ವಿಜಯನಗರ. ಫೆ. 20. : ಜಾನುವಾರುಗಳ ಆರೋಗ್ಯ ಮತ್ತು ಗ್ರಾಮೀಣ ಕುಟುಂಬಗಳ ಆರ್ಥಿಕ ಪ್ರಗತಿ ಪರಸ್ಪರ ಸಂಬಂಧ ಹೊಂದಿವೆ. ನಮ್ಮ ಈ ಉಪಕ್ರಮವು ತಳಮಟ್ಟದ ಕೃಷಿ ಕುಟುಂಬಗಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದೆ ಎಂದು ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್‌ನ ಸಂಸ್ಥೆಯ ಎಂಡಿ ಮತ್ತು ಸಿಇಒ ಶ್ರೀ ರವಿ ನಾರಾಯಣನ್ ತಿಳಿಸಿದರು.
ಅವರು ವಿಜಯನಗರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಸಂಸ್ಥೆಯಿಂದ ನಡೆದ ಪಶು ವಿಕಾಸ ದಿನದಲ್ಲಿ ಭಾಗವಹಿಸಿ ಮಾತನಾಡಿ,
ಭಾರತದ ಪ್ರಮುಖ ಎನ್‌ಬಿಎಫ್‌ಸಿ ಸಂಸ್ಥೆಯಾದ ‘ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್’, ತನ್ನ ಮಹತ್ವಾಕಾಂಕ್ಷೆಯ ಗ್ರಾಮೀಣ ಜೀವನೋಪಾಯ ಉಪಕ್ರಮವಾದ 8ನೇ ಆವೃತ್ತಿಯ ‘ಪಶು ವಿಕಾಸ ದಿನ’ (PVD) ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ.
‘ಸರ್ವೋತ್ತಮ ಸೇವೆ ಪಶು, ಪರಿವಾರ ಮತ್ತು ಪ್ರಗತಿ’ ಎಂಬ ಆಶಯದೊಂದಿಗೆ ನಡೆದ ಈ ಅಭಿಯಾನವು ದೇಶದ 1.55 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಜನರ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಅಭಿಪ್ರಾಯಪಟ್ಟ ರವಿ ನಾರಾಯಣ್,
2014ರಲ್ಲಿ ಆರಂಭವಾದ ಈ ಕಾರ್ಯಕ್ರಮವು ಹಲವಾರು ಇಂತಹ ಜನ ಉಪಯೋಗಿ ಕಾರ್ಯಕ್ರಮಗಳಿಂದಾಗಿ ಸಂಸ್ಥೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ 2025ರಲ್ಲಿ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ. ಈ ಮೂಲಕ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಸಂಸ್ಥೆಯು ಗ್ರಾಮೀಣ ಭಾರತದ ಸುಸ್ಥಿರ ಅಭಿವೃದ್ಧಿಗೆ ತನ್ನ ಸೇವೆಯನ್ನು ವಿಸ್ತರಿಸಲಿದೆ ಎಂದರು.
ದೇಶದ 16 ರಾಜ್ಯಗಳ 510 ಗ್ರಾಮಶಕ್ತಿ ಶಾಖೆಗಳಲ್ಲಿ ನಡೆದ ಈ ಬೃಹತ್ ಶಿಬಿರದಲ್ಲಿ ಸುಮಾರು 1.4 ಲಕ್ಷ ಜಾನುವಾರುಗಳಿಗೆ ಉಚಿತ ಪಶುವೈದ್ಯಕೀಯ ಚಿಕಿತ್ಸೆ ನೀಡಲಾಯಿತು.
ಕರ್ನಾಟಕವೊಂದರಲ್ಲೇ 71 ಸ್ಥಳಗಳಲ್ಲಿ ಶಿಬಿರ ನಡೆಸಿ, 12,500 ಜಾನುವಾರುಗಳಿಗೆ ಚಿಕಿತ್ಸೆ ಹಾಗೂ 3,700ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು ನೀಡಲಾಗಿದೆ
ಪಶುವೈದ್ಯರಿಂದ ತಪಾಸಣೆ, ಉಚಿತ ಔಷಧಿ ವಿತರಣೆ ಮತ್ತು ಹಾಲಿನ ಇಳುವರಿಯಲ್ಲಿ ಹಸಿರು ಹುಲ್ಲಿನ ಪಾತ್ರ ಮತ್ತು ಹಾಲು ಉತ್ಪನ್ನ ಹೆಚ್ಚಿಸುವ ಕುರಿತು ತಜ್ಞರು ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಮಾರ್ಗದರ್ಶನ ನೀಡಿದರು.


