ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮನೆಗಳ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ

Ravi Talawar
ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮನೆಗಳ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ
WhatsApp Group Join Now
Telegram Group Join Now

ಮಲಯಾಳಂ ಚಿತ್ರರಂಗ ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಸ್ಟಾರ್ ನಟ, ನಿರ್ಮಾಪಕರಾಗಿರುವ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಇಬ್ಬರೂ ನಟರ ವಿರುದ್ಧ ಸ್ಮಗ್ಲಿಂಗ್ ಗುಮಾನಿಯಿಂದ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿರುವ ಕಾರುಗಳು, ಇತರೆ ವಿದೇಶಿ ವಸ್ತುಗಳ ತನಿಖೆ ನಡೆಸಿದ್ದಾರೆ.

ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಇಬ್ಬರೂ ಸಹ ಬಹಳ ಕಾರ್ ಕ್ರೇಜ್ ಹೊಂದಿರುವ ನಟರು. ತಮ್ಮ ಸಂಗ್ರಹದಲ್ಲಿ ಹಲವಾರು ಐಶಾರಾಮಿ ವಿದೇಶಿ ಬ್ರ್ಯಾಂಡ್​​ನ ಕಾರುಗಳನ್ನು ಹೊಂದಿದ್ದಾರೆ. ಕೆಲ ಲಿಮಿಟೆಡ್ ಎಡಿಷನ್ ಕಾರುಗಳನ್ನು ಈ ನಟರುಗಳು ವಿದೇಶಗಳಿಂದಲೂ ತರಿಸಿಕೊಂಡಿದ್ದಾರೆ. ಹಾಗಾಗಿ ಇದೀಗ ಕಸ್ಟಮ್ಸ್ ಅಧಿಕಾರಿಗಳು ಆ ಕಾರುಗಳ ದಾಖಲೆಗಳನ್ನು ಪರಿಶೀಲಿಸಿದ್ದು, ತೆರಿಗೆ, ನೊಂದಣಿ ಇತ್ಯಾದಿ ಮಾಹಿತಿಯನ್ನು ಪಡೆದಿದ್ದಾರೆ.

ಕೇರಳದ ಕೊಚ್ಚಿಯ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ ಹಾಗೂ ಕೊಚ್ಚಿಯ ಪನಂಪಿನ್ನಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಪೃಥ್ವಿರಾಜ್ ಅವರ ತಿರುವನಂತಪುರಂನ ಮನೆ ಮೇಲೂ ದಾಳಿ ಮಾಡಿದ್ದಾರೆ. ಆದರೆ ಅಲ್ಲಿ ಯಾವುದೇ ವಿದೇಶಿ ವಾಹನ ಪತ್ತೆಯಾಗಿಲ್ಲವಂತೆ. ನಟರುಗಳು ಮಾತ್ರವೇ ಅಲ್ಲದೆ ಕೆಲವು ಉದ್ಯಮಿಗಳ ಮನೆಗಳ ಮೇಲೂ ಸಹ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಗೆ ‘ನುಮ್​ಕೂರ್’ ಎಂದು ಹೆಸರಿಡಲಾಗಿದೆ. ವಾಹನಗಳನ್ನು ಮಲಯಾಳಿ ಭಾಷೆಯಲ್ಲಿ ನುಮ್​ಕೂರ್ ಎನ್ನಲಾಗುತ್ತದೆಯಂತೆ. ಅಕ್ರಮವಾಗಿ ವಿದೇಶಗಳಿಂದ ವಾಹನ ಆಮದು ಮಾಡಿಕೊಳ್ಳುವುದು, ತೆರಿಗೆ ವಂಚನೆಗಳನ್ನು ಪತ್ತೆ ಹಚ್ಚವುದು ದಾಳಿಯ ಉದ್ದೇಶ.

WhatsApp Group Join Now
Telegram Group Join Now
Share This Article