಥಳಗಳು ಮತ್ತು ಸಂಸ್ಥೆಗಳಿಗೆ ಮರುನಾಮಕರಣ ಮಾಡುವ ಮೂಲಕ “ಮೊಘಲ್ ಆಕ್ರಮಣಕಾರರು” ಮತ್ತು “ಬ್ರಿಟಿಷ್ ದರೋಡೆಕೋರರಿಂದ ಆಗಿರುವ ಗಾಯಗಳನ್ನು ಗುಣಪಡಿಸಲು ಮೋದಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿದ್ದಿಕಿ ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.