“ಕಂಪ್ಲಿಯಲ್ಲಿ ಸಾಂಸ್ಕೃತಿಕ ಸಂಭ್ರಮ-2024”

Ravi Talawar
“ಕಂಪ್ಲಿಯಲ್ಲಿ ಸಾಂಸ್ಕೃತಿಕ ಸಂಭ್ರಮ-2024”
WhatsApp Group Join Now
Telegram Group Join Now
ಕಂಪ್ಲಿ:ಆಗಸ್ಟ್ ,05ರಂದು ನಗರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸ್ನೇಹಜೀವಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ರಿ) ಮೆಟ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಸಹಯೋಗದಲ್ಲಿ ಸಾಂಸ್ಕೃತಿಕ ಸಂಭ್ರಮ-2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಂಗಭೂಮಿ ಕಲೆಗಳನ್ನು ಪ್ರತಿಯೊಬ್ಬರೂ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಅ ಕೆಲಸವನ್ನು ಸ್ನೇಹಜೀವಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಸಂಘಟಕರಾದ ಕೆ ಶಂಕರ ಮೆಟ್ರಿ ಮತ್ತು ಮಾವಿನಹಳ್ಳಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಕಾರ್ಯದರ್ಶಿ ಕೆ ಹೇಮೇಶ್ವರ ಮಾಡುತ್ತಾರೆ. ಇಂದಿನ ಮಕ್ಕಳು ಆಟಗಳನ್ನು ಮರೆತು ಬದುಕುತ್ತಾರೆ ಜೀವನದಲ್ಲಿ ಸುಖ ಸಂತೋಷ ಜೀವನ ತೋರೆದು ಬದುಕುತ್ತಾರೆ ಎಂದು ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಡೋಲಕ್ ಬಾರಿಸುವುದರ ಮುಖಾಂತರ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿ ಉದ್ಘಾಟಕರ ನುಡಿಯನ್ನು ನುಡಿದರು.
ಹಿಂದಿನ ಮಕ್ಕಳು ಬಾಲ್ಯದ ನೆನಪುಗಳನ್ನು ಅಳವಡಿಸಿಕೊಳ್ಳದೇ ಜೀವನದಲ್ಲಿ ಪಠ್ಯಕ್ಕೆ ಹೊಂದಿಕೊಂಡು ಮಾರು ಹೋಗಿದ್ದಾರೆ. ಒತ್ತಡ ಬದುಕಿನಲ್ಲಿ ಬದುಕುವುದು ನಾವು ಕಾಣುತ್ತೇವೆ. ಓದಿನೊಂದಿಗೆ ಇಂತಹ ಪಠ್ಯೇತರ ಚಟುವಟಿಕೆಗಳು ಅಳವಡಿಸಿಕೊಳ್ಳಬೇಕು.ಸದೃಢ ದೇಹ ಸದೃಢ ಮನಸ್ಸು ಹೊಂದಿಕೊಂಡು ಬದುಕುವುದು ಕಲಿಯಬೇಕು ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯೋಗ ಶಿಕ್ಷಕರಾದ ಡಿ.ಮಹೇಶ ಬಾಬು ಹೇಳಿದರು.
ಇಂದಿನ ಮಕ್ಕಳು ಕಲೆ,ಸಾಹಿತ್ಯ ತಮ್ಮಲ್ಲಿ ಅಳವಡಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬೇಕು. ಮೊಬೈಲ್ ಪೋನ್ ಬಂದ ಮೇಲೆ ಮಕ್ಕಳು ಅದಕ್ಕೆ ಜೋತು ಬೀಳುವುದನ್ನು ನಾವು ದಿನ ನಿತ್ಯ ಕಾಣುತ್ತೇವೆ. ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ನಾಟಕ,ಸಂಗೀತ, ಕಥೆ,ಕಾದಂಬರಿ, ಜನಪದ ಗೀತೆಗಳು ಇನ್ನೂ ಅನೇಕ ಕಲೆಗಳಲ್ಲಿ ಭಾಗವಹಿಸಲು ನಾವು ಮಾರ್ಗದರ್ಶನ ನೀಡಬೇಕು ಅಂತಹ ಕೆಲಸ ಕೆ ಶಂಕರ ಮತ್ತು ಕೆ ಹೇಮೇಶ್ವರ ಸತತವಾಗಿ ಪ್ರಯತ್ನ ಮಾಡುತ್ತಾ ಬರುತ್ತಿದ್ದಾರೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಮಾತಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:-ಕಂಸಾಳೆ ನೃತ್ಯ ಕೆ ಶಂಕರ ಮೆಟ್ರಿ ಮತ್ತು ತಂಡ ನಾಟಕ:-ಪೌರಾಣಿಕ ನಾಟಕ ಶ್ರೀ ಕೃಷ್ಣ ಸಂಧಾನ ನಾಟಕ ವೈ.ಮಂಜುನಾಥ ಮತ್ತು ತಂಡದವರಿಂದ ಪ್ರದರ್ಶನ ನೀಡಲಾಯಿತು. ಕಾರ್ಯಕ್ರಮದಲ್ಲಿ  ಭಾಗವಹಿಸಿದವರು:-ಚೆನ್ನಕೇಶವ ಕಂಪ್ಲಿ,‌ಶ್ರೀ ಚಂದ್ರಪ್ಪ ಕಂಬಳಿ ಶಿಕ್ಷಕರ,ಶ್ರೀ ಪಂಪಾಪತಿ ಕೋಡಲು ಅಡುಗೆ ಸಿಬ್ಬಂದಿ, ಕೆ ಹೇಮೇಶ್ವರ ಸ್ನೇಹಜೀವಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಕೆ ನಾಗರಾಜ್ ಮತ್ತು ಕಾರ್ಯದರ್ಶಿ ಕೆ ರಮೇಶ ,ಹಾಸ್ಟೆಲ್ ಸಿಬ್ಬಂದಿ ವರ್ಗದವರು ಮತ್ತು ನಿಲಯದ ವಿದ್ಯಾರ್ಥಿಗಳು ಮತ್ತು ನಿಲಯದ ಪಾಲಕರು ಭಾಗವಹಿಸಿದ್ದರು. ನಿರೂಪಣೆ ಕೆ ಹೇಮೇಶ್ವರ, ಚಂದ್ರಪ್ಪ ಕಂಬಳಿ ವಂದಿಸಿದರು.
WhatsApp Group Join Now
Telegram Group Join Now
Share This Article