ಬಳ್ಳಾರಿ,ಸೆ.30: ನಾಡಹಬ್ಬ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 18 ರವರೆಗೆ (20 ದಿನಗಳವರೆಗೆ) ಎಲ್ಲಾ ಚರ್ಮವಸ್ತುಗಳನ್ನು ಶೇ.20 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಲಿಡ್ಕರ್ ಜಿಲ್ಲಾ ಸಂಯೋಜಕ ಟಿ.ಸಂಜೀವಪ್ಪ ಅವರು ತಿಳಿಸಿದ್ದಾರೆ.
ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬುಡಾ ಕಾಂಪ್ಲೆಕ್ಸ್ ಶಾಪ್ ನಂ.24 ರ ಲಿಡ್ಕರ್ ಲೆದರ್ ಎಂಪೋರಿಯಮ್ ಮಳಿಗೆಯಲ್ಲಿ ಮಾರಾಟ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.08392-271741, ಮೊ.9844667691 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ