“ಆಂತರಿಕ ದೂರು ಸಮಿತಿ ರಚಿಸಿ, ಮಾಹಿತಿ ನೀಡಿ”

Ravi Talawar
“ಆಂತರಿಕ ದೂರು ಸಮಿತಿ ರಚಿಸಿ, ಮಾಹಿತಿ ನೀಡಿ”
WhatsApp Group Join Now
Telegram Group Join Now


ಬಳ್ಳಾರಿ,ಸೆ.02 ಜಿಲ್ಲೆಯಲ್ಲಿ 10 ಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು, ಕಾರ್ಖಾನೆಗಳು ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಿ, ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಮಾಹಿತಿ ಹಾಗೂ ಆದೇಶದ ಪ್ರತಿಯನ್ನು ಸಲ್ಲಿಸಬೇಕು ಎಂದು ಬಳ್ಳಾರಿ ಉಪವಿಭಾಗ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಅಧಿನಿಯಮ 2013 ರನ್ವಯ ಆಂತರಿಕ ದೂರು ಸಮಿತಿ  ರಚಿಸುವುದು ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಕೆಲವು ಸಂಸ್ಥೆಗಳು ದೂರು ಸಮಿತಿ ರಚಿಸದೇ ಇರುವುದು ಕಂಡುಬAದಿದೆ.

ಹಾಗಾಗಿ ಸಂಬAಧಿಸಿದ ಸಂಸ್ಥೆಗಳು ಕೂಡಲೇ ಆಂತರಿಕ ದೂರು ಸಮಿತಿ ರಚಿಸಿ, ಅದರ ಮಾಹಿತಿಯನ್ನು ಜಿಲ್ಲಾಧಿಕಾರಿಯವರ ಕಚೇರಿ ಮತ್ತು ನಗರದ ಕೌಲ್ ಬಜಾರ್ ನ ಮಹಮ್ಮದೀಯ ಕಾಲೇಜು ಹಿಂಭಾಗದ ಕಾರ್ಮಿಕ ಭವನದ ಬಳ್ಳಾರಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article