ಜಲ ಸತ್ಯಾಗ್ರಹ ಆರಂಭಿಸಿದ ದೆಹಲಿ ಸಚಿವೆ ಅತಿಶಿ

Ravi Talawar
ಜಲ ಸತ್ಯಾಗ್ರಹ ಆರಂಭಿಸಿದ ದೆಹಲಿ ಸಚಿವೆ ಅತಿಶಿ
WhatsApp Group Join Now
Telegram Group Join Now

ದೆಹಲಿ ಜೂನ್ 21: ದೆಹಲಿ ನೀರಿನ ಬಿಕ್ಕಟ್ಟಿನ ಕುರಿತು ದೆಹಲಿ ಸಚಿವೆ ಅತಿಶಿ  ಶುಕ್ರವಾರ ಮಧ್ಯಾಹ್ನ ಅನಿರ್ದಿಷ್ಟ ಉಪವಾಸವನ್ನು ಪ್ರಾರಂಭಿಸಿದ್ದಾರೆ. ಸಾಧ್ಯವಾದ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಹರಿಯಾಣ ಸರ್ಕಾರವು ದೆಹಲಿಗೆ ಸಮರ್ಪಕವಾಗಿ ನೀರನ್ನು ನೀಡುತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಡಬೇಕಾದರೆ ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಮಹಾತ್ಮ ಗಾಂಧಿ ಬೋಧಿಸಿದ್ದಾರೆ. ಇಂದಿನಿಂದ ‘ಜಲ ಸತ್ಯಾಗ್ರಹ’ ಆರಂಭಿಸುತ್ತೇನೆ.

ಬೆಳಗ್ಗೆ 11 ಗಂಟೆಗೆ ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಮಧ್ಯಾಹ್ನ 12ರಿಂದ ಭೋಗಲ್, ಜಂಗಪುರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸುತ್ತೇನೆ. ದೆಹಲಿಯ ಜನರು ಹರಿಯಾಣದಿಂದ ತಮ್ಮ ಸರಿಯಾದ ನೀರಿನ ಪಾಲನ್ನು ಪಡೆಯುವವರೆಗೂ ನಾನು ಉಪವಾಸ ಇರುತ್ತೇನೆ” ಎಂದು ಉಪವಾಸ ಆರಂಭಿಸುವ ಮುನ್ನ ಅತಿಶಿ ಎಕ್ಸ್ ನಲ್ಲಿ ಬರೆದಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವರಾದ ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್ ಮತ್ತು ಇತರ ಶಾಸಕರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಜಮಾಯಿಸಿದ್ದು ಅಲ್ಲಿಂದ ರಾಜ್ ಘಾಟ್ ಕಡೆಗೆ ತೆರಳಿದ್ದಾರೆ . ಸಿಎಂ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಕೂಡ ಆಮ್ ಆದ್ಮಿ ಪಕ್ಷದ ನಾಯಕರ ಜೊತೆ ರಾಜ್ ಘಾಟ್ ಗೆ ಬಂದಿದ್ದಾರೆ.

WhatsApp Group Join Now
Telegram Group Join Now
Share This Article