ರಮೇಶ್‌ಕತ್ತಿ ವಿರುದ್ಧ ಕ್ರಮಕ್ಕೆ ಒತ್ತಾಯ

Ravi Talawar
ರಮೇಶ್‌ಕತ್ತಿ ವಿರುದ್ಧ ಕ್ರಮಕ್ಕೆ ಒತ್ತಾಯ
WhatsApp Group Join Now
Telegram Group Join Now
ಬಳ್ಳಾರಿ,ಅ.೨೧: ಬೆಳಗಾವಿಯ ರಮೇಶ್‌ಕತ್ತಿಯವರು ವಾಲ್ಮೀಕಿ ನಾಯಕ ಬೇಡರ ಜಾತಿಯನ್ನು ಅವ್ಯಾಚ ಶಬ್ದಗಳಿಂದ ಬೈದು ಜಾತಿ ನಿಂದನೆಯನ್ನು ಮಾಡಿರುವುದನ್ನು ವಾಲ್ಮೀಕಿ ಸಮುದಾಯದ ಯುವ ಮುಖಂಡರುಗಳು ಖಂಡಿಸಿ, ಎಸ್ಸಿ- ಎಸ್‌ಟಿ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದರು.
ಬೆಳಗಾವಿಯ ಬಿ.ಕೆ.ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣಾ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಬೆಲ್ಲದ ಬಾಗೇವಾಡಿಯ ರಮೇಶ್‌ಕತ್ತಿ ಎಂಬ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರು, ವಾಲ್ಮೀಕಿ ಸಮುದಾಯದ ಕುರಿತು ಅವ್ಯಾಚ ಶಬ್ದಗಳಿಂದ ಬೇಡರ ಜಾತಿಯನ್ನು ನಿಂದನೆ ಮಾಡಿ ಅವಮಾನಿಸಿರುವುದು ರಾಜ್ಯಾದ್ಯಂತ ೭೫ ಲಕ್ಷ ವಾಲ್ಮೀಕಿ ನಾಯಕ ಸಮುದಾಯದವರ ಮನಸ್ಸಿಗೆ ತೀವ್ರವಾಗಿ ಘಾಸಿಯಾಗಿದೆ, ಹಾಗೂ ನಮ್ಮ ಭಾವನೆಗಳಿಗೆ ಧಕ್ಕೆಯೂ ಆಗಿದೆ, ತೀವ್ರ ಆಘಾತವಾಗಿರುವುದರಿಂದ, ಅವರು ಮಾತನಾಡಿದ ಆ ವಿಡಿಯೋ ಸಾಮಾಜಿ¬ಕ ಜಾಲತಾಣಗಳಲ್ಲಿ ಹರಿದಾಡಿದೆ. ಇದರಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಡುವ ಸಂಭವವಿದೆ, ರಾಜ್ಯದಲ್ಲಿ ಸತತವಾಗಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ಅವಹೇಳನಕಾರಿಯಾಗಿ ಬಿಂಬಿಸುವ ಕೆಲಸ ಮಾಡಿರುತ್ತಾರೆ, ಮೇಲು ಕೀಳು ಭಾವನೆಗಳಿಗೆ ಚಾಲನೆ ನೀಡುವುದರ ಮೂಲಕ ಡಾ||ಬಾಬಾ ಸಾಹೇಬ ಅಂಬೇಡ್ಕರ್ ಸಂವಿಧಾನವನ್ನು ಅವಮಾನಿಸಿದ್ದು ಅಲ್ಲದೆ, ರಮೇಶ್‌ಕತ್ತಿ ಸತತವಾಗಿ ಕೆಳ ಸಮುದಾಯಗಳ ಭಾವನೆಗಳನ್ನು ಘಾಸಿ ಉಂಟು ಮಾಡಿರುತ್ತಾನೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರುಗಳಾದ ಪಿ.ಜಗನ್ನಾಥ್, ವಿ.ಕೆ. ಬಸಪ್ಪ, ಅವ್ವಂಬಾವಿ ಟಿ.ಲೋಕೇಶ್, ಅವ್ವಂಬಾವಿ ಟಿ.ಗಂಗಾಧರ, ಕಲಾವತಿ, ಬಸರಕೋಡು ಗೋವಿಂದರಾಜುಲು, ಕರ್ಚೆಡು ಬಸವರಾಜ, ದಮ್ಮೂರು ಹೊನ್ನೂರ, ದಮ್ಮೂರ ಹೊನ್ನೂರಪ್ಪ, ಕಪ್ಪಗಲ್ಲು ಓಂಕಾರಪ್ಪ, ಸಿಂಧುವಾಳ ಅರುಣ್ ಕುಮಾರ್, ಅಸುಂಡಿ ಹನುಮೇಶ, ವಣೀನೂರು ಶ್ರೀನಿವಾಸ, ಕಗ್ಗಲ್ ದೇವೇಂದ್ರ, ಸಿಂಧುವಾಳ ಧರ್ಮಣ್ಣ, ಪಾಲಾಕ್ಷಿ, ಶ್ರೀಕಾಂತ್, ಚೇಳುಗುರ್ಕಿ ತಿಪ್ಪೇರುದ್ರ, ಮೀನಹಳ್ಳಿ ಶ್ರೀರಾಮುಲು, ಚಾಗನೂರು ರಾಮಕೃಷ್ಣ, ಸಂಗನಕಲ್ಲು ವಿಜಯಕುಮಾರ್ ಇದ್ದರು.
WhatsApp Group Join Now
Telegram Group Join Now
Share This Article