ಕಿತ್ತೂರು ತಾಲೂಕ ವತಿಯಿಂದ ಡಿಸಿಸಿ ಬ್ಯಾಂಕ ಅಭ್ಯರ್ಥಿ ನಾನಾಸಾಹೇಬ ಪಾಟೀಲ : ಸತೀಶ ಜಾರಕಿಹೊಳಿ 

Ravi Talawar
ಕಿತ್ತೂರು ತಾಲೂಕ ವತಿಯಿಂದ ಡಿಸಿಸಿ ಬ್ಯಾಂಕ ಅಭ್ಯರ್ಥಿ ನಾನಾಸಾಹೇಬ ಪಾಟೀಲ : ಸತೀಶ ಜಾರಕಿಹೊಳಿ 
WhatsApp Group Join Now
Telegram Group Join Now
ಚನ್ನಮ್ಮನ ಕಿತ್ತೂರು. ಅಕ್ಟೋಬರ್ ತಿಂಗಳಲ್ಲಿ ನಡೆಯುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ. ಬೆಳಗಾವಿ ಇದಕ್ಕೆ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಲಿದ್ದು  ತಾಲೂಕಿಗೆ ಒಂದು ಕ್ಷೇತ್ರದಂತೆ ಜಿಲ್ಲಾಧ್ಯoತ ಡಿಸಿಸಿ ಬ್ಯಾಂಕ ಗೆ  ನಡೆಯುವ ಚುನಾವಣೆಯಲ್ಲಿ ಕಿತ್ತೂರು ತಾಲೂಕು ಮತಕ್ಷೇತ್ರದ ಅಭ್ಯರ್ಥಿ ಆಗಿ  ಶಾಸಕ ಬಾಬಾಸಾಹೇಬ ಪಾಟೀಲ ಅವರ ಸಹೋದರ  ಸಹಕಾರಿ ಮುಖಂಡ ನಾನಾಸಾಹೇಬ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದ್ದು ಅದಕ್ಕಾಗಿ ಯಾವತ್ತೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಪ್ರಥಮ ಭಾರಿಗೆ ಸ್ಪರ್ಧೆ ಮಾಡುತ್ತಿರುವ ನಾನಾಸಾಹೇಬ ಪಾಟೀಲರನ್ನು ಆಯ್ಕೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
     ಅವರು ಪಟ್ಟಣದ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆಯಲ್ಲಿ ಮಾತನಾಡಿದರು.    ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಡಿಸಿಸಿ ಬ್ಯಾಂಕ ಚುನಾವಣೆ ಪ್ರಯುಕ್ತ ಅಭ್ಯರ್ಥಿ ಆಯ್ಕೆ ಮಾಡಲು ಹಿರಿಯರು ಹಾಗೂ ಸಹಕಾರಿ ಬಂದುಗಳನ್ನು ಸಂಪರ್ಕಿಸಿದಾಗ ಅವರೆಲ್ಲರೂ ಸೇರಿ ಒಮತ್ತದ ಅಭ್ಯರ್ಥಿಯಾಗಿ ನಮ್ಮ ಸಹೋದರ ನಾನಾಸಾಹೇಬ ಪಾಟೀಲ ಅವರನ್ನು ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದು  ಅದಕ್ಕಾಗಿ ತಾವುಗಳು ಬೆಂಬಲಿಸಿ, ಬ್ಯಾಂಕಿನ ಹಾಗೂ  ಸರ್ಕಾರದ ಸೌಲಭ್ಯಗಳನ್ನು ತಾಲೂಕಿನ ರೈತರಿಗೆ ದೊರಕಿಸಲು ಸದಾ ಸಿದ್ದರಿದ್ದು, . ನಾವು  ಸ್ವತಃ ರೈತರಾಗಿದ್ದು ರೈತರ ಕಷ್ಟ ಕಾರ್ಪನ್ಯಗಳ ಬಗ್ಗೆ ಅರಿವಿದ್ದು  ಅವರ  ಅಭಿವೃದ್ಧಿಗೆ ಶ್ರಮಿಸುತ್ತೇವೆ. 33 ಸಹಕಾರ ಸಂಘಗಳ ಚುನಾವಣೆಯಲ್ಲಿ ಹಕ್ಕು ಚಲಾಯಿಸುವ ಅರ್ಹತೆ ಹೊಂದಿದ್ದು  ಅದರಲ್ಲಿ ನಮಗೆ 18 ರಿಂದ 20 ಸಹಕಾರಿ ಸಂಘಗಳ ಬೆಂಬಲ ಇದ್ದು ನಾವು ಗೆಲುವು ಸಾದಿಸಲಿದ್ದೇವೆ ಎಂದರು.
     ಸಭೆಯಲ್ಲಿ ಕಿತ್ತೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ದೇವೇಂದ್ರ ಪಾಟೀಲ, ಸಿ ಆರ್ ಪಾಟೀಲ,ಪ ಪಂ ಅಧ್ಯಕ್ಷ ಜೈ ಸಿದ್ದರಾಮ ಮಾರಿಹಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಎಮ್ ಎಫ್ ಜಕಾತಿ, ಶಂಕರ ಹೋಳಿ, ಶೇಖರ ಯರಗೊಪ್ಪ, ಸಂಗನಗೌಡ ಪಾಟೀಲ, ಸೇರಿದಂತೆ ಕಾಂಗ್ರೆಸ್ ಮುಖಂಡರು, ಸಹಕಾರಿ ಬಂದುಗಳು, ಎಲ್ಲ ಪಕ್ಷಗಳ ಮುಖಂಡರು,ಕಿತ್ತೂರು ತಾಲೂಕಾ  ಪಿಕೆಪಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು,ಅಭಿಮಾನಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article