ಪುಸ್ತಕ ರೂಪದಲ್ಲಿ ಡೇರ್ ಡೆವಿಲ್‌ ಮುಸ್ತಾಫಾ ಸಿನಿಮಾ

Ravi Talawar
ಪುಸ್ತಕ ರೂಪದಲ್ಲಿ ಡೇರ್ ಡೆವಿಲ್‌ ಮುಸ್ತಾಫಾ ಸಿನಿಮಾ
WhatsApp Group Join Now
Telegram Group Join Now
     ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ ‘ಡೇರ್ ಡೆವಿಲ್ ಮುಸ್ತಾಫಾ’. ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಪ್ರೀತಿ ಪಡೆದಿತ್ತು. ಶಶಾಂಕ ಸೋಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ  ಚಿತ್ರವೀಗ ಪುಸ್ತಕ ರೂಪ ಪಡೆದಿದೆ.
     ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆ ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಸುಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ ಕಂ ನಟಿ ಸಿಂಧು ಎಸ್ ಮೂರ್ತಿ, ನಿರ್ದೇಶಕರಾದ ಅನೂಪ್ ಭಂಡಾರಿ, ನಿತಿನ್ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
     ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ಕಡಿಮೆ. ಅದರಲ್ಲಿಯೂ ಕೆಲವೇ ಕೆಲವು ಚಿತ್ರಕಥೆಯ ಪುಸ್ತಕಗಳಿವೆ. ಆ ಸಾಲಿಗೀಗ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಈ ಪುಸ್ತಕದಲ್ಲಿ  ಕಾಲೇಜು ದಿನಗಳನ್ನು ಮೆಲುಕು ಹಾಕುವಂತಹ ಸನ್ನಿವೇಶ. ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ, ಹಾಗು ಧರ್ಮಕ್ಕೂ ಮಿಗಿಲಾದದ್ದು
ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ವಿಷಯದ ಜೊತೆಗೆ ಸಿನಿಮಾ ಆಸಕ್ತರಿಗೆ ಪಠ್ಯವಾಗಬಲ್ಲ ಪುಸ್ತಕ ಅಂದರು ತಪ್ಪಿಲ್ಲ. ಒಂದು ಸಣ್ಣ ಕಥೆ ಎತ್ತಿಕೊಂಡು ಸ್ಕ್ರೀನ್ ಪ್ಲೇ, ಕಥೆ ಡೈಲಾಗ್ ಬರೆದು ದೃಶ್ಯ ರೂಪಕ್ಕೆ ಹೇಗೆ ಇಳಿಸಲಾಯಿತು.? ಸಣ್ಣ ಕಥೆ ಚಿತ್ರ ಕಥೆ ಆಗಿದ್ದೇಗೆ? ಕಥೆ ಸಿನಿಮಾವಾಗಿದ್ದೇಗೆ? ಎಂಬ ವಿಷಯಗಳು ಈ  ಪುಸ್ತಕ ಓದಿದರೆ ತಿಳಿಯುತ್ತದೆ.
WhatsApp Group Join Now
Telegram Group Join Now
Share This Article