ರಾಜ್ಯ ರೈತ ಸಂಘ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣಾ ಸಂಘ ಹಾಗೂ ಅಖಂಡ ರೈತ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ರೈತರಿಗೆ ರಾಜ್ಯ ವಕ್ಪ್ ಮಂಡಳಿಯನ್ನು ಮುಂದಿಟ್ಟುಕೊಂಡು ಜಮೀನು ಕಬಳಿಸುವ ಹುನ್ನಾರು ಕೈ ಬಿಡುವಂತೆ ಆಗ್ರಹಿಸಿ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ನೇತೃತ್ವದಲ್ಲಿ ಉಪವಿಭಾಗಧಿಕಾರಿಗಳ ಮೂಲಕ ಕಂದಾಯ ಸಚಿವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಉದ್ಯಮಿ ವಿಜಯ ಮೆಟಗುಡ್ಡ, ಘೂಳಪ್ಪ ಹೊಳಿ, ಶಂಕರ ಭೀರಪ್ಪ ದೇಶನೂರ, ಬಸವರಾಜ ಮೊಕಾಶಿ, ಈರಪ್ಪ ಅಂಗಡಿ, ಬಸನಗೌಡ ಪಾಟೀಲ, ಸುರೇಶ ಸಂಪಗಾಂವ, ಮಂಡಲ ಅಧ್ಯಕ್ಷ ಸುಭಾಷ ತುರಮರಿ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಮಲ್ಲಿಕಾರ್ಜುನ ಕರಡಿಗುದ್ದಿ, ಮಹಾಂತೇಶ ವೀವೇಕಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರಗಿ, ವಿಶಾಲ ಬೋಗುರ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಅಜ್ಜಪ್ಪ ಹೊಸೂರ, ಬಸವರಾಜ ದುಗ್ಗಾಣಿ, ಆನಂದ ಮೂಗಿ,ಸಂಜೀವ ಮುರಗೋಡ, ಶಿವಯೋಗಿ ಹುಲ್ಲನ್ನೆವರ, ನಾಗಪ್ಪ ಸಂಗೊಳ್ಳಿ, ಗೌಡಪ್ಪ ಹೊಸಮನಿ, ರವಿ ತುರಮರಿ, ಸದಾಶಿವ ಪಾಟೀಲ, ಸುನೀಲ್ ಮಾಳೋದೆ, ಸೋಮಪ್ಪ ಸಂಗೋಳ್ಳಿ, ಮೋಹನ ವಕ್ಕುಂದ ಸೇರಿದಂತೆ ನೂರಾರು ರೈತರು ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಉಪವಿಭಾಗಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಮೂಲಕ ಕಛೇರಿಗೆ ತೇರಳಿ ಕಂದಾಯ ಸಚಿವರಿಗೆ ಮನವಿ ನೀಡಲಾಯಿತು.