ಸುಧಾ ಕ್ರಾಸ್‌ನ ಮನಪ್ರಭ ಕಟ್ಟಡದ ಮೇಲೆ ಡಿಸಿ ಎಸ್ಪಿ ದಾಳಿ 1.93 ರೂಪಾಯಿ ಹಣ, 16 ಜನ ವಶ : ಎಸ್ ಪಿ ಶೋಭಾರಾಣಿ 

Ravi Talawar
ಸುಧಾ ಕ್ರಾಸ್‌ನ ಮನಪ್ರಭ ಕಟ್ಟಡದ ಮೇಲೆ ಡಿಸಿ ಎಸ್ಪಿ ದಾಳಿ 1.93 ರೂಪಾಯಿ ಹಣ, 16 ಜನ ವಶ : ಎಸ್ ಪಿ ಶೋಭಾರಾಣಿ 
WhatsApp Group Join Now
Telegram Group Join Now
ಬಳ್ಳಾರಿ 29: ನಗರದ ಸುಧಾ ಕ್ರಾಸ್ ನಲ್ಲಿರುವ ಮನಪ್ರಬಾ ಕಟ್ಟಡದ ಮೂರನೇ ಮಹಡಿಯಲ್ಲಿ ಅನಧಿಕೃತ ಜೂಜಾಟ ನಡೆಸುತ್ತಿರುವ ಅಡ್ಡಯ ಮೇಲೆ ದಾಳಿ ಮಾಡಿದ ಡಿಸಿ ಎಸ್ಪಿ ಸುಮಾರು 1.93 ಲಕ್ಷ ರೂಪಾಯಿಗಳನ್ನು ಮತ್ತು  ಜೂಜಾಟದಲ್ಲಿ ತೊಡಗಿದ್ದ 16 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶೋಭಾರಾಣಿ ತಿಳಿಸಿದ್ದಾರೆ.
 ಅವರು ಇಂದು ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಪೊಲೀಸರಿಗೆ ಬಂದ ಅತ್ಯಂತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಸಂದರ್ಭ ಅಂದರ್ ಬಹಾರ್  ಆಟದಲ್ಲಿ ತೊಡಗಿದ್ದ ಸುಮಾರು 16 ಜನರಿದ್ದಿದ್ದು ಕಂಡು ಬಂತು. ಮತ್ತು ಸುಮಾರು 13 ಮಧ್ಯದ ಖಾಲಿ ಬಾಟಲಿಗಳು ಸಹ ದೊರೆತಿವೆ  ಅವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಲಾಗುತ್ತದೆ ತನಿಖೆ ನಂತರ ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ತಿಳಿಸಿದರು.
 ಅದೇ ಸಮಯಕ್ಕೆ ಬಳ್ಳಾರಿ ಹೃದಯ ಭಾಗದಲ್ಲಿರುವ ರಿಕನ್ ರಿಕ್ರೇಶನ್ ಕ್ಲಬ್ ಗೆ ಸಹ ದಾಳಿ ಮಾಡಿ ಪರಿಶೀಲಿಸಲಾಗಿ ಅದರಲ್ಲಿ 1.65 ಲಕ್ಷ ಹಣ ದೊರೆತಿದೆ ಆದರೆ ಈ ಹಣ ನಮ್ಮದಲ್ಲ ಎಂದು ಕ್ಲಬ್ ನ ಮಾಲೀಕರು ತಿಳಿಸಿರುವುದರಿಂದ ಮುಖದಮೆಯನ್ನು ದಾಖಲೆ ಮಾಡಿಕೊಂಡು ಮುಂದಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದರು.
 ಮನ ಪ್ರಭ ಕಟ್ಟಡದಲ್ಲಿ ಲೆಕ್ಕ ಇರುವ ಪುಸ್ತಕ ಸಿಕ್ಕಿದ್ದು ಅದರಲ್ಲಿ ಯಾರ್ಯಾರಿಗೆ ಎಷ್ಟು ಹಣ ಕೊಟ್ಟಿದ್ದೇವೆ ಎಂದು ನಮೂದು ಮಾಡಿಕೊಂಡಿದ್ದಾರೆ ಅದರಲ್ಲಿ ಇರುವ ಹೆಸರುಗಳನ್ನು ತನಿಖೆ ನಂತರ ಶೀಘ್ರವೇ ಬಹಿರಂಗಪಡಿಸಲಾಗುವುದೆಂದು ಅವರು ತಿಳಿಸಿದರು.
WhatsApp Group Join Now
Telegram Group Join Now
Share This Article