ವೀರ ಸಾವರ್ಕರ್​ ವಿರುದ್ಧ ವಿವಾದಾತ್ಮಕ ಹೇಳಿಕೆ: ರಾಹುಲ್​ ಗಾಂಧಿಗೆ ನ್ಯಾಯಾಲಯ ಸಮನ್ಸ್​ ಜಾರಿ

Ravi Talawar
ವೀರ ಸಾವರ್ಕರ್​ ವಿರುದ್ಧ ವಿವಾದಾತ್ಮಕ ಹೇಳಿಕೆ: ರಾಹುಲ್​ ಗಾಂಧಿಗೆ ನ್ಯಾಯಾಲಯ ಸಮನ್ಸ್​ ಜಾರಿ
WhatsApp Group Join Now
Telegram Group Join Now

ಪುಣೆ: ಸ್ವಾತಂತ್ರ ವೀರ ಸಾವರ್ಕರ್​ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್​ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪುಣೆ ಸೆಷನ್ಸ್​ ನ್ಯಾಯಾಲಯ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ಸಮನ್ಸ್​ ಜಾರಿ ಮಾಡಿದೆ.

ರಾಹುಲ್ ಗಾಂಧಿ ಅವರು 2023 ಮಾರ್ಚ್​ 5ರಂದು ಲಂಡನ್​ನಲ್ಲಿ ಸಾವರ್ಕರ್​ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. 2023 ಏಪ್ರಿಲ್​ನಲ್ಲಿ ಸಾವರ್ಕರ್​ ಅವರ ಮೊಮ್ಮಗ ಸತ್ಯಕಿ ಸಾವರ್ಕರ್​ ಅವರು ಈ ಬಗ್ಗೆ ಮೊಕದ್ದಮೆ ಹೂಡಿದ್ದರು. ಇದೀಗ ಆಗಸ್ಟ್​ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ರಾಹುಲ್​ ಗಾಂಧಿಗೆ ಕೋರ್ಟ್​ ಸಮನ್ಸ್​ ನೀಡಿದೆ.

ಈ ಬಗ್ಗೆ ವಕೀಲ ಸಂಗ್ರಾಮ್​ ಕೋಲಾಟ್ಕರ್​ ಮಾತನಾಡಿ, “ಕಳೆದ ವರ್ಷ ಲಂಡನ್​ನಲ್ಲಿ ಸ್ವಾತಂತ್ರ ಹೋರಾಟಗಾರ ಸಾವರ್ಕರ್​ ಅವರ ಬಗ್ಗೆ ರಾಹುಲ್​ ಗಾಂಧಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸಾವರ್ಕರ್​ ಹಾಗೂ ಅವರ ಸ್ನೇಹಿತರು ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಥಳಿಸುತ್ತಿದ್ದರು. ಆಗ ಸಾವರ್ಕರ್​ ಖುಷಿಯಾಗಿದ್ದರು ಎಂದು ರಾಹುಲ್​ ಗಾಂಧಿ ಭಾಷಣದ ವೇಳೆ ಹೇಳಿದ್ದರು. ಈ ಬಗ್ಗೆ ಸೆಕ್ಷನ್​ 209ರ ಅಡಿಯಲ್ಲಿ ಪುಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 19 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪುಣೆ ಸೆಷನ್ಸ್​ ಕೋರ್ಟ್​ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದೆ” ಎಂದು ಕೋಲಾಟ್ಕರ್​ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article