ಟಿಬಿ ಡ್ಯಾಂ ಗೇಟ್ ದುರಸ್ಥಿ ವಿಳಂಬಕ್ಕೆ ಕರ್ನಾಟಕ ಸರ್ಕಾರ ಧೋರಣೆ ಕಾರಣ: ದರೂರು ಪುರುಷೋತ್ತಮಗೌಡ 

Sandeep Malannavar
ಟಿಬಿ ಡ್ಯಾಂ ಗೇಟ್ ದುರಸ್ಥಿ ವಿಳಂಬಕ್ಕೆ ಕರ್ನಾಟಕ ಸರ್ಕಾರ ಧೋರಣೆ ಕಾರಣ: ದರೂರು ಪುರುಷೋತ್ತಮಗೌಡ 
WhatsApp Group Join Now
Telegram Group Join Now
ಕರ್ನಾಟಕ ಸರ್ಕಾರದ ಹಣ ಬಿಡುಗಡೆ ಬಿಳಂಬ
ಟಿಬಿ ಡ್ಯಾಂ ಗೇಟ್ ದುರಸ್ಥಿ ವಿಳಂಬ
ಬಳ್ಳಾರಿ, ಜ.27:  ತುಂಗಭದ್ರ ಜಲಾಶಯಕ್ಕೆ ಹೊಸ ಗೇಟುಗಳ ಅಳವಡಿಕೆ ಕಾರ್ಯ ಆರಂಭವಾಗಿದೆ. ಆದರೆ ಕಾಮಗಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಹಣ ವಿಳಂಬ ಮಾಡಿರುವುದರಿಂದ ಹೊಸ  ಗೇಟುಗಳ ಅಳವಡಿಕೆ ವಿಳಂಬವಾಗಲಿದೆಂದು  ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದಾರೆಂದು ತುಂಗಭದ್ರ ರೈತರ ಸಂಘ ಹೇಳಿದೆ.
ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ  ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ.  ಜಲಾಶಯ ನಿರ್ಮಾಣಗೊಂಡು ಏಳು ದಶಕ ಕಳೆದಿರುವುದರಿಂದ ಜಲಾಶಯದ ಗೇಟುಗಳು ತನ್ನ ಗುಣಮಟ್ಟ ಕಳೆದು ಕೊಂಡಿರುವುದರಿಂದ ಅವನ್ನು ಬದಲಿಸಲು ಈಗ ಮುಂದಾಗಿದೆ. ಇನ್ನೂ ಮೂರು ಗೇಟ್ ಮಾತ್ರ ಅಳವಡಿಸಿದೆ. ಇದೇ ರೀತಿ ಆದರೆ ವಿಳಂಬವಾಗಲಿದೆ ಅದಕ್ಕಾಗಿ ತ್ವರಿತಗತಿಯಲ್ಲಿ ಆಗಬೇಕು ಈ ದಿಶೆಯಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.
ಎಲ್ಲಾ ಗೇಟುಗಳನ್ನು ಬದಲಿಸಲು 54 ಕೋಟಿ ರೂಗಳ ಟೆಂಡರ್ ಕರೆದು ಕಾಮಗಾರಿ ಆರಂಭಿಸಿದೆ. ಇದಕ್ಕೆ ಆಂದ್ರ ಪ್ರದೇಶ ಸರ್ಕಾರ ತನ್ನ ಪಾಲಿನ 20 ಕೋಟಿ ರೂ ನೀಡಿದೆ. ಕರ್ನಾಟಕ ಸರ್ಕಾರ ಕೇವಲ 10 ಕೋಟಿ ರೂ ನೀಡಿದೆ. ಉಳಿದ ಹಣವನ್ನು ಕರ್ನಾಟಕ ಸರ್ಕಾರ  ಬಿಡುಗಡೆ ಮಾಡದ ಕಾರಣ ಕಾಮಗಾರಿ ವಿಳಂಬವಾಗಲಿದೆಂದು ಹೇಳಿದೆ.
ಅದಕ್ಕಾಗಿ ಕೂಡಲೇ ರಾಜ್ಯ ಸರ್ಕಾರ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಹೋರಾಟ ಮಾಡಲಿದೆಂದು ಹೇಳಿದರು.
ಗೇಟುಗಳ ಜೊತೆ ಚೈನ್ ಸಹ ಬದಲಾಯಿಸುವ ಕಾರ್ಯ ಆಗಬೇಕು ಎಂದು. ಇಷ್ಟೇ ಅಲ್ಲ ತುಂಗಭದ್ರ ಮಂಡಳಿಗೆ  ಆಂದ್ರ ಸರ್ಕಾರ   ಕರ್ನಾಟಕ ಸರ್ಕಾರದ ಖಜಾನೆಗೆ ಬಿಡುಗಡೆ ಮಾಡಿದ 35 ಕೋಟಿ ರೂ ಗಳಲ್ಲಿ  ಕರ್ನಾಟಕ ಸರ್ಕಾರ 10 ಕೋಟಿ ರೂ ಗಳನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ  ಸಂಘದ ಶಿವಯ್ಯ,  ರಾಮಾಂಜಿನಿ, ರಾಜಾಗೌಡ, ರಾಜ, ಖಾಜಾಸಾಬ್, ಲಿಂಗಾರೆಡ್ಡಿ ಗಾದಿಲಿಂಗಪ್ಪ ಮೊದಲಾದವರು ಇದ್ದರು.
WhatsApp Group Join Now
Telegram Group Join Now
Share This Article