ನೇಸರಗಿ: ಮುಂಗಾರು ಪ್ರಮುಖ ಬೆಳೆ ಶೇಂಗಾ ಬೆಳೆಗೆ ನೇಸರಗಿಯ ಸೋಮನಗೌಡ ಪಾಟೀಲ ಅವರ ಹೊಲದಲ್ಲಿ ಕಟ್ಟಿಣ , ಸೂಕ್ಷ್ಮ ಪೋಷಕಾಂಷದ ಕೊರತೆ,ಬಸಪ್ಪ ಮಾಳನ್ನವರ ಅವರ ಹೆಸರು ಬೆಳೆಗೆ ಹಳದಿ ನಂಜಿನಿ ರೋಗ, ಮಲ್ಲೇಶ ಮಾಳನ್ನವರ ಅವರ ಹೆಸರು ಬೆಳೆಗೆ ಪೋಷಕಾಂಷದ ಕೊರತೆ, ಶಿವಲಿಂಗಪ್ಪ ಮಾಳನ್ನವರ ಹೊಲದಲ್ಲಿ ಸೋಯಾಬಿನ ಬೆಳೆಗೆ ಎಲೆ ತಿನ್ನುವ ಕಿಟ್ಟದ ಭಾದೆ, ಮುರ್ಕಿಬಾವಿ ಗ್ರಾಮದ ಸಿದ್ರಾಮ್ ಉಳವಿ ಅವರ ಶೇಂಗಾ ಬೆಳೆಗೆ ಎಲೆ ತಿನ್ನುವ ಕಾಯಿಲೆ, ಕಲಕೊಪ್ಪದ ನಾಗನಗೌಡ ಪಾಟೀಲ ಅವರ ಹಬ್ಬು ಶೇಂಗಾ ಬೆಳೆಗೆ ಪೋಷಕಾಂಷದ ಕೊರತೆ, ಸೂರ್ಯಕಾಂತಿ ಹಳದಿ ಬಣ್ಣಕ್ಕೆ ತಿರುಗಿರುವದು ಇನ್ನು ಅನೇಕ ರೋಗ ಪೀಡಿತ ರೈತರ ಭೂಮಿಗಳಿಗೆ ಬೆಳೆ ಪೀಡೆ ಸರ್ವೇಕ್ಷಣ ತಂಡ ಭೆಟ್ಟಿ ನೀಡಿ, ಪರಿಶೀಲಿಸಿ, ಅವುಗಳ ರೋಗಮುಕ್ತಕ್ಕೆ ಕ್ರಿಮಿನಾಶಕ ಹೆಸರು ಮತ್ತು ನೀರಿನಲ್ಲಿ ಬೇರೆಸುವ ವಿಧಾನಗಳನ್ನು ರೈತರಿಗೆ ತಿಳಿಸಿ ಕೊಟ್ಟರು.
ಈ ಪರಿಶೀಲನೆ ತಂಡದಲ್ಲಿ ಮತ್ತಿಕೊಪ್ಪ ಕೆ ಎಲ್ ಇ ಕೆ ವಿ ಕೆ ಸಸ್ಯ ರೋಗ ತಜ್ಞ ಡಾ.ಎಸ್ ಎಸ್. ಹಿರೇಮಠ, ಕೆ ವಿ ಕೆಯ ಬೇಸಾಯ ತಜ್ಞರಾದ ಜಿ ವಿ. ವಿಶ್ವನಾಥ, ಧಾರವಾಡ ಮುಖ್ಯ ಸಂಶೋಧನ ಕೇಂದ್ರದ ಕೀಟ ತಜ್ಞರಾದ ವಿ ಎಸ್. ಹೋಗಾರ, ಬೆಳಗಾವಿ ಕೃಷಿ ತಜ್ಞರಾದ ಚಂದ್ರಶೇಖರ ಹೋಗಾರ, ಬೈಲಹೊಂಗಲ ತಾಲೂಕ ಕೃಷಿ ಅಧಿಕಾರಿ ಬಸವರಾಜ್ ದಳವಾಯಿ, ನೇಸರಗಿ ಕೃಷಿ ಅಧಿಕಾರಿ ಆರ್ ಎಮ್. ಕುಂಬಾರ ಮತ್ತು ಕೃಷಿ ಸಂಜೀವಿನಿ ಸಿಬ್ಬಂದಿ, ನೇಸರಗಿ ಹೋಬಳಿ ಭಾಗದ ರೈತರು ಉಪಸ್ಥಿತರಿದ್ದರು.