ಬೆಳಗಾವಿ. ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಮಹಾನಗರ ವತಿಯಿಂದ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು ಅಭಯ ಪಾಟೀಲ ಅವರು ಮಾತನಾಡಿ ಸುಳ್ಳು ಭ್ರಷ್ಟಾಚಾರ ದೇಶವನ್ನು ಒಡೆಯುವ ಕೆಲಸ ಹಳೆಯ ಸರ್ಕಾರದಾಗಿತ್ತು. ದೆಹಲಿ ಜನತೆ ತಕ್ಕ ಉತ್ತರ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಕೋತ, ಕೋಶ್ಯಾಧ್ಯಕ್ಷರು ಸಂತೋಷ ದೇಶನೂರ, ಬಿಜೆಪಿ ಮುಖಂಡರಾದ ಮುರುಗೇಂದ್ರ ಗೌಡ ಪಾಟೀಲ್. ದಾದಾಗೌಡ ಬಿರಾದರ, ಉಜ್ವಲಾ ಬಡವಾನಚೆ, ವಿಠ್ಠಲ ಸಾಯನ್ನವರ, ಜಿಲ್ಲಾ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.