ಬಳ್ಳಾರಿ: 28.opp ಕಾರ್ಮಿಕ ಸಂಗತಿಗಳ ಅಧಿಸೂಚನೆ ರಾಜ್ಯದ ದುಡಿಯವ ಜನರ ಮೇಲೆ ಎಸಗಲಾದ ಮೋಸದ ವಂಚೆನೆ ಹೋರಾಟ ಪ್ರತಿರೋಧ ಕರ್ನಾಟಕದಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದಂತೆ ಆಗ್ರಹಿಸಿ ಕಾರ್ಮಿಕ ಸಂಘಗಳ ಜಂಟಿ ವೇದಿಕೆ (ಜೆಸಿಟಿಯು) ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು,
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಉದ್ಯೋಗದಾತರ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಏಕ ಪಕ್ಷಯವಾಗಿ ಜಾರಿಗೊಳಿಸಿರುವುದನ್ನು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯ ತೀವ್ರವಾಗಿ ಖಂಡಿಸುತ್ತದೆ ಇದನ್ನು ರಾಜ್ಯದ ರಾಷ್ಟ್ರದ ದುಡಿಯುವ ಜನರ ವಿರುದ್ಧ ಕೇಂದ್ರ ಸರ್ಕಾರ ಎಸೆಗಿದ ಮೋಸದ ವಂಚನೆ ಎಂದಿದ್ದಾರೆ.
೨೧ ನವೆಂಬರ್ ೨೦೨೫ರಂದು ಅಧಿಸೂಚಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳ ಈ ನಿರಂಕುಶ ಮತ್ತು ಪ್ರಜಾಸತ್ತಾತ್ಮಕ ಆದಿಸೂಚನೆಯ ಎಲ್ಲಾ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಧಿಕ್ಕರಿಸುತ್ತದೆ. ಮತ್ತು ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ಧ್ವಸಗೊಳಿಸಿದೆ ಅಸ್ತಿತ್ವದಲ್ಲಿದ್ದ ೨೯ ಕೇಂದ್ರ ಕಾರ್ಮಿಕ ಕಾನೂನು ಗಳನ್ನು ರದ್ದುಗೊಳಿಸಿ ಜಾರಿಗೆ ತಂದ ದಿನದಿಂದಲೂ ೧೦ ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆಯು ಮತ್ತು ಸಿಐಟಿಯು ಈ ಕರಾಳ ಕಾರ್ಮಿಕ ಸಂಹಿತೆಗಳ ಜಾರಿಯನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.
೨೦೧೯ ರಲ್ಲಿ ವೇತನ ಸಂಹಿತ ಜಾರಿಗೆ ಬಂದ ನಂತರ ತಕ್ಷಣದ ಪ್ರತಿಭಟನೆಗಳನ್ನು ನಡೆಸಲಾಯಿತು ಮತ್ತು ಜನವರಿ ೨೦೨೦ರಲ್ಲಿ ಸಾರ್ವತ್ರಿಕ ಮುಷ್ಕರ ನಡೆಯಿತು ಉಳಿದ ಮೂರು ಕಾರ್ಮಿಕ ಸಂಹಿತೆಗಳು ಕೈಗಾರಿಕಾ ಸಂಬAಧಗಳ ಸಂಹಿತೆ ಸಾಮಾಜಿಕ ಭದ್ರತಾ ಸಹಿತ ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು ಸಮಿತಿ ೨೦೨೦ರ ಸೆಪ್ಟೆಂಬರ್ ಜಾರಿಗೆ ಬಂದ ನಂತರ ತಕ್ಷಣದ ಪ್ರತಿಭಟಗಳನ್ನು ನಡಸಲಾಯಿತು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (Sಏಒ)ನೇತೃತ್ವದ , ಐತಿಹಾಸಿಕ ದೆಹಲಿ ಚಲೋ ಜೊತೆಗೆ ನವಂಬರ್ ೨೬ ರಂದು ಐತಿಹಾಸಿಕ ಸಾರ್ವತ್ರಿಕ ಮುಷ್ಕರನ್ನು ಆಚರಿಸಲಾಯಿತು. ಇದಲ್ಲದೆ ಇತ್ತೀಚಿನ ಜುಲೈ ೯ ೨೦೨೫ ರ ಸಾರ್ವತ್ರಿಕ ಮುಷ್ಕರಕ್ಕೆ ಕಾರಣವಾದ ಹಲವಾರು ಜಂಟಿ ಹೋರಾಟಗಳನ್ನು ನಡೆಸಲಾಯಿತು ಇದರಲ್ಲಿ ೨೫ ಕೋಟಿ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.
ತೀವ್ರ ಪ್ರತಿರೋಧದ ಹೊರತಾಗಿಯು ಕೇಂದ್ರದಲ್ಲಿನ ಆಡಳಿತರೂಡ ಸರ್ಕಾರವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಧ್ಯಮ ವರದಿಗಳು ಮತ್ತು ಟ್ವೆಟುಗಳ ಪ್ರಕಾರ ನವಂಬರ್ ೨೧ ರಂದು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊ ಮುಂದಾಗಿದೆ,
ಕೇAದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆಯು ವಿವಿಧ ವಲಯಗಳ ಭಾರತದಲ್ಲಿ ದುಡಿಯುವ ಜನರಿಗೆ ನ.೨೬ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತರೊಂದಿಗೆ ಸೇರಿ ಹೋರಾಟದ ಪ್ರತಿರೋಧ ಮತ್ತು ದಿಕ್ಕಾರ ಪ್ರದರ್ಶಿಸಲು ಕರೆ ನೀಡಿದೆ, ಕಾರ್ಮಿಕ ಸಂಹಿತಿಗಳ ಜಾರಿ ವಿರುದ್ಧ ಮತ್ತು ಕರಡು ಶ್ರಮಶಕ್ತಿ ನೀತಿ ೨೦೨೫ ಹಿಂಪಡೆಯಲು ದೇಶಾದ್ಯಂತ ಪ್ರತಿಯೊಂದು ಕೆಲಸದ ಸ್ಥಳದಲ್ಲಿಯೂ ಪ್ರತಿರೋಧ ವ್ಯಕ್ತಪಡಿಸಲು ಕರೆ ನೀಡಲಾಗಿದೆ.
ಕೇಂದ್ರ ಸರ್ಕಾರ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕೆಂದು ಆಗ್ರಹಿಸಿದೆ.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಜೆ.ಸತ್ಯಬಾಬು, ಜಿಲ್ಲಾ ಪ್ರದಾನ ಕಾರ್ಯದರ್ಶಿ ಎ.ಮಲ್ಲಮ್ಮ, ಜಂಟಿ ಕಾರ್ಯ ದರ್ಶಿ ಎಂ.ತಿಪ್ಪೇಸ್ವಾಮಿ, ಎಚ್ ಬಿ ಒಬೆಲೇಶಪ್ಪ. ಬಿ.ಎಲ್.ಈರಣ್ಣ ಸೇರಿದಂತೆ ಮತ್ತಿತರು ಇದ್ದರು.


