ಅಥಣಿ,14: ಸಿ ಎಂ ಅರವಿಂದ ಕೇಜ್ರಿವಾಲ್ ಇಡಿ ಅಧಿಕಾರಿಗಳು ಅಕ್ರಮವಾಗಿ ಬಂಧಿಸಿದ್ದರಿAದ ನ್ಯಾಯಾಲಯದ ಮೂಲಕ ಇಂದು ಬಿಡುಗಡೆಯಾಗಿದ್ದು, ಅಥಣಿ ಪಟ್ಟಣ ಶಿವಯೋಗಿ ವೃತ್ತದಲ್ಲಿ ಶನಿವಾರ ಎಎಪಿ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು
ಈ ವೇಳೆ ಮಾತನಾಡಿದ ಎಎಪಿ ಪಕ್ಷದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಅಫಾನ್ ಮಾಸ್ಟರ್ ಅವರು, ಕೇಂದ್ರದ ಬಿಜೆಪಿ ಸರಕಾರ ಸಿ ಎಂ ಅರವಿಂದ ಕೇಜ್ರಿವಾಲ್ ಅವರನ್ನು ಹಾಗೂ ಎಎಪಿ ಪಕ್ಷದ ಮುಖಂಡರನ್ನು ವಿನಾಕಾಣ ಇಡಿ, ಸಿಬಿಐ, ಹಾಗೂ ಐಟಿ ಅಧಿಕಾರಿಗಳ ಸುಳ್ಳು ಕೇಸ್ಗಳನ್ನು ಹಾಕುವ ಮೂಲಕ ಜೈಲಿಗೆ ಕಳುಹಿಸುತ್ತಿದ್ದಾರೆ. ಆದರೆ ಇಂದು ನ್ಯಾಯಾಲಯ ಸಿ ಎಂ ಅರವಿಂದ ಕೇಜ್ರೀವಾಲ್ ಅವರಿಗೆ ಜಾಮಿನು ನೀಡಿದ್ದು ನ್ಯಾಯಕ್ಕೆ ಸಿಕ್ಕ ಜಯವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಅವರಿಂದ ಎಎಪಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲುವದು ನಿಶ್ಚಿತವಾಗಿದೆ. ಮತ್ತೇ ಎಎಪಿ ಪಕ್ಷ ಸದೃಡವಾಗಲಿದೆ ಎಂದು ಹೇಳಿದರು
ಈ ವೇಳೆ ಸುಭಾಸ ಬಾಮನೆ, ರಿಯಾಜ್ ಮೋಮಿನ್, ವಿದ್ಯಾಧರ ಪರೀಟ್, ಯೂಸುಫ್ ಸನದಿ, ಪ್ರಶಾಂತ ಕಾಂಬಳೆ, ಮಹಾದೇವ ಕುಂಬಾರ, ಸೇರಿದಂತೆ ಅನೇಕ ಎಎಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು