ಬೆಳಗಾವಿ02: ಬಿಜೆಪಿ ಪಕ್ಷ 3 ವಿಷಯಗಳನ್ನು ಜನರ ಮುಂದೆ ಚುನಾವಣೆಗೆ ಸ್ಪರ್ದಿಸುತ್ತಿದೆ. ಪಕ್ಷ ನಿಷ್ಠೆ, ದೇಶ ಮೊದಲು, ಸಬಕಾ ಸಾತ ಸಾಬಕ ವಿಕಾಸ್ , ಬಡವರ ಬೆಳವಣಿಗೆಯೇ ನಮ್ಮ ಮೊದಲ ನೀತಿ, ಸೈನಿಕ್ ಶಕ್ತಿ ವರ್ಧನೆ ನೀತಿ, ಆರ್ಥಿಕ ನೀತಿ ಹೆಚ್ಚಾಳ ನಮ್ಮ ನೀತಿ,10 ವರ್ಷಗಳಲ್ಲಿ ತೆರಿಗೆ ಸುಧಾರಣೆ ತಂದಿದ್ದೇವೆ, ಜಿಡಿಪಿ ಸುಧಾರಣೆ ಆಗಿದೆ, ಅಂತಾರಾಷ್ಟ್ರೀಯ 5 ನೇ ಆರ್ಥಿಕತೆ ದೇಶ, ಆರ್ಟಿಕಲ್ 370 ರದ್ದು ಮಾಡಿದ್ದೇವೆ, ಭಾರತವನ್ನು ಒಂದುಗುಡಿಸುವ ಕೆಲಸ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ, ಮೂಲಸೌಕರ್ಯಕ್ಕೆ ಒತ್ತು.ಭಾರತ ದೇಶದ ನೇತೃತ್ವ ಪ್ರಥಮ್ ಲೀಡರ್ ಮೋದಿಜಿ ಆಗಿದ್ದಾರೆ.ಅನೇಕ ರಾಷ್ಟೀಯ ಮುಖ್ಯಸ್ಥರು ಮೋದಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಗೆ ಕೇಳ್ತೆನೆ ಯಾರು ನಿಮ್ಮ ಮುಖಂಡರೂ, ಪ್ರಧಾನಿ ಅಭ್ಯರ್ಥಿ ಯಾರು ಮೊದಲು ಜನರಿಗೆ ತಿಳಿಸಿ ಎಂದು ಮಾಜಿ ಸಚಿವ ಮತ್ತು ಮಾಜಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ. ರವಿ ಹೇಳಿದರು.
ಅವರು ನಗರದ ಲಕ್ಷ್ಮೀ ಕಾಂಪೆಕ್ಸ್ ನ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಹುಲ ಗಾಂಧಿ ಮೋಹಬ್ಬತ್ ಕೆ ದುಕಾನನಲ್ಲಿ ಮಾತನಾಡಿದರಂತೆ ಸಿದ್ರಾಮಯ್ಯ ಹೇಳಿದು ಏನೆಂದರೆ ಬಿಜೆಪಿ ಅವರ ಮನೆ ಹಾಳಾಗಲಿ, ಭಾರತೀಯರೇ ಬಿಜೆಪಿಯನ್ನು ಗೆಲ್ಲಿಸಿರೋದು ಅಂದರೆ ಎಲ್ಲರೂ ಹಾಳಾಗಬೇಕಾ? ರಾಜು ಕಾಗೆ ಮೋದಿಜಿ ಸತ್ತರೆ ಯಾರು ಪ್ರಧಾನಿ ಆಗೋಲ್ವ ಎಂಬ ಹಗುರ ಮಾತು, ದಿ ಕೆ ಶಿವಕುಮಾರ್ ಅವರು ಮತ ಹಾಕದಿದ್ರೆ ಕರೆಂಟ್ ಕಟ್, ನಿಮಗೆ ಸಮಸ್ಯೆ ಆಗಲಿದೆ ಎನ್ನುವ ಜನರ ಮೇಲೆ ಧರ್ಪ್ , ಶಿವರಾಜ್ ತಂಗಡಗಿ ಮಾತನಾಡಿ ಮೋದಿ ಮೋದಿ ಅಂದರೆ ಅಂತವರ ಕಪ್ಪಾಳಕ್ಕೆ ಹೊಡಿರಿ, ಖರ್ಗೆ ಮೋದಿಜಿಯವರಿಗೆ ವಿಷಸರ್ಪ, ಸಂವಿದಾನವನ್ನು ಬದಲಾವಣೆಮಾಡುತ್ತಾರೆ ಎನ್ನುವ ಸುಳ್ಳು ಹೇಳಿಕೆಗಳು.ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಪುಸ್ತಕದಲ್ಲಿ ಇಸ್ಲಾಂ ಕುರಿತು ನಿಜಾಂಶ, ಸಂವಿದಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಸಂಸತ್ತನಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್ ಅಗಿದ್ದು. ಅವರ ನಿಧಾನರಾದ ನಂತರ ಅಂತ್ಯಕ್ರಿಯೆ ಮಾಡಲು ಜಾಗ ನೀಡದೆ ಪಕ್ಷ ಕಾಂಗೇಸ್ ಅಗಿದ್ದು , ಸೋಲಿನ ಹತಾಸೆ ಅವರನ್ನು ಕಾಡ್ತಾ ಇದೆ.
ಅದಕ್ಕಾಗಿ ಅವರು ಅಪಪ್ರಚಾರ ಮಾಡುತಿದ್ದರೆ, ಸಂವಿದಾನವನ್ನು ತಿದ್ದಿದ್ದು ಕಾಂಗ್ರೆಸ್,356 ಬದಲಾವಣೆ ತಂದಿದ್ದು, ತುರ್ತು ಪರಿಸ್ಥಿತಿ ತಂದಿದ್ದು, ನಮ್ಮ ರೆಕಾರ್ಡ್ಸ್ ನಾವು ತೋರಿಸಿದ್ದೇವೆ, ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ 100 ರೂಪಾಯಿಗಳ ಅನುಧಾನ ಜನರಿಗೆ ತಲುಪಿದಾಗ 15 ರೂ ಮಾತ್ರ ಸಿಗತ್ತಿದ್ದು ವಿಪರ್ಯಾಸ ಎಂದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್, ಫಲಿತಾಂಶ ಕಾಂಗ್ರೆಸ್ ಗೆದ್ದಾಗ ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್, ರಾಜ್ಯಸಭಾ ಚುನಾವಣೆ ಗೆದ್ದಾಗ ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವದನ್ನು ಕಾಂಗೇಸ್ ಬೇರೆ ವೈರಿ ದೇಶದ ಪ್ರೀತಿ ತೋರಿಸುತ್ತದೆ. ಗ್ಯಾರಂಟಿ ಕಾರ್ಡ್ ನೀಡಲು ಅಂಗನವಾಡಿ, ಆಶಾ ಕಾರ್ಯಕರ್ತರು ಬಳಕೆ ಆಗುತ್ತಿದ್ದು ಚುನಾವಣಾ ಅಧಿಕಾರಿಗಳು ಇನ್ನು ಕ್ರಮ ಕೈಗೊಂಡಿಲ್ಲ , ಮೋದಿ ಅಲೆಯಲಿ ಹತ್ತು ವರ್ಷ ಭಾರಿ ಕಾಂಗ್ರಸ್ ಕೊಚ್ಚಿಹೋಗಿದೆ.ಮೂರನೇ ಭಾರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಆಗುವದನ್ನು ಯಾರು ತಪ್ಪಿಸಲು ಆಗದು ಎಂದರು.
ಪತ್ರಕರ್ತರ ಪ್ರಶ್ನೆ ಬಿಜೆಪಿ ಯಲ್ಲಿ ಒಕ್ಕಟ್ಟು ಕಾಣ್ತಾ ಇಲ್ಲ ಎಂಬ ಪ್ರಶ್ನೆಗೆ ಬಿಜೆಪಿ ಅಧಿಕಾರಕ್ಕೆ ಮತ್ತು ಮೋದಿಯವರನ್ನು ಪ್ರಧಾನಿ ಮಾಡಲು ಮುಖಂಡರು ಮತ್ತು ಕಾರ್ಯಕರ್ತರು ಒಗ್ಗೂಡಿ ಶ್ರಮಿಸುತ್ತಿದ್ದಾರೆ ಎಂದರು. ಪ್ರಜ್ವಲ್ ರೇವಣ್ಣ ಲೈಂಗಿಕ ಫೇನಡ್ರಿವ್ ಹಗರಣದ ಕುರಿತು ಕೇಳಿದಾಗ 26 ಮಾರ್ಚ್ ವಾಯರಲ ಆಗಿದ್ದು.28 ಕ್ಕೆ ಎಫ್ ಐ ಆರ್ ಮಾಡಿದ್ದಾರೆ. ಪ್ರಜ್ವಲ್ 28 ಕ್ಕೆ ವಿದೇಶಕ್ಕೆ ಹೋಗಿದ್ದಾನೆ. ಅವಾಗ ಯಾಕ ಬಂದಿಸಲಿಲ್ಲ. ಈಗಲೂ ಸರಿಯಾಗಿ ಎಫ್ ಐ ಆರ್ ಧಾಖಲಾಗಿಲ್ಲ. ಸಂತ್ರಸ್ತೆಯರ ಜೀವನ ಹಾಳಾಗಿದೆ ಅವರ ಜೀವನ ಚಿಂತಾಜಾನಕವಾಗಿದೆ. ಇದರ ಹಿಂದೆ ಯಾರ್ ಕೈವಾಡ ಇದೆ ಎಂಬುದನ್ನು ಕುಮಾರಸ್ವಾಮಿ ಅವರು ಹೇಳಿದ್ದಾರೆ ಸಮಗ್ರವಾದ ತನಿಖೆ ಆಗಿ ಸದ್ಯ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಿ ತಪ್ಪಿತಸ್ತರಿಗೆ ಉಗ್ರ ಶಿಕ್ಷೆಯಾಗಬೇಕು ರಾಹುಲ ಗಾಂಧಿ ವಿರುದ್ದ ಅಮೇರಿಕಾದಲ್ಲಿ ಯಾವದೇ ವಸ್ತುವಿನೊಂದಿಗೆ ಸಿಕ್ಕಿಬಿದ್ದಿದ್ದರು, ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯವರೊಂದಿಗೆ ಮೋಜು ಮಜಾ ಮಾಡುತ್ತಾರೆ ಎಂಬ ಸಾಮಾಜಿಕ ಜಾಲತಾಣ ಗುಲ್ಲು. ಅದಕ್ಕಾಗಿ ಪ್ರಜ್ವಲ್ ರೇವಣ್ಣ ಕೇಸ ಎಲ್ಲದಕ್ಕೂ ಸಮಗ್ರ ತನಿಖೆ ಆಗಬೇಕು ಎಂದು ಸಿ ಟಿ ರವಿ ಹೇಳಿದರು.
ಮಾಜಿ ರಾಜ್ಯ ವಕ್ತಾರ ಎಂ ಬಿ. ಜಿರಲಿ ಮಾತನಾಡಿ ವಿರೋಧಿ ಪಕ್ಷದ ವ್ಯಕ್ತಿಗಳು ಪ್ರಜ್ವಲ್ ರೇವಣ್ಣ ಕೆಸನ್ನು ಕೇಂದ್ರ ಗ್ರಹ ಸಚಿವರು ಕುಲಸೆ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿ ವ್ಯಾಟ್ಸಪ್ ಮುಕಾಂತರ ಬಿಟ್ಟರಿಸುತ್ತಿದ್ದು ಅವರ ವಿರುದ್ದ ಕೇಸ್ ಧಾಖಲಿಸಲಾಗಿದೆ.ಇನ್ನು ಸುಳ್ಳು ಹೇಳಿಕೆ ಕೊಡುವವರು ವಿರುದ್ದ ಕೇಸ್ ಹಾಕಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶುಭಾಷ ಪಾಟೀಲ, ರಾಜ್ಯ ಬಿಜೆಪಿ ಮಾಧ್ಯಮ ಸಲಹೆಗಾರ ಎಫ್ ಎಸ್. ಸಿದ್ದನಗೌಡರ, ಹಣಮಂತ ಕೊಂಗಾಲಿ ರಾಜ್ಯ , ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.