ಹಜ್‌ಗೆ ತೆರಳುತ್ತಿದ್ದ ಭಾರತೀಯ ಯಾತ್ರಿಕರ ಬಸ್‌ ಅಪಘಾತ:42ಕ್ಕೇರಿದ ಸಾವಿನ ಸಂಖ್ಯೆ

Ravi Talawar
ಹಜ್‌ಗೆ ತೆರಳುತ್ತಿದ್ದ ಭಾರತೀಯ ಯಾತ್ರಿಕರ ಬಸ್‌ ಅಪಘಾತ:42ಕ್ಕೇರಿದ ಸಾವಿನ ಸಂಖ್ಯೆ
WhatsApp Group Join Now
Telegram Group Join Now
ಮೆಕ್ಕಾ(ನ.17): ಸೌದಿ ಅರೇಬಿಯಾದಲ್ಲಿ ಉಮ್ರಾ ಯಾತ್ರೆ ಅಂದ್ರೆ ಹಜ್‌ಗೆ ತೆರಳುತ್ತಿದ್ದ ಭಾರತೀಯ ಯಾತ್ರಿಕರು ಸೋಮವಾರ ಮುಂಜಾನೆ ಭೀಕರ ಅಪಘಾತಕ್ಕೀಡಾಗ ಸಾವನ್ನಪ್ಪಿದ್ದಾರೆ. ಹೌದು ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಭಾರಿ ಬೆಂಕಿ ಕಾಣಿಸಿಕೊಂಡಿತು. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕನಿಷ್ಠ 42 ಭಾರತೀಯರು ಸಾವನ್ನಪ್ಪಿದರು ಮತ್ತು ಇತರ ಅನೇಕರು ತೀವ್ರ ಸುಟ್ಟಗಾಯಗಳಿಗೆ ಒಳಗಾದರು. ಭಾರತೀಯ ಕಾಲಮಾನ ಬೆಳಗಿನ ಜಾವ 1:30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ, ಆಗ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಮೃತರಲ್ಲಿ ಹೆಚ್ಚಿನವರು ಹೈದರಾಬಾದ್ ನಿವಾಸಿಗಳಾಗಿದ್ದು, ಅವರಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಅವರು ಮೆಕ್ಕಾದಿಂದ ಮದೀನಾಗೆ ಉಮ್ರಾ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದರು. ಅಪಘಾತದ ಆರಂಭಿಕ ಚಿತ್ರಗಳು ಮತ್ತು ವೀಡಿಯೊಗಳು ಬಸ್ ಸಂಪೂರ್ಣವಾಗಿ ಬೆಂಕಿಯಲ್ಲಿ ಮುಳುಗಿರುವುದನ್ನು ತೋರಿಸಿವೆ, ಪ್ರಯಾಣಿಕರು ತಪ್ಪಿಸಿಕೊಳ್ಳಲು ಸಹ ಅವಕಾಶವಿರಲಿಲ್ಲ ಎಂದು ಸೂಚಿಸುತ್ತದೆ.

 

WhatsApp Group Join Now
Telegram Group Join Now
Share This Article