ಸಾಮೂಹಿಕ ರಾಜೀನಾಮೆಗೆ ಬಿಜೆಪಿಯ ಮೂಲ ಕಾರ್ಯಕರ್ತರ ನಿರ್ಧಾರ

Hasiru Kranti
ಸಾಮೂಹಿಕ ರಾಜೀನಾಮೆಗೆ ಬಿಜೆಪಿಯ ಮೂಲ ಕಾರ್ಯಕರ್ತರ ನಿರ್ಧಾರ
WhatsApp Group Join Now
Telegram Group Join Now

ಜಮಖಂಡಿ; ಕ್ಷೇತ್ರದ ಮೂಲ ಬಿಜೆಪಿ ಕಾರ್ಯಕರ್ತರು ಮನನೊಂದು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾಗಿ ಮುಖಂಡ ಉಮೇಶ ಆಲಮೇಲ್ಕರ ತಿಳಿಸಿದರು. ಶುಕ್ರವಾರ ರಮಾನಿವಾಸ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಗುಡಗುಂಟಿ ಅವರಿಗೆ ಸರಿಯಾದ ಮಾಹಿತಿ ನೀಡದೇ ಕೆಲವರು ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಾಣಿಸಿ, ಪಕ್ಷದಲ್ಲಿ ಹೆಸರು ಇಲ್ಲದ, ಸಾರ್ವಜನಿಕವಾಗಿ ಪರಿಚಯ ಇಲ್ಲದವರನ್ನು ಗ್ರಾಮೀಣ ಹಾಗೂ ನಗರ ಮಂಡಲಗಳಿಗೆ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಮೂಲ ಕಾರ್ಯಕರ್ತರಿಗೆ ಯಾವುದೇ ಜವಾಬ್ದಾರಿಗಳನ್ನು ನೀಡದೇ ಕಡೆಗಣಿಸಲಾಗಿದೆ. ಇದರಿಂದ ಮನನೊಂದು ಸಾಮೂಹಿಕ ರಾಜೀನಾಮೆ ನೀಡುತ್ತಿರುವದಾಗಿ ತಿಳಿಸಿದ್ದಾರೆ. ಹಿಂದುತ್ವ, ಹಿಂದುರಾಷ್ಟ್ರದ ಸಿದ್ಧಾಂತಕ್ಕೆ ತಲೆಬಾಗಿ ಪಕ್ಷಕ್ಕಾಗಿ ನಿಷ್ಟೆಯಿಂದ ಸೇವೆ ಸಲ್ಲಿಸಿದ್ದೇವೆ. ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದೇವೆ. ಪಕ್ಷ ವಲಸಿಗರ ಕೈಗೆ ಸೇರಿ ನಲುಗುವಂತಾಗಿದೆ. ಮೂಲ ಕಾರ್ಯಕರ್ತರು ಪಕ್ಷದ ಹಿರಿಯ ರೊಂದಿಗೆ ಮಾತನಾಡಿಯು ಯಾವುದೇ ಪ್ರಯೋಜನವಾಗಿಲ್ಲ. ಪಕ್ಷದ ಹಿರಿಯರನ್ನು ಕಡೆಗಾಣಸಿ ಕೆಲವರು ಮಾತ್ರ ಪಕ್ಷವನ್ನು ಜಮಖಂಡಿ ಕ್ಷೇತ್ರದಲ್ಲಿ ಮಣ್ಣು ಮುಕ್ಕಿಸಿದ್ದಾರೆ ಇದರಿಂದ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಹಾನಿಯಾಗಲಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯೆ ಮಹಾದೇವಿ ಮೂಲಿಮನಿ, ತಾಪಂ ಮಾಜಿ ಅಧ್ಯಕ್ಷೆ, ಸವಿತಾ ಕಲ್ಯಾಣಿ, ರಾಜೇಶ್ವರಿ ವಾಗ್ಮೋರೆ, ಸುಜಾತಾ ಸಾರವಾಡ, ಭೀಮಸಿ ಹಾದಿಮನಿ, ಕೃಷ್ಣಾ ರಾಥೋಡ, ಗದಿಗೆಪ್ಪ ದಾರವಾಡ, ನೇಮಿನಾಥ ಆಲಗೂರ, ರಾಜೇಶ್ವರಿ ಕೊಡಗ, ಅಡಿವೆಪ್ಪ ಇಟಗಿ, ಮಹದೇವ ನಾಯಕ, ಸಚಿನ ಜಗಣಿ, ಶಿವಾಜಿ ಸಬಕಾಳೆ, ಉಮೇಶ ಗೌಳಿ, ಅಡಿವೆಪ್ಪ ಕೊಂಕಣಿ, ರಾಜೇಶ ಅರಳಿ, ಶ್ರೀಶೈಲ ಬಾರಿಕಾಯಿ, ಸುರೇಶ ಕುಂಬಾರ, ಸಂಗಮೇಶ ನ್ಯಾಮಗೌಡ, ಲಕ್ಷ್ಮಣ ಬಂಕಿ, ಮುಂತಾದವರಿದ್ದರು.

WhatsApp Group Join Now
Telegram Group Join Now
Share This Article