ಚನ್ನಮ್ಮನ ಕಿತ್ತೂರು. ಭೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ ಪಾಂಚಾಳ ಅವರು ಪ್ರಿಯಾಂಕ ಖರ್ಗೆ ಹೆಸರು ಪ್ರಸ್ತಾಪಿಸಿ ಡೆತ ನೋಟ್ ಬರೆದಿಟ್ಟು ಸಾವನಪ್ಪಿರುವ ಹಿನ್ನೆಲೆಯಲ್ಲಿ ಗ್ರಾಮೀಣಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಕಿತ್ತೂರು ಮಂಡಲ ವತಿಯಿಂದ ಪ್ರತಿಭಟನೆ ಮಾಡಿ ತಹಶೀಲ್ದಾರ ಕಾರ್ಯಾಲಯದ ಮೂಲಕ ರಾಜಪಾಲಕರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷರಾದ ಶ್ರೀಕರ ಕುಲಕರ್ಣಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ,ಜಿಲ್ಲಾ ಕಾರ್ಯದರ್ಶಿ ಶಿವಾನಂದ ಹನುಮಸಾಗರ,ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಕೊಳದೂರ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದು ಬೋಳನ್ನವರ,ರಮೇಶ ಉಗರಕೋಡ,ಬಿಜೆಪಿ ಮುಖಂಡರಾದ ಉಳವಪ್ಪ ಉಳ್ಳಾಗಡ್ಡಿ,ರವಿರಾಜ ಇನಾಮದಾರ,ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಮಹಾಂತೇಶ ಚನ್ನಪ್ಪಗೌಡ,ಯುವಮೋರ್ಚಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುಲಕರ್ಣಿ ಪಟ್ಟಣ ಪಂಚಾಯತಿ ಸದಸ್ಯರಾದ ಕಿರಣ್ ಪಾಟೀಲ,ನಾಗರಾಜ ಅಸುಂಡಿ,ಪ್ರಮೋದ ಕಾಜಗಾರ,ಮಂಜುನಾಥ ತೊಟ್ಟಲಮಣಿ ಇನ್ನಿತರರು ಭಾಗಿಯಾಗಿದ್ದರು.