ದೆಹಲಿಯಲ್ಲಿ ಭೀಕರ ಕಾಲ್ತುಳಿತ; ಮುಂಜಾಗೃತೆಗಾಗಿ ಸಿಆರ್‌ಪಿಎಫ್‌ ನಿಯೋಜನೆ

Ravi Talawar
ದೆಹಲಿಯಲ್ಲಿ ಭೀಕರ ಕಾಲ್ತುಳಿತ; ಮುಂಜಾಗೃತೆಗಾಗಿ ಸಿಆರ್‌ಪಿಎಫ್‌ ನಿಯೋಜನೆ
WhatsApp Group Join Now
Telegram Group Join Now

ನವದೆಹಲಿ: ನವದೆಹಲಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ಬಳಿಕ ಜನದಟ್ಟಣೆ ನಿರ್ವಹಣೆಗೆ ಇದೀಗ ದೆಹಲಿ ಪೊಲೀಸರೊಂದಿಗೆ ಕೇಂದ್ರ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್‌)ಯನ್ನು ನಿಯೋಜಿಸಲಾಗಿದೆ. ಹಿರಿಯ ಸಿಆರ್​ಪಿಎಫ್‌ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜನಸಂದಣಿ ನಿರ್ವಹಣೆ ಹೆಚ್ಚಿಸಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರು 6 ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿಗಳನ್ನು ನಿಲ್ದಾಣದಲ್ಲಿ ನಿಯೋಜಿಸಿದ್ದಾರೆ. ವಿವಿಧ ಜಿಲ್ಲೆಗಳಿಂದ ಬಂದಿರುವ ಈ ಅಧಿಕಾರಿಗಳನ್ನು ವಿಶೇಷವಾಗಿ ದೇಶದ ಅತ್ಯಂತ ಜನನಿಬಿಡ ಸಾರಿಗೆ ಕೇಂದ್ರಗಳ ಪೈಕಿ ಒಂದಾದ ನವದೆಹಲಿ ರೈಲು ನಿಲ್ದಾಣದಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಈಗಾಗಲೇ ದಟ್ಟಣೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವ, ಯಶಸ್ವಿಯಾಗಿ ನಿರ್ವಹಿಸಿರುವ ವಿವಿಧ ಜಿಲ್ಲೆಗಳ ಅಧಿಕಾರಿಗಳು ಇವರಾಗಿದ್ದಾರೆ. ಇವರಲ್ಲಿ ಕೆಲವರು ನಿಲ್ದಾಣಗಳಲ್ಲಿ ಎಸ್​ಎಚ್​ಒ ಆಗಿ ಕಾರ್ಯನಿರ್ವಹಿಸಿದ್ದು, ಜನಸಂದಣಿಯಲ್ಲಿ ಲಾಜಿಸ್ಟಿಕ್​ ಮತ್ತು ಭದ್ರತಾ ಸವಾಲುಗಳನ್ನು ಅರ್ಥೈಸಿಕೊಂಡು ಕೆಲಸ ಮಾಡಲಿದ್ದಾರೆ.

WhatsApp Group Join Now
Telegram Group Join Now
Share This Article