ಕಾಗವಾಡ: ರಾಜ್ಯ ಸರ್ಕಾರದ ರೈತರು ಹಾಗೂ ಬಡವರಿಗಾಗಿ ಹತ್ತು ಹಲವು ಯೋಜನೆಗಳನ್ನು ತಂದಿದ್ದು ಅವುಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅರ್ಹ ಪಲಾನುಭವಿಗಳಿಗೆ ಒದಗಿಸುವ ಕೆಲಸವಾಗಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.
ಸೋಮುವಾರ ಕಾಗವಾಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ 2025-26 ನೇ ಕೆಡಿಪಿ ಸಭೆಯಲ್ಲಿ ಹಲವು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ ಸರ್ಕಾರದ ಯೋಜನೆ ಅರ್ಹ ಬಡ ಜನರಿಗೆ ತಲುಪದೆ ಉಳ್ಳವರ ಪಾಲಗುತ್ತಿದ್ದು ಇದನ್ನು ಅಧಿಕಾರಿಗಳು ಸರಿಪಡಿಸಿ ನೈಜ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು,ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಆಗದಂತೆ ಹೆಚ್ಚಿನ ದಾಸ್ತಾನು ಮಾಡಿ ಅನುಕೂಲ ಮಾಡಬೇಕು ಎಂದರು,ದ್ರಾಕ್ಷಿ ಬೆಳೆ ಹಾನಿ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡದ ತೋಟಗಾರಿಕೆ ಅಧಿಕಾರಿ ರೇಖಾ ಹಳ್ಳೂರ ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಯಾಕೆ ಬರುತ್ತಿರಾ ಎಂದು ತರಾಟೆಗೆ ತೆಗೆದುಕೊಂಡರು.
ಕೃಷಿ ಇಲಾಖೆದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ಬಗ್ಗೆ ಗೊಬ್ಬರಗಳು ಬಗ್ಗೆ ವಿಸ್ತಾರವಾದ ಮಾಹಿತಿ ಕೃಷಿ ಅಧಿಕಾರಿ ನಿಂಗಪ್ಪ ಬಿರಾದರ್ ನೀಡಿದರು. ತಾಲೂಕ ಪಂಚಾಯಿತಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ತಾಲ್ಲೂಕಿನ ಎಂಟು ಗ್ರಾಮ ಪಂಚಾಯಿತಿಗಳ ಪ್ರಗತಿ ಬಗ್ಗೆ ಮತ್ತು ಕೈಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರ ರವೀಂದ್ರ ಹಾದಿಮನಿ ಕಂದಾಯ ಇಲಾಖೆಯ ಎಲ್ಲಾ ವಿಸ್ತಾರವಾದ ಮಾಹಿತಿ ನೀಡಿದರು.
ಈ ಸಮಯದಲ್ಲಿ ಅಥಣಿ ತಹಶಿಲ್ದಾರ ಸಿದರಾಯ ಬೊಸಗಿ,ರವೀಂದ್ರ ಹಾದಿಮನಿ,ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಹುಣಸಿಕಟ್ಟಿ,ಶಿವಾನಂದ ಕಲ್ಲಾಪೂರ,ಮಲ್ಲಿಕಾರ್ಜುನ ಮಗದುಮ್ಮ,ಬಿಇಒ ಪಾಂಡುರಂಗ ಮದಭಾವಿ,ರಾಕೇಶ ಅರ್ಜುನಾವಾಡ,ಮಹಾಂತೇಶ ಕವಲಾಪೂರ,ಅಶೋಕ ಸತಿಗೌಡರ,ರವೀಂದ್ರ ಮುರಗಾಲಿ ಸೇರಿದಂತೆ ಅನೇಕರು ಇದ್ದರು.


