ದಲಿತರೇ ತೋರಣಗಲ್ಲಿನ ಮೂಲ ನಿವಾಸಿಗಳು ; ಲೇಖಕ ಅಬ್ದುಲ್ ಹೈ 

Ravi Talawar
ದಲಿತರೇ ತೋರಣಗಲ್ಲಿನ ಮೂಲ ನಿವಾಸಿಗಳು ; ಲೇಖಕ ಅಬ್ದುಲ್ ಹೈ 
WhatsApp Group Join Now
Telegram Group Join Now
ಬಳ್ಳಾರಿ. ನ. 18: ದಲಿತಗೇರಿಗಳು ಹೆಚ್ಚಾಗಿ ಗ್ರಾಮಗಳ ಪೂರ್ವ ಈಶಾನ್ಯ ದಿಕ್ಕಿನಲ್ಲಿ ಇರುತ್ತವೆ ತೋರಣಗಲಿನಲ್ಲಿ ಮಾತ್ರ ದಲಿತರ ಕೇರಿ ಗ್ರಾಮದ ನಟ್ಟ ನಡುವಿನಲ್ಲಿದೆ, ಇದರ ಆಧಾರದ ಮೇಲೆ
ದಲಿತರು ತೋರಣಗಲ್ಲು ಗ್ರಾಮದ ಮೂಲ ನಿವಾಸಿಗಳು ಎನ್ನುವುದನ್ನು ನಾನು ನನ್ನ  ತೋರಣಗಲ್ಲು ಒಂದು ಚಾರಿತ್ರಿಕ ಅಧ್ಯಯನ ಸಂಶೋಧನಾ ಗ್ರಂಥದ ಮೂಲಕ  ಇತ್ತೀಚೆಗೆ ಕೊಂಡುಕೊಂಡಿದ್ದೇನೆ  ಎಂದು ಲೇಖಕ, ಪ್ರಕಾಶಕ ಅಬ್ದುಲ್ ಹೈ ತೋರಣಗಲ್ಲು ಹೇಳಿದರು.
 ರಾಜ್ಯ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರಾದ ಅಬ್ದುಲ್ ಹೈ ಅವರಿಗೆ  ಇಂದು ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಅನ್ನಪೂರ್ಣ ಪ್ರಕಾಶನ ವತಿಯಿಂದ  ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತಿ ಯಾದವನು ಸದಾ ತನ್ನ ಒಳಗಣ್ಣನ್ನು ತೆರೆದುಕೊಂಡೆರಬೇಕು ಎಂಬ ಹಿರಿಯರ ಮಾತಿನಂತೆ ನನ್ನ ಒಳಗಣ್ಣಿನಿಂದ ನಾನು ಕಂಡುಕೊಂಡದ್ದು ಏನೆಂದರೆ, ದಲಿತರ ಹೆಣ್ಣುಮಕ್ಕಳನ್ನು ಉಳ್ಳವರು ಬಹಳ ಹಿಂದಿನಿಂದಲೂ ಮುತ್ತು ಕಟ್ಟುವುದು ಎಂಬ ಮೌಡ್ಯವಾದ ಧಾರ್ಮಿಕ ಭಾವನೆಯಿಂದ ದೇವದಾಸಿ ಪದ್ಧತಿಯನ್ನು ಜೀವಂತವಾಗಿಟ್ಟು ದಲಿತ ಹೆಣ್ಣು ಮಕ್ಕಳನ್ನು ಶೋಷಣೆಗೆ ಒಳಪಡಿಸುತ್ತಿದ್ದರು  ಸರ್ಕಾರ ಅದನ್ನು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಅನಿಷ್ಟ ಪದ್ದತಿಯನ್ನು ನಿರ್ಮೂಲನೆಗೊಳಿಸುತ್ತಾ ಬರುತ್ತಿದೆ ಆದರೆ ಮತ್ತೊಂದು ದೃಷ್ಟಿಕೋನದಿಂದ ಗರತಿ ಬಸವಿ ಎಂಬ ಹೆಸರಿನೊಂದಿಗೆ ಇನ್ನೂ ಸಹ ಅಲ್ಲಲ್ಲಿ ಈ ಅನಿಷ್ಟ ಪದ್ಧತಿ ಆಚರಣೆಯಲ್ಲಿದೆ ಇದನ್ನು ಸಾಮಾಜಿಕ ಪ್ರಜ್ಞೆಯುಳ್ಳ ಪ್ರಜ್ಞಾವಂತರು ಅಂತ್ಯ ಹಾಡಬೇಕಿದೆ ಎಂದರು. ತೋರಣಗಲ್ಲಿನಲ್ಲಿ ಚರ್ಮ ಹದ ಮಾಡುವ ಕೇಂದ್ರದ ಕುರುಹುಗಳು ಇನ್ನೂ ಅಲ್ಲಲ್ಲಿ ಇವೆ ಇವುಗಳಿಂದಲೂ ಸಹ ತೋರಣಗಲ್ಲು ದಲಿತರ ಆವಾಸ ಸ್ಥಾನವಾಗಿತ್ತು ಎಂಬುದಕ್ಕೆ ಇವೇ ಸಾಕ್ಷಿಯಾಗಿವೆ ಎಂದರು.
 ತೋರಣಗಲ್ಲು ಗ್ರಾಮದಲ್ಲಿ ನೂರು ವರ್ಷಗಳ ಇತಿಹಾಸವುಳ್ಳ ಯಾವುದೇ ಒಂದು ದೇವಸ್ಥಾನವಾಗಲಿ ಕಟ್ಟಡವಾಗಲಿ ಲಭ್ಯವಿಲ್ಲ ಇದೊಂದು ವಲಸಿಗರ ಗ್ರಾಮವಾಗಿತ್ತು ಎಂದ ಅವರು ದರೋಜಿಕೆರೆಯನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದ್ದನು ಎಂದು ನಾನು ಹೇಳಿದಲ್ಲಿ ನಾನೊಬ್ಬ ಕೋಮುವಾದಿ ಆಗುತ್ತಿದ್ದೆ ಆದರೆ ತೋರಣಗಲ್ಲು ಮತ್ತು ದರೋಜಿಕೆರೆಯ ಇತಿಹಾಸವನ್ನು ಕೆದಕಿದಾಗ ಅತ್ಯಂತ ಸ್ಪಷ್ಟವಾಗಿ ನಾವು ಕಾಣಬಹುದು ಟಿಪ್ಪು ಸುಲ್ತಾನನೇ ಆಕೆರೆಯನ್ನು ನಿರ್ಮಿಸಿದ್ದು ಎಂದು. ತೋರಣಗಲ್ಲು ಒಂದು ಚಾರಿತ್ರಿಕ ಅಧ್ಯಯನ ಗ್ರಂಥ ರಚನೆಯ ವೇಳೆ ನಾನು ಮಾಹಿತಿಗೆ ಪೂರಕವಾದ ಹಲವಾರು ಆಕರ ಗ್ರಂಥಗಳನ್ನು ಹಿರಿಯರ ಮೌಖಿಕ ಅಭಿಪ್ರಾಯಗಳನ್ನು ಈ ಸ್ಥಳಕ್ಕೆ ಸಂಬಂಧಿಸಿದ ಜನಪದಗಳನ್ನು ಅಧ್ಯಯನ ನಡೆಸಿ ಸಂಪೂರ್ಣವಾದ ಮಾಹಿತಿ ಸಮಗ್ರವಾದ ವಿವರಗಳನ್ನು ಒಳಗೊಂಡ ವಿಷಯ ಆ ಗ್ರಂಥ ರಚನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೆ ನಾನು ನನ್ನ ಕವನ ಪ್ರಕಾಶನದ ಮೂಲಕ ಹಲವಾರು ಯುವ ಸಾಹಿತಿಗಳ ಕೃತಿಗಳನ್ನು ಪ್ರಕಾಶಿಸಿದ್ದೇನೆ ಜೊತೆಗೆ ನಾನು ರಚಿಸಿರುವ ಕೃತಿಗಳು ಕಥೆಗಳು ಕವನ ಸಂಕಲನಗಳನ್ನು ಪರಿಗಣಿಸಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡ ಮಾಡುವ ಸಾಹಿತ್ಯ ಶ್ರೀ ಪ್ರಸತ್ತಿಗೆ ಬಾಜನವಾಗಿದ್ದೇನೆ ಎಂದರು.
 ಅನ್ನಪೂರ್ಣ ಪ್ರಕಾಶನದ ಪ್ರಕಾಶಕ  ಸಿರಿಗೇರಿ ಎರಿಸ್ವಾಮಿ ಮಾತನಾಡಿ, ಸಾಹಿತಿ ಯಾದವನು ಎಷ್ಟು ಕೃತಿಗಳನ್ನು ರಚಿಸಿದ್ದಾನೆ ಎನ್ನುವುದಕ್ಕಿಂತ ಕೃತಿ ಎಂಥ ಸಾಮಾಜಿಕ  ಅಂಶಗಳನ್ನು ಒಳಗೊಂಡ ಕೃತಿಯನ್ನು ರಚಿಸಿದ್ದಾನೆ ಎನ್ನುವುದೇ ಮುಖ್ಯವಾಗುತ್ತದೆ ಮತ್ತು ಇದೇ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಹೊರತು ಯಾವುದೇ ಲಾಬಿಯಿಂದಲ್ಲ ಎಂದರು.
 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲ್ಲುಕಂಬ Atleast ಮಾತನಾಡಿದರು. ಶಿಕ್ಷಕಿ ಈರಮ್ಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎನ್. ಡಿ ವೆಂಕಮ್ಮ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ನಾಗರೆಡ್ಡಿ, ಲೇಖಕ ಅಜಯ್ ಬಣಕಾರ್, ಮದರಿ ಕುಮಾರಸ್ವಾಮಿ, ಮೆಹತಾಬ್, ಸಂಗನಕಲ್ಲು ವಿಜಯ್ ಕುಮಾರ್ ಸೇರಿದಂತೆ ಹಲವಾರು ಜನರಿದ್ದರು.
WhatsApp Group Join Now
Telegram Group Join Now
Share This Article