ದಾರುಕಾಸ್ವಾಮಿ ಟಿ. ಎಚ್.ಎಂಗೆ ಪಿಹೆಚ್. ಡಿ. ಪದವಿ ಪ್ರದಾನ

Ravi Talawar
ದಾರುಕಾಸ್ವಾಮಿ ಟಿ. ಎಚ್.ಎಂಗೆ ಪಿಹೆಚ್. ಡಿ. ಪದವಿ ಪ್ರದಾನ
WhatsApp Group Join Now
Telegram Group Join Now
ಹೊಸಪೇಟೆ,ಮೇ.16.: ನಗರದ ಶ್ರೀ ಶಂಕರ್ ಆನಂದ್‌ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ
ದಾರುಕಾಸ್ವಾಮಿ ಟಿ.ಎಚ್.ಎಂರವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ
ಪ್ರದಾನ ಮಾಡಿದೆ.
ಡಾ.ಕೊಟ್ರೇಶ್ ಎಂ ಜಿ, ಸಹಾಯಕ ಪ್ರಾಧ್ಯಾಪಕರು, ಭೌತಶಾಸ್ತ್ರ ಅಧ್ಯಯನ ವಿಭಾಗ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇವರ ಮಾರ್ಗದರ್ಶನದಲ್ಲಿ ದಾರುಕಾಸ್ವಾಮಿ ಟಿ. ಎಚ್.ಎಂಇವರು “ಸ್ಪೆಕ್ಟ್ರೋ ಸ್ಕೋಪಿಕ್‌ ಅಂಡ್‌ ಕಾಂಪ್ಯೂಟೇಷನಲ್‌ ಇನ್ವೆಸ್ಟಿಗೇಷನ್ ಆಫ್ ನಾವೆಲ್‌ ಫ್ಲೋರೆಸೆಂಟ್ ಪ್ರೋಬ್ಸ್” ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಪಿಹೆಚ್.ಡಿ. ಪದವಿಯನ್ನು ಪಡೆದಿರುತ್ತಾರೆ. ಈ ಸಾಧನೆಯು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದ್ದು ಪ್ರಾಂಶುಪಾಲರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದಾರುಕಾಸ್ವಾಮಿ ಟಿ. ಎಚ್.ಎಂಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
WhatsApp Group Join Now
Telegram Group Join Now
Share This Article