ಸಂಸ್ಕೃತಿ ಹಾಗೂ ಉತ್ತಮ ಮೌಲ್ಯಗಳಿಂದ ಬದುಕು ರೂಪಿಸಿಕೊಳ್ಳಿ : ಡಾ. ಮೀನಾ ಆರ್. ಚಂದಾವರಕರ್

Ravi Talawar
ಸಂಸ್ಕೃತಿ ಹಾಗೂ ಉತ್ತಮ ಮೌಲ್ಯಗಳಿಂದ ಬದುಕು ರೂಪಿಸಿಕೊಳ್ಳಿ : ಡಾ. ಮೀನಾ ಆರ್. ಚಂದಾವರಕರ್
WhatsApp Group Join Now
Telegram Group Join Now

ಬಾಗಲಕೋಟೆ : ಸಂಸ್ಕೃತಿ ಮೌಲ್ಯಗಳು ನಮ್ಮ ಜೀವನಾಧಾರ ಇವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ರೂಪಿಸಿಕೋಳ್ಳಬೇಕೆಂದುಕಾಪಾಡಿಕೊಂಡು ಹೋಗಬೇಕು. ಕೃತಜ್ಞತೆ, ದಯಾಳುತನವನ್ನು ಎಂದಿಗೂ ಮರೆಯಬಾರದು. ಮಾಡಿದ ಉತ್ತಮ ಕಾರ್ಯಗಳು ಯಾವತ್ತಿಗೂ ಆದರಣೀಯವಾಗಿರುತ್ತವೆ. ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸವಿರಬೇಕು ಎಂದು ನವದೆಹಲಿಯ ಎನ್ ಸಿ ಟಿ ಇ ಅಧ್ಯಕ್ಷರು ಹಾಗೂ ಬಿ.ವ್ಹಿ.ವ್ಹಿ ಸಂಘದ ಮುಖ್ಯ ಸಲಹಾಗಾರಾg ಆದ ಡಾ. ಮೀನಾ ಆರ್. ಚಂದಾವರಕರ್ ಹೇಳಿದರು.

ನಗರದ ಪ್ರತಿಷ್ಠಿತ ಬಿ.ವ್ಹಿ.ವ್ಹಿ. ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಪದವಿ ಅಂತಿಮ ವ?ದ ವಿದ್ಯಾರ್ಥಿನಿಯರ ಬಿಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಕರ್ನಾಟಕ ಎಲ್ಲರಿಗೂ ಎಲ್ಲ ಸಾಧನೆಗೈಯಲು ಸಾಧ್ಯವಿಲ್ಲ ಆದರೂ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಉತ್ತಮ ಹವ್ಯಾಸಗಳನ್ನು ಜೀವನದುದ್ದಕ್ಕೂ ರೂಢಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. ಸದ್ದಿಲ್ಲದ ಸಾಧನೆ ಇರಬೇಕು, ಸಾಧನೆಯೇ ಸದ್ದಾಗಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಸಂಸ್ಕೃತಿ ಹಾಗೂ ಉತ್ತಮ ಮೌಲ್ಯಗಳಿಂದ ಬದುಕು ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ.ವಿ.ವಿ. ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಎಸ್. ಸುಳಿಭಾವಿ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಯಾಂಕ್ ಪಡೆದ ಕುಮಾರಿ ಪ್ರೇಮ ಹುನಗುಂದ್ ಬಿಕಾಂ, ಕುಮಾರಿ ಮಹಿಮಾ ರಾಜಪುರೋಹಿತ ಹಾಗೂ ಕುಮಾರಿ ಹೀನಾ ಕಮತರ ಎಂ.ಎಸ್ಸಿ ಸಸ್ಯಶಾಸ್ತ್ರ ವಿದ್ಯಾರ್ಥಿನಿಯರನ್ನು ಹಾಗೂ ವಿಶ್ವವಿದ್ಯಾನಿಲಯದ ’ಬ್ಲೂ’ ಗಳಾದ ನಾಲ್ಕು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಪ್ರತಿಭಾನ್ವಿತ ಹಲವು ವಿದ್ಯಾರ್ಥಿನಿಯರಿಗೆ ಪಾರಿತೋ?ಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಭಾಗ್ಯಶ್ರೀ ನಡಗಡ್ಡಿ ಸಂಗಡಿಗರಿಂದ ಪ್ರಾರ್ಥನೆ, ಮಹಾವಿದ್ಯಾಲಯದ ಪ್ರಚಾರ್ಯರಾದ ಎಸ್. ಜೆ. ಒಡೆಯರ ಸ್ವಾಗತಿಸಿದರು, ಐಕ್ಯೂಎಸಿ ಸಂಯೋಜಕರಾದ ಪಿ.ಕೆ. ಚೌಗುಲಾ ಪರಿಚಯಿಸಿದರು, ಎಸ್ .ಎಂ. ಚೌವೂಸ್ ವಾರ್ಷಿಕ ವರದಿ, ಡಾ. ಎಂ. ವ್ಹಿ. ಬಾಜಪ್ಪನವರ ಅವರು ಕ್ರೀಡಾ, ಎನ್. ಎಸ್. ಎಸ್ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವರದಿ ವಾಚಿಸಿದರು. ವಿದ್ಯಾರ್ಥಿನಿಯರ ಪ್ರತಿನಿಧಿ ಕುಮಾರಿ ಸಾನಿಯಾ ಮುಲ್ಲಾ ವಂದಿಸಿದರು, ಪಲ್ಲವಿ ಪಾತ್ರೋಟ ಹಾಗೂ ಡಾ. ಜಯಶ್ರೀ ಲಾಗಲೋಟಿ ನಿರೂಪಿಸಿದರು, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.
ಪೋಟೋ ೦೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.

WhatsApp Group Join Now
Telegram Group Join Now
Share This Article