ಬೆಳಗಾವಿ: ವೀರರಾಣಿ ಕಿತ್ತೂರು ಚೆನ್ನಮ್ಮ ಜಿ ಅವರ ಐತಿಹಾಸಿಕವಾದ ೨೦೦ ವಿಜಯೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕೆಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿಯು ಆಗ್ರಹಪಡಿಸಿದೆ.
ಈ ಕುರಿತಂತೆ ರಾಚವಿಯ ಕುಲಪತಿ ಪ್ರೊ ಸಿ.ಎಂ.
ತ್ಯಾಗರಾಜ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ,
ಹೋರಾಟ ಸಮಿತಿಯ ಸಂಚಾಲಕ ಮಂಜುನಾಥ ವಸ್ತ್ರದ ಆಂಗ್ಲರಿಗೆ ಸಿಂಹ ಸಿಂಹ ಸ್ವಪ್ನವಾಗಿ ಕಾಡಿದ್ದ ಕಿತ್ತೂರು ಸಂಸ್ಥಾನದ ಕಿಚ್ಚನ್ನು ಬಡೆದೆಬ್ಬಿಸಿತ್ತು. ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರು ಆಂಗ್ಲರ ಸರ್ವಾಧಿಕಾರವನ್ನು ಧಿಕ್ಕರಿಸಿ ಅವರನ್ನು ಯುದ್ಧದಲ್ಲಿ ಸೋಲಿಸಿದರು.
ಈ ಐತಿಹಾಸಿಕ ವಿಷಯದ ಕುರುವಾಗಿ ಪ್ರತಿ ವರ್ಷ ಅಕ್ಟೋಬರ್ ನಲ್ಲಿ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ ಈ ಬಾರಿ ವಿಜಯೋತ್ಸವಕ್ಕೆ ೨೦೦ ವರ್ಷಗಳ ಸುದೀರ್ಘ ಇತಿಹಾಸದ ವಿಶೇಷತೆ ಇದೆ. ಹಾಗಾಗಿ ಈ ದಿನವನ್ನು ಇನ್ನೂ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮುಂದಾಗ ಬೇಕೆಂದು ಅವರು ಹೇಳಿದರು.
ಕಿತ್ತೂರಿನ ಸಮರಂಗಣದಲ್ಲಿ ದಿಟ್ಟತನದಿಂದ ಹೋರಾಡಿದ ಅಮಟೂರು ಬಾಳಪ್ಪ, ಸರದಾರ ಗುರುಸಿದ್ದಪ್ಪ, ಬಿಚ್ಚುಗತ್ತಿಯ ಚನ್ನಬಸಪ್ಪ, ಗಜವೀರ, ಸಂಗೊಳ್ಳಿ ರಾಯಣ್ಣ, ಸೇರಿದಂತೆ ಇನ್ನೂ ಹಲವಾರು ಕಿತ್ತೂರಿನ ಕಲಿಗಳ ತ್ಯಾಗ ಬಲಿದಾನ ದೇಶಭಕ್ತಿ ಯುವ ಸಮೂಹ ಹಾಗೂ ವಿದ್ಯಾರ್ಥಿಗಳಿಗೆ ದಾರಿದೀಪ ಇದ್ದಂತೆ ಹಾಗಾಗಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಎಲ್ಲಾ ಮಹಾವಿದ್ಯಾಲಯಗಳಲ್ಲಿ ಈ ಬಾರಿಯ ೨೦೦ನೇ ವಿಜಯೋತ್ಸವವೂ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು.
ಚೆನ್ನಮ್ಮಾಜಿಯ ಸೇರಿದಂತೆ ಇತರ ಸೇನಾನಿಗಳ ರಾಷ್ಟ್ರಭಕ್ತಿ ಸಮರ್ಪಣಾ ಮನೋಭಾವಗಳ ವ್ಯಕ್ತಿತ್ವದ ಅರಿವು ಮೂಡುವ ನಿಟ್ಟಿನಲ್ಲಿ ಕ್ರಿಯಾತ್ಮಕ ಚಟುವಟಿಕೆಗಳು ಎಲ್ಲಾ ಮಹಾವಿದ್ಯಾಲಯಗಳಲ್ಲಿ ನಡೆಸಿ ವರದಿ ನೀಡುವಂತೆ ನಿರ್ದೆಶನ ನೀಡಬೇಕೆಂದು ವಿಶ್ವವಿದ್ಯಾಲಯ ಕುಲಪತಿಗಳನ್ನು ಆಗ್ರಹಿಸಿದರು. ಮನವಿ ಸ್ವೀಕರಿಸಿದ, ಕುಲಪತಿ ನಾವು ಈಗಾಗಲೇ ಈ ಬಗ್ಗೆ ಕಾರ್ಯುನ್ಮುಖರಾಗಿದ್ದು ತಮ್ಮೆಲ್ಲ ಸಲಹೆಗಳನ್ನು ಸಹ ಶ್ರೀಘ್ರ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಡಾ.ಅಡಿವೆಪ್ಪ ಇಟಗಿ, ಉಪನ್ಯಾಸಕರಾದ ಬಸವರಾಜ ಮಠಪತಿ, ಬಾಳಗೌಡ ದೊಡ್ಡಬಂಗಿ, ಹಿರಿಯ ಸಾಹಿತಿ ಸ.ರಾ.ಸೂಳಕೂಡೆ, ನ್ಯಾಯವಾದಿಗಳಾದ ಸುನೀಲ ಸಾಣಿಕೊಪ್ಪ, ಸಿ.ಎಸ್.ಕಠಾಪುರಿಮಠ, ಸೇರಿದ್ದಂತೆ ಇತರರು ಉಪಸ್ಥಿತರಿದ್ದರು.