ಬಳ್ಳಾರಿ ಸೆ 16. ಗಣಿನಾಡು ಬಳ್ಳಾರಿ ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ 2010-2012ನೇ ಸಾಲಿನ ಹಳೆಯ ಪ್ರಾಶಿಕ್ಷಣಾರ್ಥಿ ಗಳು ನೇತೃತ್ವದಲ್ಲಿ ಗುರುವಂದನಾ ಮತ್ತು ಸ್ನೇಹಕೂಟ ಕಾರ್ಯಕ್ರಮ ಭಾನುವಾರ ನಡೆಯಿತು.
15 ವರ್ಷಗಳ ನಂತರ ಪಾಠ ಪ್ರವಚನ ಮಾಡಿದ ಉಪನ್ಯಾಸಕ ವೃಂದದವರಿಗೆ ಮತ್ತು ಬೋಧಕ್ಕೇತರ ಸಿಬ್ಬಂದಿ ವರ್ಗದವರಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.ಈ ಸಮಯದಲ್ಲಿ ಎ. ಹನುಮಕ್ಕ, ಮರಿಮದ ನಾಯಕ್, ಬಂಡಿ ವೀರಪ್ಪ, ಸತ್ಯವಾನ್ ಬೋಗರ್, ಜೆ.ಎಂ ತಿಪ್ಪೇಸ್ವಾಮಿ, ನರಸಿಂಹಪ್ಪ ಅವರು ಹಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಮಯದಲ್ಲಿ ನಿರೂಪಣೆ ರಾಜಶೇಖರ ಬೊಮ್ಮಘಟ್ಟ ಬಿಂದು ಚಿತ್ರದುರ್ಗ, ಸ್ವಾಗತ ಮಾರುತಿ, ವಂದನಾರ್ಪಣೆ ರಾಮಾಂಜನಿ, ಪ್ರಾಸ್ತಾಯಕವಾಗಿ ಗಿರೀಶ್ ಕುಮಾರ್ ಗೌಡ ಮಾತನಾಡಿದರು.ಈ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಹ ನಿರ್ದೇಶಕರಾದ ಎ. ಹನುಮಕ್ಕ, ಡಯಟ್ ನ ಪ್ರಾಂಶುಪಾಲ ಜೆ .ಎಂ ತಿಪ್ಪೇಸ್ವಾಮಿ, ನಿವೃತ್ತ ಪ್ರಾಂಶುಪಾಲ ಮರಿಮದ ನಾಯಕ್, ಉಪನ್ಯಾಸಕರ ಆರ್.ಎಲ್ ಜಾದವ್, ಸತ್ಯವಾನ್ ಬೋಗಾರ್, ಪಾರ್ವತಿ, ಸಾವಿತ್ರಿ, ಪ್ರೇಮಲತಾ, ಶಂಕರ್ , ನಿರ್ಮಲ, ಸಂಗವ್ವ ಬಾವಿಕಟ್ಟಿ, ಶಿವಕುಮಾರ್ ಮತ್ತು ಹಳೆ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.