ಕೇಜ್ರಿವಾಲ್ ವಿಡಿಯೋ ರೆಕಾರ್ಡಿಂಗ್ ತೆಗೆದುಹಾಕುವಂತೆ ಸುನಿತಾ ಕೇಜ್ರಿವಾಲ್​ಗೆ  ದೆಹಲಿ ಹೈಕೋರ್ಟ್ ಆದೇಶ

Ravi Talawar
ಕೇಜ್ರಿವಾಲ್ ವಿಡಿಯೋ ರೆಕಾರ್ಡಿಂಗ್ ತೆಗೆದುಹಾಕುವಂತೆ ಸುನಿತಾ ಕೇಜ್ರಿವಾಲ್​ಗೆ  ದೆಹಲಿ ಹೈಕೋರ್ಟ್ ಆದೇಶ
WhatsApp Group Join Now
Telegram Group Join Now

ನವದೆಹಲಿ: ದೆಹಲಿಯ ನ್ಯಾಯಾಲಯವನ್ನು  ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡುತ್ತಿರುವ ವಿಡಿಯೋ ರೆಕಾರ್ಡಿಂಗ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತೆಗೆದುಹಾಕುವಂತೆ ಸುನಿತಾ ಕೇಜ್ರಿವಾಲ್​ಗೆ  ದೆಹಲಿ ಹೈಕೋರ್ಟ್ ಆದೇಶಿಸಿದೆ. ಆ ವಿಡಿಯೋಗೆ ಲಿಂಕ್ ಮಾಡಿದ ಪೋಸ್ಟ್‌ಗಳನ್ನು ಕೂಡ ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನ್ಯಾಯಾಲಯ ಆದೇಶಿಸಿದೆ.

ಮಾರ್ಚ್ 28ರಂದು ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಹಾಜರುಪಡಿಸಿದಾಗ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಕೋರಿ ವಕೀಲ ವೈಭವ್ ಸಿಂಗ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಎಲ್ಲಾ ಕಕ್ಷಿದಾರರಿಗೆ ಹೈಕೋರ್ಟ್ ನೋಟಿಸ್ ನೀಡಿತ್ತು.

ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕಲು ಸೂಚಿಸಲಾದ ಐವರು ವ್ಯಕ್ತಿಗಳಲ್ಲಿ ಸುನಿತಾ ಕೇಜ್ರಿವಾಲ್ ಕೂಡ ಒಬ್ಬರು. ದೆಹಲಿ ಹೈಕೋರ್ಟ್ ಜುಲೈ 9ರಂದು ಈ ಪ್ರಕರಣದ ವಿಚಾರಣೆಯನ್ನು ಪಟ್ಟಿ ಮಾಡಿದೆ.

 

 

WhatsApp Group Join Now
Telegram Group Join Now
Share This Article